ETV Bharat / state

ವೇತ‌ನ ತಾರತಮ್ಯ ಹೋಗಲಾಡಿಸಿ, ಸೇವಾ ಭದ್ರತೆ ಒದಗಿಸಿ : ವಿಶೇಷಚೇತನ ಶಾಲಾ ಶಿಕ್ಷಕರ ಆಗ್ರಹ - ಪ್ರಧಾನ ಕಾರ್ಯದರ್ಶಿ ಬಾಹುಬಲಿ ಸಂಕಣ್ಣನವರ್

ವೇತನ ತಾರತಮ್ಯ ಹೋಗಲಾಡಿಸಿ ಸೇವಾಭದ್ರತೆ ಒದಗಿಸುವಂತೆ ಒತ್ತಾಯಿಸಿ ವಿಶೇಷಚೇತನರ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಧರಣಿ ನಡೆಸಿದರು.

teachers-protest-infront-of-suvarnasoudha
ವೇತ‌ನ ತಾರತಮ್ಯ ಹೋಗಲಾಡಿಸಿ, ಸೇವಾ ಭದ್ರತೆ ಒದಗಿಸಿ : ವಿಶೇಷಚೇತನ ಶಾಲಾ ಶಿಕ್ಷಕರ ಆಗ್ರಹ
author img

By ETV Bharat Karnataka Team

Published : Dec 4, 2023, 7:50 PM IST

ವೇತ‌ನ ತಾರತಮ್ಯ ಹೋಗಲಾಡಿಸಿ, ಸೇವಾ ಭದ್ರತೆ ಒದಗಿಸಿ : ವಿಶೇಷಚೇತನ ಶಾಲಾ ಶಿಕ್ಷಕರ ಆಗ್ರಹ

ಬೆಳಗಾವಿ : ವಿಶೇಷ ಚೇತನರ ಶಾಲೆಯ ಶಿಕ್ಷಕರ, ಶಿಕ್ಷಕೇತರರ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್ ಬಳಿ ವಿಶೇಷಚೇತನರ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಧರಣಿ ನಡೆಸಿದರು.

ರಾಜ್ಯದಲ್ಲಿ 1982ರ ಅನುದಾನ ನೀತಿ ಸಂಹಿತೆಯಲ್ಲಿ ನಡೆಯುತ್ತಿರುವ 34 ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಸೌಲಭ್ಯಗಳಿವೆ. ಆದರೆ 2010-11 ಅವಧಿಯಲ್ಲಿ ಜಾರಿಗೊಳಿಸಿದ ಶಿಶು ಕೇಂದ್ರೀಕೃತ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 136 ಶಾಲೆಗಳಲ್ಲಿ ನಾವು ಕೆಲಸ ನಿರ್ವಹಿಸುತ್ತಿದ್ದು, ನಾವೆಲ್ಲ ವಿಶೇಷ ತರಬೇತಿ ಪಡೆದ ಶಿಕ್ಷಕರಾಗಿದ್ದೇವೆ. ನಮಗೆ ಯಾವುದೇ ಭದ್ರತೆ ಇಲ್ಲ. ಜೀವನ ನಡೆಸಲು ಸಾಕಾಗುವಷ್ಟು ವೇತನವೂ ಸಿಗುತ್ತಿಲ್ಲ. ಇದರಿಂದ ಜೀವನ ನಡೆಸುವುದು ದುಸ್ತರವಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು. ವಿಶೇಷಚೇತನರ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರರ ರಾಜ್ಯ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಈ ಅಧಿವೇಶನ ಸಂದರ್ಭದಲ್ಲಿ ಧರಣಿ ಕುಳಿತಿದ್ದಾರೆ.

ಈ ವೇಳೆ ಮಾತನಾಡಿದ ವಿಶೇಷ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಹುಬಲಿ ಸಂಕಣ್ಣನವರ್​, 40 ವರ್ಷಗಳಿಂದ ಕೆಲಸ ಮಾಡುವವರು ಮತ್ತು ಈಗ ನೇಮಕ ಆದವರಿಗೂ 20,250 ರೂ. ವೇತನ ನಿಗದಿಪಡಿಸಿದ್ದಾರೆ.‌ ಅಲ್ಲದೇ ಇವತ್ತೆ ನಮ್ಮನ್ನು ಕೆಲಸದಿಂದ ತೆಗೆದುಹಾಕಬಹುದು. ಹಾಗಾಗಿ, ವೇತನ ತಾರತಮ್ಯ ಹೋಗಲಾಡಿಸಿ, ಸೇವಾ ಭದ್ರತೆ ನೀಡಬೇಕು. ಸಾಮಾನ್ಯ ಶಿಕ್ಷಕರಿಗೆ ಸಿಗುವ ವೇತನ ನೀಡಿ, ವಿಶೇಷ ಚೇತನ ಮಕ್ಕಳಿಗೆ ಸೇವೆ ಸಲ್ಲಿಸಲು ಮತ್ತಷ್ಟು ಅವಕಾಶ ಮಾಡಿಕೊಡಬೇಕು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಕಾಂಗ್ರೆಸ್ ನಮ್ಮನ್ನು ಹೊರಗಿಟ್ಟಾಗ ಪ್ರಧಾನಿ ಮೋದಿ, ಅಮಿತ್​ ಶಾ ಸ್ವಾಗತಿಸಿದರು: ಹೆಚ್​ ಡಿ ದೇವೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.