ಚಿಕ್ಕೋಡಿ: ರಾಯಬಾಗ ಪಟ್ಟಣದ ಎಸ್‍ಎಸ್ ಗೋಲ್ಡನ್ ಲೈಫ್ ಕಂಪನಿಯ ಹೆಸರಲ್ಲಿ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿ ಕಂಪನಿ ಬಂದ್ ಮಾಡಿ ಪರಾರಿಯಾಗಿರುವ ಮಹಾವೀರ ಐತವಾಡೆ ಮೇಲೆ ಪೊಲೀಸ್ ಇಲಾಖೆಯವರು ಸೂಕ್ತ ಕಾನೂನು ಕ್ರಮ ಕೈಗೊಂಡು ಹೂಡಿಕೆದಾರರ ಹಣ ಮರಳಿ ಕೋಡಿಸಬೇಕೆಂದು ಆಗ್ರಹಿಸಿ ಹೂಡಿಕೆದಾರರು ಪ್ರತಿಭಟನೆ ನಡೆಸಿದರು.
ಎಸ್‍ಎಸ್ ಗೋಲ್ಡನ್ ಲೈಫ್ ಕಂಪನಿಯಯ ಎದುರು ಪ್ರತಿಭಟನೆ ಮಾಡಿದ ನೂರಾರು ಕಾರ್ಯಕರ್ತರು, ಎಸ್‍ಎಸ್ ಗೋಲ್ಡನ್ ಲೈಫ್ ಕಂಪನಿಯ ಮಾಲೀಕ ಮಹಾವೀರ ಐತವಾಡೆ ಕೇವಲ ಮೂರೂವರೆ ವರ್ಷದಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇನೆ. ಸೈಟ್‍ಗಳನ್ನು ಕೊಡುತ್ತೇನೆ ಎಂದು ನಂಬಿಸಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಿಂದ ಸುಮಾರು 20 ಸಾವಿರ ಜನರಿಂದ ಏಜೆಂಟರ್ ಮೂಲಕ ಅಂದಾಜು 120 ಕೋಟಿ ರೂಪಾಯಿಗಳನ್ನು ಗ್ರಾಹಕರಿಂದ ಸಂಗ್ರಹಣೆ ಮಾಡಿ ಈಗ ಕಂಪನಿಯನ್ನು ಮುಚ್ಚಿ ಪರಾರಿಯಾಗಿದ್ದಾನೆ.
ಇಂತಹ ಮಹಾವಂಚಕನನ್ನು ಮತ್ತು ಆತನ ಸಹಚರರನ್ನು ಕೂಡಲೇ ಪೊಲೀಸ್ ಇಲಾಖೆಯವರು ಕೂಡಲೇ ಬಂಧಿಸಿಬೇಕು. ಹಾಗೆ ಹೂಡಿಕೆದಾರರ ಹಣ ಮರಳಿ ಕೋಡಿಸಬೇಕೆಂದು ಆಗ್ರಹಿಸಿದ್ದಾರೆ.