ETV Bharat / state

ಬೆಳಗಾವಿಯಲ್ಲಿ ಧರ್ಮೇಂದ್ರ ಪ್ರಧಾನ್ ಸಭೆ ವಿಫಲ: 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯ ಫಿಕ್ಸ್

author img

By

Published : Apr 15, 2023, 9:50 PM IST

Updated : Apr 15, 2023, 11:09 PM IST

ಬೆಳಗಾವಿ ಖಾಸಗಿ ಹೋಟೆಲ್​​ನಲ್ಲಿ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಬಂಡಾಯ ಎದ್ದಿರುವ ಅಕಾಂಕ್ಷಿಗಳ ಸಭೆ ಜರುಗಿತು.

State BJP election in-charge Dharmendra Pradhan spoke.
ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮಾತನಾಡಿದರು.

ಬೆಳಗಾವಿ: ಬೆಳಗಾವಿಯಲ್ಲಿ ಟಿಕೆಟ್ ವಂಚಿತ ಶಾಸಕರು, ಆಕಾಂಕ್ಷಿಗಳ ಜತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಡೆಸಿದ ಸಭೆ ವಿಫಲವಾಗಿದ್ದು, ಟಿಕೆಟ್ ವಂಚಿತರು ಪಕ್ಷೇತರ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಂಡಾಯ ಎದ್ದಿರುವ ಅಕಾಂಕ್ಷಿಗಳ ಸಭೆಯನ್ನು ಶನಿವಾರ ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ನಡೆಸಿದರು. ಈ ವೇಳೆ ರಾಮದುರ್ಗ, ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ ಆಕಾಂಕ್ಷಿಗಳು ಆಗಮಿಸಿ ಧರ್ಮೇಂದ್ರ ಪ್ರಧಾನ ಮುಂದೆ ತಮ್ಮ ನೋವು ತೋಡಿಕೊಂಡರು. ಆಕಾಂಕ್ಷಿಗಳನ್ನು ಒನ್ ಟೂ ಒನ್ ಕರೆದ ಪ್ರಧಾನ್ ಅವರು, ಸಮಾಧಾನ ಪಡಿಸುವ ಯತ್ನ ಮಾಡಿದರು.

ಧರ್ಮೇಂದ್ರ ಪ್ರಧಾನ್ ಸಭೆಗೆ ಸವದತ್ತಿ, ಬೈಲಹೊಂಗಲ ಟಿಕೆಟ್ ಆಕಾಂಕ್ಷಿಗಳು ಮತ್ತು ಟಿಕೆಟ್ ವಂಚಿತ ಬಿಜೆಪಿ ಶಾಸಕ ಅನಿಲ್ ಬೆನಕೆ ಕೂಡ ಗೈರಾಗಿದ್ದರು. ಸಭೆಯಲ್ಲಿ‌ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ್ ಕೋರೆ, ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಸೇರಿ ಇನ್ನಿತರರು ಹಾಜರಿದ್ದರು.

ಸಭೆ ಬಳಿಕ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.ಪ್ರಧಾನಿ ಮೋದಿ ಪ್ರವಾಸ ಇದೇ ತಿಂಗಳು ಶುರುವಾಗಲಿದೆ. ಯಡಿಯೂರಪ್ಪ, ಬೊಮ್ಮಾಯಿ ಸೇರಿ ಎಲ್ಲ ನಾಯಕರ ಪ್ರವಾಸ ಶುರುವಾಗುತ್ತದೆ. ಬಹಳ ಉತ್ಸಾಹದಿಂದ ನಾಮಪತ್ರ ಪ್ರಕ್ರಿಯೆ ನಡೆಯುತ್ತಿದೆ. ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸುತ್ತದೆ. ಡಬಲ್ ಎಂಜಿನ್ ಸರ್ಕಾರದ ಮೇಲೆ ಜನರ ಭರವಸೆಯಿದ್ದು, ಚುನಾವಣಾ ಫಲಿತಾಂಶ ಸ್ಪಷ್ಟವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಅಸಮಾಧಾನ ವಿಚಾರಕ್ಕೆ ಬಹಳ ಜನರ ಮನಸ್ಸಿನಲ್ಲಿ ಆಸೆ ಇರೋದು ಸಹಜ. ನಮ್ಮದು ಪ್ರಜಾಪ್ರಭುತ್ವ ಪಕ್ಷ, 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ನಾನು ಈ ಮೊದಲು ಸಹ ಇಲ್ಲಿಗೆ ಬಂದು ಹೋಗಿದ್ದೆ. ಏನೇ ಇರಲಿ ಎಲ್ಲರೂ ಒಗ್ಗೂಡಿ ಬಿಜೆಪಿ ಗೆಲ್ಲಿಸುತ್ತಾರೆ. ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಒಂದು ಪ್ರಕ್ರಿಯೆ ಇರುತ್ತೆ. ಆ ಪ್ರಕ್ರಿಯೆಯಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.

ಲಕ್ಷ್ಮಣ್ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವ ಬಗ್ಗೆ ಪ್ರತಿಕ್ರಿಯೆಸಿದ ಧರ್ಮೇಂದ್ರ ಪ್ರಧಾನ್ ಅವರು, ಲಕ್ಷ್ಮಣ್ ಸವದಿ ಮೇಲೆ ನಮಗೆ ಈ ನಿರೀಕ್ಷೆ ಇರಲಿಲ್ಲ. ಲಕ್ಷ್ಮಣ್ ಸವದಿಗೆ ಎಲ್ಲ ಅವಕಾಶ, ಗೌರವ ನೀಡಿದ್ದೆವು. ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ನಡೆದಿದೆ. ಸೋತರೂ ಅವರ ಸೇವೆ ಪರಿಗಣಿಸಿ ಡಿಸಿಎಂ ಮಾಡಿದ್ದೇವು. ಚುನಾವಣೆಗೆ ಕೆಲವು ಲೆಕ್ಕಾಚಾರ ಇರುತ್ತೆ. ಬಿಜೆಪಿ ಕಾರ್ಯಕರ್ತರ ಪಕ್ಷ, ಇದು ಹಲವು ಬಾರಿ ಸಾಬೀತಾಗಿದೆ. ಅಥಣಿಯಲ್ಲಿಯೂ ಬಿಜೆಪಿಗೆ ಗೆಲುವು ಆಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ ರಾಜೀನಾಮೆ ನೀಡುವ ಬಗ್ಗೆ ಪ್ರತಿಕ್ಷಿಯೆಸಿದ ಪ್ರಧಾನ್ ಅವರು, ಎಲ್ಲವೂ ಪಕ್ಷದ ಗಮನದಲ್ಲಿದೆ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇನ್ನು ಸಭೆ ಯಶಸ್ವಿಯಾಯಿತಾ ಎಂಬ ಪ್ರಶ್ನೆಗೆ ಪಕ್ಷದಲ್ಲಿ ಮುಂದೆಯೂ ಸಭೆ ನಡೆಯುತ್ತೆ ಎಂದಷ್ಟೇ ಹೇಳಿದರು. ಟಿಕೆಟ್ ಬದಲಾವಣೆ ಆಗುತ್ತಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸದೇ ಅಲ್ಲಿಂದ ಧರ್ಮೇಂದ್ರ ಪ್ರಧಾನ್ ತೆರಳಿದರು.

ಆರು ಕ್ಷೇತ್ರಗಳಲ್ಲಿ ಬಂಡಾಯ ಫಿಕ್ಸ್:ಬೆಳಗಾವಿ ಉತ್ತರ ಕ್ಷೇತ್ರದಲ್ಲಿ- ಅನಿಲ್ ಬೆನಕೆ, ರಾಮದುರ್ಗದಲ್ಲಿ ಮಹಾದೇವಪ್ಪ ಯಾದವಾಡ, ಬೈಲಹೊಂಗಲದಲ್ಲಿ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ್, ಯಮಕನಮರಡಿ- ಮಾರುತಿ ಅಷ್ಟಗಿ, ಖಾನಾಪುರ-ಅರವಿಂದ ಪಾಟೀಲ್, ಸವದತ್ತಿ-ಬಸವರಾಜ ಪಟ್ಟಣಶೆಟ್ಟಿ ಬಂಡಾಯ ಸ್ಪರ್ಧಿಸುವುದು ಬಹುತೇಕ ಖಚಿತ.

ಸೋಮವಾರ ಇಲ್ಲ ಮಂಗಳವಾರ ನಾಮಪತ್ರ ಸಲ್ಲಿಸುವೆ:ಸಭೆ ಬಳಿಕ ಮಾಧ್ಯಮಗಳ ಜತೆಗೆ ಯಮಕನಮರಡಿ ಟಿಕೆಟ್ ಆಕಾಂಕ್ಷಿ ಮಾರುತಿ ಅಷ್ಟಗಿ ಮಾತನಾಡಿ, ಕ್ಷೇತ್ರದಲ್ಲಿ ಯಾವ ರೀತಿ ವಾತಾವರಣ ಇದೆ, ಕ್ಷೇತ್ರದ ಜನರ ಬಯಕೆ ಏನು ಎಂದು ತಿಳಿಸಿದ್ದೇನೆ. ಟಿಕೆಟ್ ಬದಲಾವಣೆ ಭರವಸೆ ನೀಡಿದ್ದಾರಾ ಎಂಬ ಬಗ್ಗೆ ಭರವಸೆ ಏನೂ ಇಲ್ಲ. ನಾಳೆ ಸಂಜೆಯವರೆಗೆ ಕಾಯುವೆ. ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ನಾಳೆ ತೀರ್ಮಾನ ಮಾಡುತ್ತೇನೆ. ಸೋಮವಾರ ಅಥವಾ ಮಂಗಳವಾರ ನಾಮಪತ್ರ ಸಲ್ಲಿಸುವೆ ಎಂದರು.

ಕಳೆದ ಬಾರಿ ಚುನಾವಣೆಯಲ್ಲಿ ನಾನು 2800 ಮತಗಳ ಅಂತರದಿಂದ ಸೋತಿದ್ದೆ. ಸೋತರೂ ಮನೆಯಲ್ಲಿ ಕುಳಿತುಕೊಳ್ಳದೇ ಪಕ್ಷ ಸಂಘಟನೆ ಮಾಡಿದ್ದೇನೆ. ಯಾರೂ ಕುತಂತ್ರ ಮಾಡಿದ್ದಾರೆ ಗೊತ್ತಿಲ್ಲ, ‌ನನ್ನ ಟಿಕೆಟ್ ತಪ್ಪಿತು. ಬೇರೆಯವರ ಕೈವಾಡ ಇರಬಹುದು ಎಂದು ಅಷ್ಟಗಿ ಕಿಡಿಕಾರಿದರು.

ಟಿಕೆಟ್ ಆಕಾಂಕ್ಷಿಗಳು ಏಳು ಮಂದಿ ಒಗ್ಗಟ್ಟಾಗಿದ್ದೇವೆ: ಧರ್ಮೇಂದ್ರ ಪ್ರಧಾನ ಅವರಿಗೆ ಕ್ಷೇತ್ರದ ಬಗ್ಗೆ ಎಲ್ಲ ಮಾಹಿತಿ ನೀಡಿದ್ದೇವೆ. ಸೋಮವಾರ ನಾನು ನಾಮಪತ್ರ ಸಲ್ಲಿಸುವುದು ನಿಶ್ಚಿತ ಎಂದು ರಾಮದುರ್ಗ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ತಿಳಿಸಿದ್ದಾರೆ.

ಧರ್ಮೇಂದ್ರ ಪ್ರಧಾನ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಧರ್ಮೇಂದ್ರ ಪ್ರಧಾನ ಅವರಿಗೆ ಈಗಾಗಲೇ ಸಾಕಷ್ಟು ಮಾಹಿತಿ ಒದಗಿಸಿದ್ದೇವೆ. ಆ ಪ್ರಕಾರ ಬೆಂಗಳೂರು ಅಥವಾ ದೆಹಲಿಗೆ ಹೋಗಿ ತಿಳಿಸುತ್ತೇವೆ ಎಂದಿದ್ದಾರೆ, ಎರಡು ದಿನ ಕಾಯ್ದು ನೋಡುತ್ತೇವೆ. ಅದಾದ ಬಳಿಕ ಸೋಮವಾರ ಪಕ್ಷೇತರವಾಗಿ ನಾಮಪತ್ರ ಸಲ್ಲಿಸುತ್ತೇವೆ. ಟಿಕೆಟ್ ಆಕಾಂಕ್ಷಿಗಳು ಏಳು ಮಂದಿಯನ್ನೂ ಕರೆದು ಮಾತಾಡುತ್ತೇವೆ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದರು.

ಇದನ್ನೂಓದಿ:ಇನ್ನೂ ಸಮಯ ಇದೆ, ಕಾದು ನೋಡೋಣ.. ಟಿಕೆಟ್ ನೀಡಿಯೇ‌ ನೀಡುತ್ತಾರೆ: ಶೆಟ್ಟರ್ ವಿಶ್ವಾಸ

Last Updated : Apr 15, 2023, 11:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.