ETV Bharat / state

ಪರಿಸರ ರಾಯಭಾರಿಯಾಗಿ ಸಾಲು ಮರದ ತಿಮ್ಮಕ್ಕ ಆಯ್ಕೆ: ರಾಜ್ಯ ಸಚಿವ ಸಂಪುಟ ಸ್ಥಾನಮಾನ ನೀಡಿ ಆದೇಶ - salumarada timmakka

ಸಾಲುಮರದ ತಿಮ್ಮಕ್ಕರಿಗೆ ಪರಿಸರ ರಾಯಭಾರಿ ಸ್ಥಾನ ಹಾಗೂ ರಾಜ್ಯ ಸಚಿವ ಸಂಪುಟ ಸ್ಥಾನಮಾನ ನೀಡುವುದಾಗಿ ಕಳೆದ ತಿಂಗಳು ಸಿಎಂ ಬೊಮ್ಮಾಯಿ‌ ಘೋಷಿಸಿದ್ದರು. ಇದೀಗ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.

State Cabinet power for salumarada timmakka
ಪರಿಸರ ರಾಯಭಾರಿಯಾಗಿ ಸಾಲುಮರದ ತಿಮ್ಮಕ್ಕ
author img

By

Published : Jul 8, 2022, 3:07 PM IST

ಬೆಂಗಳೂರು: ಸಾಲುಮರದ ತಿಮ್ಮಕ್ಕನವರನ್ನು ಪರಿಸರ ರಾಯಭಾರಿಯನ್ನಾಗಿ ನೇಮಿಸಿದ್ದು, ಜೊತೆಗೆ ರಾಜ್ಯ ಸಚಿವ‌ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ‌ ಪುರಸ್ಕೃತರೂ ಆಗಿರುವ ತಿಮ್ಮಕ್ಕರಿಗೆ ಪರಿಸರದ ರಾಯಭಾರಿ ಹಾಗೂ ರಾಜ್ಯ ಸಚಿವ ಸಂಪುಟ ಸ್ಥಾನಮಾನ ನೀಡುವುದಾಗಿ ಕಳೆದ ತಿಂಗಳು ಸಿಎಂ ಬೊಮ್ಮಾಯಿ‌ ಘೋಷಿಸಿದ್ದರು. ಇದೀಗ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.

ಜೂನ್ 3ರಂದು ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಸಾಲುಮರದ ತಿಮ್ಮಕ್ಕನವರ 111ರ ಜನ್ಮದಿನದ ಸಂಭ್ರಮ ಹಾಗೂ ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಪಾಲ್ಗೊಂಡಿದ್ದರು. ಸಾಲುಮರದ ತಿಮ್ಮಕ್ಕನವರು ಪರಿಸರ ಸಂರಕ್ಷಣೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರದ ವತಿಯಿಂದ ಪರಿಸರದ ರಾಯಭಾರಿ ಎಂಬ ವಿಶೇಷ ಪದವಿ ಹಾಗೂ ಮತ್ತಷ್ಟು ಪರಿಸರ ಸಂರಕ್ಷಣೆ ಕಾರ್ಯ ಕೈಗೊಳ್ಳಲು ನೆರವಾಗುವುದಕ್ಕಾಗಿ ರಾಜ್ಯ ಸಚಿವ ಸ್ಥಾನಮಾನ ನೀಡುವುದಾಗಿ ಘೋಷಿಸಿದ್ದರು.

ಇದಕ್ಕೂ ಮುನ್ನ ತಿಮ್ಮಕ್ಕ ಅವರಿಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50*80 ಅಳತೆಯ ನಿವೇಶನವನ್ನು ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಮುಂಗಾರು ಮಳೆಗೆ ಮೈದುಂಬಿದ ಜೋಗ; ನೋಡಿ ಮಂಜು-ಗಾಳಿ ಮುಸುಕಿನ ಆಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.