ಬೆಳಗಾವಿ : ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಬೇಕೆನ್ನುವ ಬಗ್ಗೆ ಪಕ್ಷ ಹಾಗೂ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಜಿಲ್ಲೆಯ ಗೋಕಾಕ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಬೇಕೆನ್ನುವ ಬಗ್ಗೆ ಚರ್ಚೆ ನಡೆದಿದ್ದು, ಕೆಲವು ಚುನಾವಣೆ ಸೇರಿ ಬೇರೆ ಬೇರೆ ಕಾರಣಗಳಿಂದ ಮಂತ್ರಿ ಸ್ಥಾನ ನೀಡುವುದು ತಡವಾಗಿದೆ. ರಮೇಶ್ ಜಾರಕಿಹೊಳಿಗೆ ಪಕ್ಷದ ಒಳಗಡೆ ಯಾವುದೇ ವಿರೋಧ ಇಲ್ಲ. ನಾವು ಜೊತೆಯಲ್ಲೇ ಇದ್ದೇವೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣಾ ವಿಚಾರ ಸಂಬಂಧ ಮಾತನಾಡಿದ ಅವರು, ಪಠ್ಯಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಯಾವ ಯಾವ ಪಾಠಗಳನ್ನು ಸೇರಿಸಿದರು, ಏನೇನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ, ಪಠ್ಯಪುಸ್ತಕ ಸಮಿತಿಗಳನ್ನು ರಚನೆ ಮಾಡಿ ಪಠ್ಯ ಪರಿಷ್ಕರಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಎಲ್ಲೂ ಇತಿಹಾಸ ತಿರುಚುವ ಕೆಲಸ ಮಾಡಿಲ್ಲ. ಕೆಲವು ಪಠ್ಯಗಳ ಜೋಡಣೆ ಮಾಡಲಾಗುತ್ತಿದೆ. ಇದರಲ್ಲಿ ಕಾಂಗ್ರೆಸ್, ಸಿದ್ದರಾಮಯ್ಯ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಟೀಲ್ ಆರೋಪಿಸಿದರು.
ಓದಿ : ಕಟೀಲ್ ಅಣ್ಣೋರು ತಮ್ಮ ಪಕ್ಷದಲ್ಲಿ ಇರೋದನ್ನು ಸರಿ ಮಾಡಿಕೊಳ್ಳಲಿ: ಹೆಬ್ಬಾಳ್ಕರ್ ತಿರುಗೇಟು