ETV Bharat / state

ಆರು ವರ್ಷಗಳ ನಿರಂತರ ಶ್ರಮ; UPSC ಸಾಧನೆ ಕುರಿತು ಸಂತಸ ಹಂಚಿಕೊಂಡ ಬೆಳಗಾವಿಯ ಸಾಹಿತ್ಯ

ದೇಶದಲ್ಲಿ 250ನೇ ಸ್ಥಾನ ಪಡೆದಿರುವ ಸಾಹಿತ್ಯ ರಾಜ್ಯಕ್ಕೆ 10 ರ್ಯಾಂಕ್​ ತಮ್ಮದಾಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಮುಗಿಸಿರುವ ಸಾಹಿತ್ಯ 2016ರಿಂದ ಐಎಎಸ್ ತರಬೇತಿ ಪಡೆಯುತ್ತಿದ್ದಾರೆ.

author img

By

Published : May 30, 2022, 6:14 PM IST

sahitya
sahitya

ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ತೇರ್ಗಡೆ ಹೊಂದಿದ್ದಾರೆ.

ಯುಪಿಎಸ್​ಸಿ ಸಾಧಕಿ ಸಾಹಿತ್ಯ ಮಾತನಾಡಿದರು

ವ್ಯಾಪಾರಸ್ಥ ಮಲ್ಲಿಕಾರ್ಜುನ ‌ಪುತ್ರಿಯಾಗಿರುವ ಸಾಹಿತ್ಯ ಜಿಲ್ಲೆಯ ಕೀರ್ತಿ ಬೆಳಗಿದ್ದಾರೆ. ಸಾಹಿತ್ಯ ಸಾಧನೆಯಿಂದ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದು, ಪುತ್ರಿಗೆ ಸಿಹಿ ತಿನ್ನಿಸಿ ಸಂಭ್ರಮಿಸುತ್ತಿದ್ದಾರೆ.

ಯುಪಿಎಸ್​ಸಿಯಲ್ಲಿ 250ನೇ ಸ್ಥಾನ ಪಡೆದಿರುವ ಸಾಹಿತ್ಯ ರಾಜ್ಯಕ್ಕೆ 10ನೇ ಱಂಕ್​ ತಮ್ಮದಾಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಮುಗಿಸಿರುವ ಸಾಹಿತ್ಯ 2016ರಿಂದ ಐಎಎಸ್ ತರಬೇತಿ ಪಡೆಯುತ್ತಿದ್ದಾರೆ.

ಈ ಕುರಿತು ಮಾತ‌ನಾಡಿದ ಸಾಹಿತ್ಯ, ‌ಕಳೆದ ಆರು ವರ್ಷಗಳ ನಿರಂತರ ಪರಿಶ್ರಮದ ಬಳಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ. ಐದು ಬಾರಿ ಪರೀಕ್ಷೆ ಬರೆದಿದ್ದು, ಈ ಬಾರಿ ಉತ್ತಮ ಱಂಕ್​ ಬಂದಿರುವುದು ಖುಷಿಯಾಗ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಮೊದಲ ಆದ್ಯತೆ ನೀಡುತ್ತೇನೆ. ಕುಟುಂಬಸ್ಥರಿಗೆ ಮತ್ತು ಕಲಿಸಿದ ಗುರುಗಳಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಓದಿ: ಗಂಗಾವತಿ ಮೂಲದ ದಂತೆ ವೈದ್ಯೆಗೆ ಯುಪಿಎಸ್​​​ಸಿ ಯಲ್ಲಿ 191ನೇ ರ್‍ಯಾಂಕ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.