ETV Bharat / state

ಹಲ್ಲಿ ಬಿದ್ದ ಸಾರು ಸೇವನೆ: ಬಾಲಕರ ವಸತಿ ನಿಲಯದ 23 ವಿದ್ಯಾರ್ಥಿಗಳು ಅಸ್ವಸ್ಥ - ಈಟಿವಿ ಭಾರತ್ ಕನ್ನಡ ಸುದ್ದಿ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದ ಹಿಂದುಳಿದ ವರ್ಗಗಳ ಮೆಟ್ರಿಕ್​ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಘಟನೆ ನಡೆದಿದೆ.

23 ವಿದ್ಯಾರ್ಥಿಗಳು ಅಸ್ವಸ್ಥ
23 ವಿದ್ಯಾರ್ಥಿಗಳು ಅಸ್ವಸ್ಥ
author img

By

Published : Jun 19, 2023, 7:05 PM IST

ಬೆಳಗಾವಿ : ಹಲ್ಲಿ ಬಿದ್ದ ಸಾರು ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಸವದತ್ತಿ ತಾಲ್ಲೂಕಿನ ಹಾರೂಗೊಪ್ಪ ಗ್ರಾಮದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನಡೆದಿದೆ. ಇಂದು (ಸೋಮವಾರ) ಬೆಳಗ್ಗೆ ವಿದ್ಯಾರ್ಥಿಗಳು ಉಪಹಾರ ಸೇವಿಸಿದ್ದರು. ಚಪಾತಿ, ಅನ್ನ ಸಾರು ನೀಡಲಾಗಿತ್ತು. ಸಾರಿಗೆ ಹಲ್ಲಿ ಬಿದ್ದಿದೆ. ಅದೇ ಸಾರನ್ನು ವಿದ್ಯಾರ್ಥಿಗಳು ಸೇವಿಸಿದ್ದು ಕೆಲ ಸಮಯದ ನಂತರ ಹೊಟ್ಟೆ ನೋವು ಕಾಣಿಸಿಕೊಂಡಿದೆ.

ತಕ್ಷಣವೇ ಆ ವಿದ್ಯಾರ್ಥಿಗಳನ್ನು ವಸತಿ ನಿಲಯದ ಸಿಬ್ಬಂದಿ ಸಮೀಪದ ಇಂಚಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೆಲವು ಮಕ್ಕಳು ಚೇತರಿಸಿಕೊಂಡಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿದ್ದಾರೆ.

ಸವದತ್ತಿ ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಸುದ್ದಿ ತಿಳಿಯುತ್ತಿದ್ದಂತೆ ಹಾಸ್ಟೆಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು ಆರೋಗ್ಯವಾಗಿದ್ದಾರೆ. ಯಾರಿಗೂ ಅಪಾಯವಿಲ್ಲ ಎಂದು ಇಂಚಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ.

ವಸತಿ‌ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ : ಇನ್ನೊಂದೆಡೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಕಳೆದ ರಾತ್ರಿ ಊಟ ಸೇವಿಸಿದ ಬಳಿಕ ವಾಂತಿ, ಭೇದಿ ಹಾಗು ಹೊಟ್ಟೆ, ತಲೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ನಡೆದಿದೆ.

ವಸತಿ ಶಾಲೆಯಲ್ಲಿ ಒಟ್ಟು 176 ವಿದ್ಯಾರ್ಥಿಗಳಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ 23 ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಸಮೀಪದ ಸೇಡಂ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಸೋಮವಾರ) ಬೆಳಗ್ಗೆ ಮತ್ತೆ 10 ವಿದ್ಯಾರ್ಥಿನಿಯರಲ್ಲಿ ಆರೋಗ್ಯ ಏರುಪೇರು ಕಾಣಿಸಿಕೊಂಡಿದೆ. ಹೀಗಾಗಿ ಮತ್ತೆ ಸೇಡಂ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲ 33 ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆರೋಗ್ಯ ಸಮಸ್ಯೆಗೆ ಫುಡ್ ಪಾಯಿಸನ್ ಆಗಿರುವುದೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿದ್ಯಾರ್ಥಿನಿಯರು ಸೇವಿಸಿದ ನೀರು ಮತ್ತು ಆಹಾರ ಕಲುಷಿತಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳಿಂದ ಸ್ಥಳೀಯ ಫ್ಯಾಕ್ಟರಿಯೊಂದರಿಂದ ರಾಸಾಯನಿಕ ಪದಾರ್ಥ ಹೊರ ಬಿಡುತ್ತಿದ್ದು, ಇದರಿಂದಲೇ ಸಾರ್ವಜನಿಕರಲ್ಲಿ ತಲೆನೋವು, ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ. ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ಇದೇ ಕಾರಣ ಇರಬಹುದು ಎಂದು ಕೂಡಾ ಹೇಳಲಾಗುತ್ತಿದೆ.

ಕ್ರಮ‌ಕ್ಕೆ ಒತ್ತಾಯ : ಘಟನೆಗೆ ಫ್ಯಾಕ್ಟರಿಯ ದುರ್ವಾಸನೆಯೇ ಕಾರಣ ಎಂದು ವಸತಿ ಶಾಲೆಯ ವಾರ್ಡನ್ ಹೇಳುತ್ತಿದ್ದಾರೆ. ವಾರ್ಡನ್ ಹೇಳಿಕೆಯಂತೆ ದುರ್ವಾಸನೆಯೇ ಕಾರಣವೆನ್ನುವುದಾದ್ರೆ, ಅದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ತೊಂದರೆಯಾಗುತ್ತಾ?. ಅಲ್ಲಿನ ಟೀಚರ್ಸ್​ ಹಾಗೂ ಗ್ರಾಮಸ್ಥರಿಗೆ ಯಾಕೆ ಏನೂ ಆಗಿಲ್ಲ. ಫ್ಯಾಕ್ಟರಿಯಿಂದ ಸಾರ್ವಜನಿಕರಿಗೆ ತೊಂದರೆ‌ ಆಗಿಲ್ಲ. ವಾರ್ಡನ್​ ತಮ್ಮ ತಪ್ಪು ಮುಚ್ಚಿಕೊಳ್ಳಲು ಪೋಷಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರಾ ಅನ್ನೋದು ಸ್ಥಳೀಯರ ಆಕ್ರೋಶ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ‌ ಕ್ರಮ‌ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ರಾತ್ರಿ ಊಟ ಸೇವಿಸಿದ ವಸತಿ‌ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.