ETV Bharat / state

ಸರ್ಕಾರದ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ: ಗೋಕಾಕ್​​ ಡಿವೈಎಸ್ಪಿ ಎಚ್ಚರಿಕೆ - Gokaka DYSP Dt Prabhu

ಪೊಲೀಸ್​ ಇಲಾಖೆ ನೀಡಿರುವ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಸಾಮಾಜಿಕ ಅಂತರದಿಂದ ಮಾತ್ರ ಕೋವಿಡ್​ ಹರಡುವಿಕೆ ತಡೆಯಬಹುದು ಎಂದು ಗೋಕಾಕ್​ ಡಿವೈಎಸ್ಪಿ ಡಿ.ಟಿ.ಪ್ರಭು ಹೇಳಿದರು.

Dysp_jagruti_
ಡಿ ಟಿ ಪ್ರಭು
author img

By

Published : Apr 3, 2020, 8:46 PM IST

ಚಿಕ್ಕೋಡಿ : ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ನೀಡಿದ ಮುಂಜಾಗ್ರತೆ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಿ. ಇಲ್ಲವಾದರೆ ನಿಮ್ಮ ಹೆಣ ಹೊರಲು ಯಾರೂ ಇರುವುದಿಲ್ಲ ಎಂದು ಗೋಕಾಕ್​ ಡಿವೈಎಸ್ಪಿ ಡಿ.ಟಿ.ಪ್ರಭು ಎಚ್ಚರಿಸಿದರು.

ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಪಟ್ಟಣದ ಪ್ರಮುಖರ ಹಾಗೂ ವಿವಿಧ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್​ ಇಲಾಖೆ ನೀಡಿರುವ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಗುಡಿ, ಮಠ, ಮಸೀದಿ, ಚರ್ಚ್​​ಗಳಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಅಂತರದಿಂದ ಮಾತ್ರ ಕೋವಿಡ್​ ಹರಡುವಿಕೆ ತಡೆಯಬಹುದು ಎಂದರು.

ವೈರಸ್ ತಗುಲಿ ಮೃತ ಪಟ್ಟರೆ ನಮ್ಮ ಹೆಣ ಹೂಳಲು ಪುರಸಭೆಯವರೇ ಬರಬೇಕು. ಕೊರೊನಾ ವೈರಸ್ ನಮ್ಮ ನಗರಕ್ಕೆ ಬರದಂತೆ ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಸರ್ಕಾರದ ನಿಯಮ ಪಾಲಿಸಬೇಕು. ಇಲ್ಲವಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.