ETV Bharat / state

ರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಸ್ಯಾನಿಟೈಸರ್ ಬಳಕೆ.. ಕೇಂದ್ರ ಸಚಿವ ಅಂಗಡಿ - Corona effects

ದೇಶದ ನಾಗರಿಕರ ಆರೋಗ್ಯ ರಕ್ಷಣೆ ನಮ್ಮ ಜವಾಬ್ದಾರಿ. ವೈರಸ್ ಹರಡದಂತೆ ಜಗತ್ತಿನಲ್ಲಿಯೇ ಭಾರತ ಅತ್ಯಂತ ಯಶಸ್ವಿ ಕ್ರಮಕೈಗೊಂಡಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

Suresh angadi
ರಾಜ್ಯದ ಎಲ್ಲ ನಿಲ್ದಾಣಗಳಲ್ಲೂ ಸ್ಯಾನಿಟೈಸರ್ ಬಳಕೆ: ಅಂಗಡಿ
author img

By

Published : Mar 15, 2020, 8:10 PM IST

ಬೆಳಗಾವಿ: ಕೊರೊನಾ ವೈರಸ್ ತಡೆಗಟ್ಟಲು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ರಾಜ್ಯದ ಎಲ್ಲಾ ನಿಲ್ದಾಣಗಳಲ್ಲೂ ಸ್ಯಾನಿಟೈಸರ್ ಬಳಕೆ.. ಕೇಂದ್ರ ಸಚಿವ ಅಂಗಡಿ

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ನಾಗರಿಕರ ಆರೋಗ್ಯ ರಕ್ಷಣೆ ನಮ್ಮ ಜವಾಬ್ದಾರಿ. ವೈರಸ್ ಹರಡದಂತೆ ಜಗತ್ತಿನಲ್ಲಿಯೇ ಭಾರತ ಅತ್ಯಂತ ಯಶಸ್ವಿ ಕ್ರಮಕೈಗೊಂಡಿದೆ ಎಂದರು.

ಕಲಬುರ್ಗಿಯಲ್ಲಿ ಕರ್ಫ್ಯೂ ಜಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯವು ಸೇರಿದಂತೆ ದೇಶಾದ್ಯಂತ ಎಲ್ಲ ರೈಲು ನಿಲ್ದಾಣಗಳಲ್ಲಿಯೂ ಸ್ಯಾನಿಟೈಸರ್ ಬಳಕೆ ಮತ್ತು ಮೇಲಿಂದ ಮೇಲೆ ಶುಚಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈಲು ಸಂಚಾರ ಸ್ಥಗಿತಗೊಳಿಸಲಾಗುವುದಿಲ್ಲ. ಎಂದಿನಂತೆ ಸಂಚಾರ ಮಾಡಲಿವೆ. ವೈರಸ್ ಹರಡದಂತೆ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದರು.

ಜನರು ಪ್ರಬುದ್ಧರಾಗಿದ್ದಾರೆ. ಜನತೆಯೂ ಮುಂಜಾಗ್ರತೆ ವಹಿಸಿದರೆ, ಮತ್ತಷ್ಟು ಪರಿಣಾಮಕಾರಿಯಾಗಿ ವೈರಸ್ ಹರಡದಂತೆ ನಿಯಂತ್ರಣ ಮಾಡಬಹುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.