ETV Bharat / state

ದೆಹಲಿಯಿಂದ ಬೆಳಗಾವಿಗೆ ಮರಳಿದ ಸುರೇಶ್​ ಅಂಗಡಿ ಕುಟುಂಬ: ಬಿಕ್ಕಿ ಬಿಕ್ಕಿ ಅತ್ತ ಸಂಬಂಧಿಕರು - Suresh angady family

ಸುರೇಶ್​ ಅಂಗಡಿ ಪತ್ನಿ ಮಂಗಳಾ, ಪುತ್ರಿಯರಾದ ಸ್ಫೂರ್ತಿ, ಶ್ರದ್ಧಾ, ಇಬ್ಬರು ಅಳಿಯಂದಿರು ಹಾಗೂ ಬೀಗರು ಆಗಿರುವ ಸಚಿವ ಜಗದೀಶ್ ಶೆಟ್ಟರ್ ದಂಪತಿ ದೆಹಲಿಯಿಂದ ಬೆಳಗಾವಿಗೆ ಆಗಮಿಸಿದರು.

Suresh angady family came back from Delhi to Belgaum
ದೆಹಲಿಯಿಂದ ಬೆಳಗಾವಿಗೆ ಮರಳಿದ ಸುರೇಶ್​ ಅಂಗಡಿ ಕುಟುಂಬ
author img

By

Published : Sep 25, 2020, 10:26 AM IST

ಬೆಳಗಾವಿ: ಕೊರೊನಾಗೆ ತುತ್ತಾಗಿ ಚಿಕಿತ್ಸೆ ಫಲಿಸದೆ ವಿಧಿವಶರಾದ ಸುರೇಶ್​ ಅಂಗಡಿ ಅವರ ಅಂತ್ಯಕ್ರಿಯೆ ಗುರುವಾರ ದೆಹಲಿಯಲ್ಲಿ ನಡೆಯಿತು. ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಂಗಡಿ ಕುಟುಂಬ ಸದಸ್ಯರು ಇಂದು ಬೆಳಗ್ಗೆ ದೆಹಲಿಯಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಸುರೇಶ್​ ಅಂಗಡಿ ಪತ್ನಿ ಮಂಗಳಾ, ಪುತ್ರಿಯರಾದ ಸ್ಫೂರ್ತಿ, ಶ್ರದ್ಧಾ, ಇಬ್ಬರು ಅಳಿಯಂದಿರು ಹಾಗೂ ಬೀಗರು ಆಗಿರುವ ಸಚಿವ ಜಗದೀಶ್ ಶೆಟ್ಟರ್ ದಂಪತಿ ದೆಹಲಿಯಿಂದ ಬೆಳಗಾವಿಗೆ ಹಿಂದಿರುಗಿದರು. ಸುರೇಶ್​ ಅಂಗಡಿ ನೆನೆದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ಕಣ್ಣೀರು ಹಾಕಿದರು.

ಬೆಳಗಾವಿಗೆ ಮರಳಿದ ಸುರೇಶ್​ ಅಂಗಡಿ ಕುಟುಂಬ

ಇಂದು ಮಧ್ಯಾಹ್ನ 12ಕ್ಕೆ ನಡೆಯಲಿರುವ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಇವರು ಪಾಲ್ಗೊಳ್ಳಲಿದ್ದಾರೆ. ಮನೆಗೆ ಆಗಮಿಸುತ್ತಿದ್ದಂತೆ ಸುರೇಶ್​ ಅಂಗಡಿ ಅವರ ಪತ್ನಿ, ಪುತ್ರಿಯರು ಬಿಕ್ಕಿ-ಬಿಕ್ಕಿ ಅತ್ತು, ಕುಟುಂಬಸ್ಥರನ್ನು ಅಪ್ಪಿಕೊಂಡು ತಮ್ಮ ನೋವನ್ನು ತೋಡಿಕೊಂಡರು. ಸುರೇಶ್ ಅಂಗಡಿ ಸಮಾಧಿ ಸ್ಥಳದಿಂದ ಕುಟುಂಬಸ್ಥರು ಮಣ್ಣು ತಂದಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ಮೂರನೇ ದಿನದ ಕಾರ್ಯವನ್ನು ಕುಟುಂಬ ಸದಸ್ಯರು ನೆರವೇರಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.