ETV Bharat / state

ಬೆಳಗಾವಿಯಲ್ಲಿ ಪೊಲೀಸ್​ ವಾಹನಕ್ಕೆ ಕಲ್ಲು ತೂರಿದ 27 ಮಂದಿ ಕಿಡಿಗೇಡಿಗಳು ಅರೆಸ್ಟ್​.. ಶಿವಾಜಿ ಪುತ್ಥಳಿಗೆ ಕ್ಷೀರಾಭಿಷೇಕ

ಪೊಲೀಸ್​ ವಾಹನ ಸೇರಿ 20ಕ್ಕೂ ಹೆಚ್ಚು ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಆಧರಿಸಿ ಪೊಲೀಸರು 27ಕ್ಕೂ ಹೆಚ್ಚು ಪುಂಡರನ್ನು ಹೆಡೆಮುರಿ ಕಟ್ಟಿದ್ದಾರೆ.

stone pelt on police vehicle, CCTV Video out of stone pelt on police vehicle, stone pelt on police vehicle in Belagavi, Belagavi Shivaji idol issue, Belagavi Rayanna idol issue, ಪೊಲೀಸ್​ ವಾಹನದ ಮೇಲೆ ಕಲ್ಲೂ ತೂರಾಟ, ಪೊಲೀಸ್​ ವಾಹನದ ಮೇಲೆ ಕಲ್ಲೂ ತೂರಾಟ ಸಿಸಿಟಿವಿ ವಿಡಿಯೋ, ಬೆಳಗಾವಿಯಲ್ಲಿ ಪೊಲೀಸ್​ ವಾಹನದ ಮೇಲೆ ಕಲ್ಲೂ ತೂರಾಟ, ಬೆಳಗಾವಿ ಶಿವಾಜಿ ವಿಗ್ರಹ ವಿವಾದ, ಬೆಳಗಾವಿ ರಾಯಣ್ಣ ಪುತ್ಥಳಿ ವಿವಾದ,
ಪೊಲೀಸ್​ ವಾಹನಕ್ಕೆ ಕಲ್ಲು ತೂರಿದ ಕಿಡಿಗೇಡಿಗಳು ಬಂಧನ
author img

By

Published : Dec 18, 2021, 9:24 AM IST

Updated : Dec 18, 2021, 2:23 PM IST

ಬೆಳಗಾವಿ: ಬೆಂಗಳೂರಿನ ಸ್ಯಾಂಕಿ ಕೆರೆ ಬಳಿ ಇರುವ ಶಿವಾಜಿ ಪುತ್ಥಳಿಗೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳು ದಿಢೀರ್​ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಪೊಲೀಸರ ಮೇಲೆ ಮತ್ತು ಪೊಲೀಸ್​ ವಾಹನಗಳು ಸೇರಿದಂತೆ ನಗರದ ಕೆಲವು ವಾಹನಗಳ ಮೇಲೆ ಕೆಲ ಪುಂಡರು ಕಲ್ಲು ತೂರಾಟ ನಡೆಸಿದ್ದರು. ಈಗ ಪೊಲೀಸ್​ ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆಯ ಸಿಸಿಟಿವಿ ಫೂಟೇಜ್​ ಮಾಧ್ಯಮಕ್ಕೆ ಲಭ್ಯವಾಗಿದೆ.

ಪೊಲೀಸ್​ ವಾಹನಕ್ಕೆ ಕಲ್ಲು ತೂರಿದ ಕಿಡಿಗೇಡಿಗಳ ಬಂಧನ

ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ನೂರಾರು ಪ್ರತಿಭಟನಾಕಾರರು ಜಮಾವಣೆಗೊಂಡು, ಪ್ರತಿಭಟನೆ ನಡೆಸುತ್ತಿದ್ದು, ತಪ್ಪಿತಸ್ಥರನ್ನ ಬಂಧಿಸುವಂತೆ ಆಗ್ರಹಿಸುತ್ತಿದ್ದರು. ಪ್ರತಿಭಟನೆಯಲ್ಲಿ ಶುಭಂ ಶಳಕೆ, ಮಾಜಿ ಮೇಯರ್ ಸರಿತಾ ಪಾಟೀಲ ಸೇರಿ ಎಂಇಎಸ್ ಕಿಡಿಗೇಡಿಗಳು ಪ್ರತಿಭಟನೆಗೆ ಸಾಥ್ ನೀಡಿದ್ದರು ಎಂದು ಮಾಹಿತಿ ಲಭ್ಯವಾಗಿತ್ತು.

ಓದಿ: ಮರಕ್ಕೆ ಡಿಕ್ಕಿ ಹೊಡೆದ ಕಾರು; ಇಬ್ಬರು ಕಿರಿಯ ಕಲಾವಿದರು ಸೇರಿ ಮೂವರು ಸಾವು

ಪ್ರತಿಭಟನಾ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ ಎಂಬ ಮಾತು ಸಹ ಕೇಳಿ ಬಂದಿದ್ದು, ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಎಂಇಎಸ್ ಕಾರ್ಯಕರ್ತರು ಉದ್ಧಟತನ ಪ್ರದರ್ಶಿಸಿದ್ದರು. ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಡಿಸಿಪಿ ವಿಕ್ರಂ ಆಮಟೆ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೊಲೀಸ್​ ವಾಹನದ ಮೇಲೂ ಕಲ್ಲು ತೂರಿದ್ದರು.

ನಗರವೊಂದರಲ್ಲಿ ನಿಂತಿದ್ದ ಪೊಲೀಸ್ ವಾಹನದ ಮೇಲೆ ಹತ್ತಾರು ಯುವಕರು ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದಿದ್ದರು. ಈಗ ಪೊಲೀಸ್​ ವಾಹನದ ಮೇಲೆ ಕಲ್ಲು ತೂರಿರುವ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು, ಇದರಲ್ಲಿ ಉದ್ರಿಕ್ತರ ಹಾವಳಿಯನ್ನು ನೋಡಬಹುದಾಗಿದೆ.

ನಿನ್ನೆ ರಾತ್ರಿ ಸರ್ಕಾರಿ ವಾಹನಗಳು ಸೇರಿದಂತೆ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಘಟನೆ ಕುರಿತು ಮೂರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ರಾತ್ರೋರಾತ್ರಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಘಟನೆಗೆ ಸಂಬಂಧಿಸಿದಂತೆ 27ಕ್ಕೂ ಹೆಚ್ಚು ಎಂಇಎಸ್ ಪುಂಡರನ್ನು ಬಂಧಿಸಿದ್ದರು. ಆರೋಪಿಗಳನ್ನು ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಶಿವಾಜಿ ಪ್ರತಿಮೆಗೆ ಕ್ಷೀರಾಭಿಷೇಕ: ನಿಷೇಧಾಜ್ಞೆ ಜಾರಿಯಲ್ಲಿರುವ ನಡುವೆಯೇ ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದ ಎದುರು ಎಂಇಎಸ್ ಕಾರ್ಯಕರ್ತರು ಗುಂಪು ಗುಂಪಾಗಿ ‌ಜಮಾಯಿಸಿ, ಶಿವಾಜಿ ಪರ ಜಯ ಘೋಷಣೆಗಳನ್ನು ಹಾಕುತ್ತಿದ್ದಾರೆ. ಅವರನ್ನು ತಡೆಯಲು ಹಾಗೂ ಚದುರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಶಿವಾಜಿ ಪ್ರತಿಮೆಗೆ ಎಂದಿನಂತೆ ಪೂಜೆ ಸಲ್ಲಿಸಬೇಕು ಎಂಬ ನೆಪ ಹೇಳಿಕೊಂಡು‌ ಬಂದ ಎಂಇಎಸ್ ನಾಯಕಿಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನಮ್ಮ ಧಾರ್ಮಿಕ ಭಾವನೆ ಗೌರವಿಸಿ, ನಾವು ಪೂಜೆ ಸಲ್ಲಿಸಿದ್ದೇಯಷ್ಟೇ. ಈಗ ವಾಪಸಾಗುತ್ತೇವೆ ಎಂದು ಆ ನಾಯಕಿಯರು ಪಟ್ಟು ಹಿಡಿದರು.

ಶಿವಾಜಿ ಪುತ್ಥಳಿಗೆ ಕ್ಷೀರಾಭಿಷೇಕ

ಕೊನೆಗೂ ಅವರಿಗೆ ಪೊಲೀಸರು ಅವಕಾಶ ನೀಡಿದರು. ಗೇಟಿನ‌ ಬೀಗ ತೆಗೆದು, ಉದ್ಯಾನ ‌ಪ್ರವೇಶಕ್ಕೆ ಅನುವು ಮಾಡಿಕೊಟ್ಟರು. ಮಾಜಿ ಮೇಯರ್ ಸರಿತಾ ಪಾಟೀಲ, ಉಪಮೇಯರ್ ರೇಣು ಕಿಲ್ಲೇಕರ, ಪಾಲಿಕೆ ಮಾಜಿ ಸದಸ್ಯರಾದ ಸುಧಾ ಭಾತ್ಕಾಂಡೆ, ಮಧುಶ್ರೀ ಪೂಜಾರಿ ನೇತೃತ್ವದಲ್ಲಿ ಆರು ಮಂದಿ ಮಹಿಳೆಯರು ಶಿವಾಜಿ ಪ್ರತಿಮೆಗೆ ಹಾಲಿನ‌ ಅಭಿಷೇಕ ಮಾಡಿದರು. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಉದ್ಯಾನದ ಒಳಕ್ಕೆ ಪ್ರವೇಶ ನೀಡುವಂತೆ ಆಗ್ರಹಿಸಿದ ಶಿವಸೇನೆ ಹಾಗೂ ಎಂಇಎಸ್ ಮುಖಂಡರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಅವರಲ್ಲೂ ಕೆಲವರನ್ನು ಪೊಲೀಸರು ‌ಉದ್ಯಾನದ ಒಳ ಹೋಗಲು‌ ಬಿಟ್ಟರು. ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

Last Updated : Dec 18, 2021, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.