ETV Bharat / state

ಎಲೆಕ್ಷನ್ ಕಮಿಷನರ್ ರಾಜಕೀಯ ಒತ್ತಡಕ್ಕೆ ಮಣಿದಿರಬಹುದು: ಪ್ರಕಾಶ್ ಹುಕ್ಕೇರಿ - Election Commissioner political pressure

ಚುನಾವಣಾ ಆಯೋಗದ ಮೇಲೆ ಒತ್ತಡ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಏಕೆ ಮಾಡಿಲ್ಲ ಎಂಬುದಕ್ಕೆ ಕಾರಣ ಏನು? ಎಲೆಕ್ಷನ್ ಕಮಿಷನರ್ ರಾಜಕೀಯ ಒತ್ತಡಕ್ಕೆ ಮಣಿದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ ಎಂದು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹೇಳಿದರು.

ಪ್ರಕಾಶ್ ಹುಕ್ಕೇರಿ
ಪ್ರಕಾಶ್ ಹುಕ್ಕೇರಿ
author img

By

Published : Mar 11, 2021, 3:12 PM IST

ಬೆಳಗಾವಿ: ದೇಶದ ಹಲವೆಡೆ ಚುನಾವಣೆ ಘೋಷಣೆ ಮಾಡಲಾಗಿದೆ. ಆದ್ರೆ ಕರ್ನಾಟಕದಲ್ಲಿ ಈವರೆಗೂ ಚುನಾವಣೆ ದಿನಾಂಕ ಪ್ರಕಟಿಸಿಲ್ಲ. ಹೀಗಾಗಿ ಎಲೆಕ್ಷನ್ ಕಮಿಷನರ್ ರಾಜಕೀಯ ಒತ್ತಡಕ್ಕೆ ಮಣಿದಿರಬಹುದು ಎಂದು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಲೋಕಸಭೆ ಉಪಚುನಾವಣೆಗಳನ್ನು ಹಾಗೂ ವಿಧಾನಸಭೆ ಚುನಾವಣೆಗಳನ್ನು ಘೋಷಣೆ ಮಾಡಿದ್ರು‌. ಆದ್ರೆ ರಾಜ್ಯದ 3 ವಿಧಾನಸಭಾ, ಒಂದು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಕರ್ನಾಟಕದಲ್ಲಿ ಈವರೆಗೂ ಉಪಚುನಾವಣೆ ದಿನಾಂಕ ಘೋಷಣೆ ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪನವರ ಬಜೆಟ್ ಮಂಡನೆಯಾದ ಬಳಿಕ ಘೋಷಣೆ ಮಾಡಬೇಕೆಂಬ ವಿಚಾರ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ

ಚುನಾವಣಾ ಆಯೋಗ ಪ್ರತ್ಯೇಕ ಅಧಿಸೂಚನೆ ಹೊರಡಿಸುವ ಅವಶ್ಯಕತೆ ಏನು? ಐದು ರಾಜ್ಯಗಳ ಚುನಾವಣೆ ಜೊತೆ ಒಂದು ಲೋಕಸಭಾ ಉಪಚುನಾವಣೆ ಅನೌನ್ಸ್ ಮಾಡಿದ್ದಾರೆ. ಚುನಾವಣಾ ಆಯೋಗದ ಮೇಲೆ ಒತ್ತಡ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಏಕೆ ಮಾಡಿಲ್ಲ ಎಂಬುದಕ್ಕೆ ಕಾರಣ ಏನು? ಎಲೆಕ್ಷನ್ ಕಮಿಷನರ್ ರಾಜಕೀಯ ಒತ್ತಡಕ್ಕೆ ಮಣಿದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ ಎಂದರು.

ಬೆಳಗಾವಿ ಲೋಕಸಭೆ ಉಪಚುನಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ಯಾರಿಗೆ ಟಿಕೆಟ್ ಕೊಡುತ್ತದೆ ಗೊತ್ತಿಲ್ಲ. ಹೈಕಮಾಂಡ್ ತಗೆದುಕೊಂಡ ನಿರ್ಣಯಕ್ಕೆ ನಾನು ಬದ್ಧನಾಗಿ ಇರುತ್ತೇನೆ. ಕಾಂಗ್ರೆಸ್​ನಲ್ಲಿ ಯಾರಿಗೆ ಟಿಕೆಟ್ ಕೊಡ್ತಾರೋ ಅವರ ಪರವಾಗಿ ಇರ್ತೀನಿ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹೇಳಿದರು.

ಇದನ್ನೂ ಓದಿ.. ಜೆಡಿಎಸ್​​ನಲ್ಲಿ ಹೈ ಕಮಾಂಡ್ ಇಲ್ಲ.. ಎಲ್ಲರೂ ಹೈ ಕಮಾಂಡ್​​ಗಳೇ: ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.