ETV Bharat / state

ಶ್ರಾವಣ ಮಾಸಕ್ಕೂ ಕೊರೊನಾ ಕಂಟಕ ; ಅಥಣಿಯ ದೇವಾಲಯಗಳು ಬಂದ್! - ಕೊರೊನಾ ಲಾಕ್​ಡೌನ್

ಶ್ರಾವಣ ಮಾಸದಲ್ಲಿ ಜನರಿಂದ ಕಿಕ್ಕಿರಿದು ತುಂಬಿದ್ದ ದೇವಸ್ಥಾನಗಳು ಬಿಕೋ ಎನ್ನುತ್ತಿವೆ. ತಾಲೂಕಿನಲ್ಲಿ ಲಾಕ್​ಡೌನ್ ಆದೇಶದಂತೆ ಪ್ರಮುಖ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ..

Temples
ದೇವಸ್ಥಾನ
author img

By

Published : Jul 21, 2020, 7:34 PM IST

ಅಥಣಿ(ಬೆಳಗಾವಿ) : ಜಗತ್ತಿನಾದ್ಯಂತ ಕೊರೊನಾ ಅಬ್ಬರಕ್ಕೆ ಮಾನವ ಕುಲವು ತಬ್ಬಿಬ್ಬಾಗಿ ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ದೇಶದ ಹಿಂದೂಗಳ ಪವಿತ್ರ ಮಾಸ ಶ್ರಾವಣ ಮಾಸಕ್ಕೂ ಕೊರೊನಾ ಅಲೆ ಅಪ್ಪಳಿಸಿ ಅದರ ಆಚರಣೆಗೆ ಬಿಡುತ್ತಿಲ್ಲ ಈ ಮಹಾಮಾರಿ.

ಅಥಣಿಯಲ್ಲಿ ದೇವಾಲಯಗಳ ಬಾಗಿಲು ಮುಚ್ಚಿರುವುದು

ಇವತ್ತು ಶ್ರಾವಣ ಮಾಸದ ಮೊದಲನೇ ದಿನ. ಹಲವಾರು ಪುಣ್ಯ ಕ್ಷೇತ್ರಗಳ ದರ್ಶನ ಮಾಡುವ ಆಸ್ತಿಕರಿಗೆ ಕೊರೊನಾ ಸಂಕಷ್ಟ ಆವರಿಸಿದೆ. ತಾಲೂಕಿನ ಪ್ರಮುಖ ದೇವಾಲಯಗಳಾದ ಸಿದ್ದೇಶ್ವರ ಮಂದಿರ, ಕಿಳೇಗಾಂವ್ ಸ್ವಯಂಭು ಬಸವೇಶ್ವರ ದೇವಾಲಯ, ರಾಮತೀರ್ಥದ ಉಮಾ ರಾಮೇಶ್ವರ ದೇವಾಲಯಗಳು ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಸರ್ಕಾರ ನಿರ್ದೇಶನದಂತೆ ಬಾಗಿಲು ಬಂದ್ ಮಾಡಿ ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ.

ಶ್ರಾವಣ ಮಾಸದಲ್ಲಿ ಜನರಿಂದ ಕಿಕ್ಕಿರಿದು ತುಂಬಿದ್ದ ದೇವಸ್ಥಾನಗಳು ಬಿಕೋ ಎನ್ನುತ್ತಿವೆ. ತಾಲೂಕಿನಲ್ಲಿ ಲಾಕ್​ಡೌನ್ ಆದೇಶದಂತೆ ಪ್ರಮುಖ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಹಿಂದುಗಳ ನಂಬಿಕೆ ಪ್ರಕಾರ ಶ್ರಾವಣ ಮಾಸ ಪವಿತ್ರ ತಿಂಗಳು, ಈ ತಿಂಗಳಲ್ಲಿ ಪ್ರಮುಖ ದೇವಾಲಯ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಪ್ರಕಾರ ದೇವಾಲಯಕ್ಕೆ ತೆರಳುವ ಭಕ್ತಗಣಕ್ಕೆ ಈ ಮಹಾ ಮಾರಿ ತಡೆ ಮಾಡಿ ತನ್ನ ರೌದ್ರಾವತಾರ ಮುಂದುವರೆಸಿದೆ.

ಇನ್ನು, ಕೊರೊನಾ ಆತಂಕ ನಡುವೆಯೂ ಕೆಲವು ಭಕ್ತರು ದೇವಸ್ಥಾನದ ಮುಖ್ಯ ದ್ವಾರದಲ್ಲಿ ನಮಸ್ಕಾರ ಮಾಡಿ ಪೂಜೆ ಕೈಂಕರ್ಯವನ್ನು ಸಲ್ಲಿಸಿ, ನಮ್ಮ ಭಕ್ತಿ ಪರಾಕಾಷ್ಠೆ ಮೆರೆದರು. ಉತ್ತರ ಕರ್ನಾಟಕದಲ್ಲಿ ಈ ಮಾಸವನ್ನು ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಮಠ-ಮಂದಿರಗಳಲ್ಲಿ ಶ್ರಾವಣ ಮಾಸದ ಒಂದು ತಿಂಗಳ ಕಾಲ ಪುರಾಣ, ಪ್ರವಚನ, ಕೀರ್ತನೆ, ಭಜನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಕೊರೊನಾ ಲಾಕ್​ಡೌನ್​ ಪರಿಣಾಮವಾಗಿ ಎಲ್ಲವೂ ಸ್ತಬ್ಧಗೊಂಡಿರುವುದು ವಿಪರ್ಯಾಸವೇ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.