ETV Bharat / state

ಕೇಂದ್ರದ ಹಿಂದಿ ದಿವಸ್, ಹಿಂದಿ ಸಪ್ತಾಹದ ವಿರುದ್ಧ ಚಿಕ್ಕೋಡಿಯಲ್ಲಿ ಕರವೇ ಪ್ರತಿಭಟನೆ - belgavi latest news

ಸಂವಿಧಾನದ 8ನೇ ಪರಿಚ್ಛೇದ ಪ್ರಕಾರ ಎಲ್ಲಾ 22 ಭಾಷೆಗಳಿಗೂ ಸಮಾನ ಸ್ಥಾನಮಾನವಿರಬೇಕು. ಆದರೆ, ಕೇಂದ್ರ ಸರ್ಕಾರದ ನೀತಿ ದೇಶದ ತುಂಬೆಲ್ಲಾ ಒಂದೇ ಭಾಷೆ ಇರಬೇಕು ಎಂಬಂತೆ ಕಾಣುತ್ತಿದೆ..

Stop the Hindi Divas Saptha in belgavi
ಹಿಂದಿ ದಿವಸ್ ಸಪ್ತಾಹ ಕಾರ್ಯಕ್ರಮ ನಿಲ್ಲಿಸುವಂತೆ ಆಗ್ರಹ
author img

By

Published : Sep 15, 2020, 4:17 PM IST

ಚಿಕ್ಕೋಡಿ: ಕೇಂದ್ರ ಸರ್ಕಾರದ ಹಿಂದಿ ದಿವಾಸ್, ಹಿಂದಿ ಸಪ್ತಾಹ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಹುಕ್ಕೇರಿಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟಿಸಿದರು. ಪ್ರಧಾನಮಂತ್ರಿ ಮೋದಿ ಅವರಿಗೆ ತಹಶೀಲ್ದಾರ್​ ಮೂಲಕ ಮನವಿ ಸಲ್ಲಿಸಿದರು.

ಹಿಂದಿ ದಿವಸ್ ಸಪ್ತಾಹ ಕಾರ್ಯಕ್ರಮ ನಿಲ್ಲಿಸುವಂತೆ ಆಗ್ರಹ

ಸಂವಿಧಾನದ 8ನೇ ಪರಿಚ್ಛೇದ ಪ್ರಕಾರ ಎಲ್ಲಾ 22 ಭಾಷೆಗಳಿಗೂ ಸಮಾನ ಸ್ಥಾನಮಾನವಿರಬೇಕು. ಆದರೆ, ಕೇಂದ್ರ ಸರ್ಕಾರದ ನೀತಿ ದೇಶದ ತುಂಬೆಲ್ಲಾ ಒಂದೇ ಭಾಷೆ ಇರಬೇಕು ಎಂಬಂತೆ ಕಾಣುತ್ತಿದೆ.

ಈ ನೀತಿಯಿಂದ ದೇಶದ ಭಾಷಾ ವೈವಿಧ್ಯತೆಗೆ ಧಕ್ಕೆಯಾಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ನಿಲ್ಲಿಸಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ಪ್ರಮೋದ್ ಹೊಸಮನಿ ಒತ್ತಾಯಿಸಿದರು.

ಭಾರತದ ಭಾಷಾ ನೀತಿ ಮರು ಪರಿಶೀಲಿಸುವಂತೆ ಕ್ರಮಕೈಗೋಳಬೇಕು. ಇಲ್ಲವಾದ್ರೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರ ನೇತೃತ್ವದಲ್ಲಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.