ಚಿಕ್ಕೋಡಿ: ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಹಜಾನ ಡೊಂಗರಗಾಂವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಕೈ ನಾಯಕರು ಸಫಲರಾಗಿದ್ದಾರೆ.
ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್, ಡೊಂಗರಗಾಂವ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿ, ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರಿಂದ ನಾಮಪತ್ರ ಹಿಂಪಡೆದು ಗಜಾನನ ಮಂಗಸೂಳಿಯವರಿಗೆ ಬೆಂಬಲ ನೀಡುವುದಾಗಿ ಬಂಡಾಯ ಅಭ್ಯರ್ಥಿ ಶಹಜಾನ ಡೊಂಗರಗಾಂವ ತಿಳಿಸಿದ್ದಾರೆ.
ಒಟ್ಟು ಅಥಣಿ ಕ್ಷೇತ್ರದಲ್ಲಿನ ಮೂವರು ಪಕ್ಷೇತರ ಅಭ್ಯರ್ಥಿಗಳು ಸಹ ನಾಮಪತ್ರ ಹಿಂಪಡೆದಿದ್ದು, ಮೂವರು ಅಭ್ಯರ್ಥಿಗಳು ಕಾಂಗ್ರೆಸ್ನ ಗಜಾನನ ಮಂಗಸೂಳಿಯವರಿಗೆ ತಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ.