ETV Bharat / state

ವಿಧಾನಸಭೆಯಲ್ಲಿ ಸದಸ್ಯರ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಕಾಗೇರಿ - ಸದಸ್ಯರ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್

ವ್ಯವಸ್ಥೆಗೆ ಶಕ್ತಿ ತುಂಬಲು ನಮ್ಮ ಜವಾಬ್ದಾರಿ ಹೆಚ್ಚಿದೆ. ನಾವೆಲ್ಲರೂ ಜವಾಬ್ದಾರಿ ಮರೆತು ಅರಾಜಕತೆ ನಿರ್ಮಾಣ ಮಾಡುವುದು ಸರಿಯಲ್ಲ. ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲ್ಲ ಎಂದು ವಿಧಾನಸಭೆಯಲ್ಲಿ ಸದಸ್ಯರ ನಡವಳಿಕೆ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿದರು.

e kageri objects of assembly members behavior
ವಿಧಾನಸಭೆಯಲ್ಲಿ ಸದಸ್ಯರ ನಡವಳಿಕೆ ಬಗ್ಗೆ ಸ್ಪೀಕರ್ ಕಾಗೇರಿ ಆಕ್ಷೇಪ
author img

By

Published : Dec 22, 2021, 3:54 PM IST

ಬೆಳಗಾವಿ : ವಿಧಾನಸಭೆಯಲ್ಲಿ ಸದಸ್ಯರ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ವ್ಯವಸ್ಥೆಗೆ ಶಕ್ತಿ ತುಂಬಲು ನಮ್ಮ ಜವಾಬ್ದಾರಿ ಹೆಚ್ಚಿದೆ. ನಾವೆಲ್ಲರೂ ಜವಾಬ್ದಾರಿ ಮರೆತು ಅರಾಜಕತೆ ನಿರ್ಮಾಣ ಮಾಡುವುದು ಸರಿಯಲ್ಲ. ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಸದಸ್ಯರ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಕಾಗೇರಿ

ಹಿರಿಯರು ಇಂತಹ ವ್ಯವಸ್ಥೆ ರೂಪಿಸಲು ತ್ಯಾಗ ಮಾಡಿದ್ದಾರೆ. ಆದರೆ, ನಾವು ಅದನ್ನು ಅರಿತುಕೊಳ್ಳದೇ ಅತ್ಯಂತ ಹಗುರವಾಗಿ ನಡೆದುಕೊಳ್ಳುತ್ತಿದ್ದೇವೆ. ಹೀಗಾದಾಗ ಅರಾಜಕತೆ ನಿರ್ಮಾಣ ಆಗುತ್ತದೆ. ಈ ಸ್ಥಿತಿ ಬರಬಾರದು ಎಂದಾದರೆ ನಮಗೆ ನಾವೇ ಜವಾಬ್ದಾರರಾಗಬೇಕು. ಸಮಾಜ ಇದನ್ನು ಗಮನಿಸಬೇಕು, ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಅವಲೋಕನ ಮಾಡಬೇಕು ಎಂದು ಸಲಹೆ ನೀಡಿದರು.

ಹಗುರವಾಗಿ ಮಾತನಾಡುತ್ತೇನೆ ಎಂದು ಅಂದುಕೊಳ್ಳಬೇಡಿ. ಭವಿಷ್ಯದ ಬಗ್ಗೆ ಚಿಂತೆ ಇದ್ದರೆ, ಹಿರಿಯರ ತ್ಯಾಗದ ಕಲ್ಪನೆ ಇದ್ದರೆ, ಈ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ಕೊಡಬೇಕು ಎಂಬ ಬದ್ಧತೆ ಇದ್ದರೆ, ನಮಗೆ ನಾವು ನಾವೇ ಜವಾಬ್ದಾರರಾಗಬೇಕು ಎಂದು ಸ್ಪೀಕರ್ ಮನವಿ ಮಾಡಿದರು.

ಇದಕ್ಕೂ ಮುನ್ನ ಅಧಿವೇಶನ ವಿಸ್ತರಿಸುವ ಬಗ್ಗೆ ಪ್ರಸ್ತಾಪ ಮಾಡಿದ ಸ್ಪೀಕರ್, ಹೆಚ್ಚಿನ ಚರ್ಚೆ ಮಾಡಲು ಅಧಿವೇಶನ ವಿಸ್ತರಿಸಬೇಕಾಗುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಅನುದಾನ ಸಂಬಂಧ ಚರ್ಚೆ ವೇಳೆ ಬಹುತೇಕ ಶಾಸಕರು ಚರ್ಚೆಗೆ ಮುಂದಾದರು. ಈ ವೇಳೆ, ಎಲ್ಲರಿಗೂ ಚರ್ಚೆಗೆ ಅವಕಾಶ ಕೊಡಕ್ಕಾಗಲ್ಲ ಎಂದರು.

ಈ ವೇಳೆ, ಮಧ್ಯಪ್ರವೇಶಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಅಧಿವೇಶನ ವಿಸ್ತರಣೆ ಬಗ್ಗೆ ಸದನದ ನಾಯಕರು ಕೂತು ಚರ್ಚಿಸಿ ನಿರ್ಧರಿಸಬೇಕು. ಎಲ್ಲವೂ ಚರ್ಚೆ ಆಗಬೇಕು. ಉತ್ತರ ಕರ್ನಾಟಕ ಭಾಗದ ಚರ್ಚೆಯೂ ಆಗಬೇಕು. ಬಿಟ್ ಕಾಯಿನ್ ಚರ್ಚೆ ಆಗಲಿಲ್ಲ ಅಂತ ಕೆಲವರು ಹೇಳ್ತಾರೆ. ಮಾತಾಡಿದರೆ ಹೆಚ್ಚು ಮಾತಾಡಿದ್ರು ಅಂತಾರೆ. ನಾನು ಎಲ್ಲಿ ಮಾತಾಡಬೇಕು. ಯಾರ ಮುಂದೆ ಮಾತಾಡಬೇಕು ಎಂದು ರಮೇಶ್ ಕುಮಾರ್ ಅಸಹಾಯಕತೆ ತೋಡಿಕೊಂಡರು.

ಪಾಠ ಮಾಡಿದ ರಮೇಶ್ ಕುಮಾರ್ :

ಸದಸ್ಯರ ನಡವಳಿಕೆ ಕುರಿತಂತೆ ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಸ್ಪೀಕರ್​ ರಮೇಶ್ ಕುಮಾರ್

ಸದನದಲ್ಲಿ ಹಲವು ಸದಸ್ಯರು ಒಮ್ಮೆಲೆ ಚರ್ಚೆಗೆ ಮುಂದಾದ ಸನ್ನಿವೇಶ ನಿರ್ಮಾಣವಾದಾಗ ಸದಸ್ಯರ ನಡೆ ಕುರಿತು ರಮೇಶ್ ಕುಮಾರ್ ಮಾತನಾಡಿ, ನಾನು ಇರೋದು ಇನ್ನೂ ಎರಡು ಅವಧಿಯ ಅಧಿವೇಶನದವರೆಗೆ ಮಾತ್ರ. ಮುಂದೇನಾಗುತ್ತೋ ನೋಡಬೇಕು. ಸದಸ್ಯರು ಸದನದ ನಿಯಮಾವಳಿ ಬಗ್ಗೆ ಅರ್ಥ ಮಾಡಿಕೊಳ್ಳಲ್ಲ ಅಂದರೆ ಹೇಗೆ, ಕೆಲವರು ಸದನಕ್ಕೆ ಬರಲ್ಲ, ಹಾಗಿದ್ದರೆ ಚುನಾವಣೆಗೆ ಯಾಕೆ ಹೋಗ್ತೀರಿ, ಈ ಸದನದ ವೈಭವ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಲ್ಕು ವರ್ಷ ಆದರೂ ಸದಸ್ಯರು ಸದನದ ನಿಯಮಾವಳಿಗಳನ್ನು ಪಾಲನೆ ಮಾಡುತ್ತಿಲ್ಲ. ನಾನು ಸ್ಪೀಕರ್ ಸ್ಥಾನದಲ್ಲಿ ಕುಳಿತು ಹೇಳಿದ್ದೇನೆ. ಕೆಲವು ಸದಸ್ಯರು ಸಹಿ ಹಾಕಿದರೂ ಸದನಕ್ಕೆ ಬರುತ್ತಿರಲಿಲ್ಲ. ಒಂದು ದಿನ ಎರಡು ದಿನ ನೋಡಿ ಕೊನೆಗೆ ನಗುನಗುತ್ತಾ ಹೇಳುತ್ತಿದ್ದೆ. ಪುಸ್ತಕ ತರಿಸುತ್ತಿದ್ದೆ, ಸಹಿ ಹಾಕಿದ್ದರೂ ಇಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರ ಮನೆಗೂ ಫೋನ್ ಮಾಡಿದ್ದೆ, ಮನೆಯಲ್ಲಿ ಸದನಕ್ಕೆ ಬಂದಿದ್ದಾರಲ್ವಾ ಹೇಳುತ್ತಿದ್ದರು. ಅವರಿಗೆ ಏನಾದರೂ ಅಪಾಯ ಆಗಿದ್ಯೋ ಚೆಕ್ ಮಾಡಿ ಎಂದು ಹೇಳುತ್ತಿದ್ದೆ. ಸದನಕ್ಕೆ ಬರೋದೇ ಇಲ್ಲ, ಹಾಗಾದರೆ ಚುನಾವಣೆಗೆ ಏಕೆ ಬರುತ್ತೀರಿ. ಸದನ ಅಷ್ಟು ಹಗುರವಾದ ವಿಚಾರವಾದರೆ, ಇದು ಸರಿಯಾ?, ಸದನದ ಗೌರವವನ್ನು ಕಾಪಾಡಬೇಕಿದೆ ಎಂದೇಳಿದರು.

ಎಲ್ಲರಿಗೂ ಅವಕಾಶ ಸಿಗುತ್ತಿಲ್ಲ:

ರಮೇಶ್ ಕುಮಾರ್ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಮಾಜಿ ಸಚಿವ ಕೃಷ್ಣಭೈರೆಗೌಡ,ಯಾಕೆ ಶಾಸಕರು ಸದನಕ್ಕೆ ಬರುತ್ತಿಲ್ಲ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಶಾಸಕರ ಪರಿಸ್ಥಿತಿ ಕೂಡ ನಾವು ಅರ್ಥ ಮಾಡಿಕೊಳ್ಳಬೇಕು. ಒಬ್ಬ ಶಾಸಕನ ಮೇಲೆ ಹಲವಾರು ಜವಾಬ್ದಾರಿ ಇರುತ್ತದೆ. ತನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಲು ಶಾಸಕರು ಬರುತ್ತಾರೆ. ಆದರೆ ಸದನದಲ್ಲಿ ಎಲ್ಲಾ ಶಾಸಕರಿಗೆ ಸದನದಲ್ಲಿ ಮಾತಾಡುವುದಕ್ಕೆ ಅವಕಾಶ ಸಿಗುತ್ತಿಲ್ಲ. ಮತ್ತೆ ಏಕೆ ನಾವು ಅಧಿವೇಶನಕ್ಕೆ ಹೋಗಬೇಕು ಎಂಬ ಮನೋಭಾವ ಹಲವು ಶಾಸಕರದ್ದಾಗಿದೆ . ಸದನಕ್ಕೆ ಹೋಗುವ ಬದಲು ಕ್ಷೇತ್ರದಲ್ಲಿ ಇದ್ದು ಜನರ ಕೆಲಸ ಮಾಡಲು ಶಾಸಕರು ಇಷ್ಟಪಡುತ್ತಾರೆ. ಸದನದಲ್ಲಿ ಎಲ್ಲರಿಗೂ ಮಾತಾಡುವ ಅವಕಾಶ ಸಿಕ್ಕರೆ ಎಲ್ಲರೂ ಬರುತ್ತಾರೆ. ಸದನದಲ್ಲಿ ಎಲ್ಲರಿಗೂ ಮಾತಾಡುವ ಅವಕಾಶ ಸಿಗಬೇಕು ಎಂದು ಹೇಳಿದರು.

ಅಧಿವೇಶನ ವಿಸ್ತರಣೆಗೆ ಮನವಿ :

ಒಂದು ವಾರಗಳ ಕಾಲ ಸದನ ವಿಸ್ತರಣೆಗೆ ಮನವಿ ಮಾಡಿದ ಕೃಷ್ಣಬೈರೇಗೌಡ, ಶಾಸಕರಿಗೆ ಕಡಿಮೆ ಸಮಯ ಕೊಟ್ಟು ಮಾತಾಡಿ ಎಂದು ಹೇಳಿ ಪೂರ್ತಿ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಒಂದು ವಾರ ವಿಸ್ತರಣೆ ಮಾಡಿ, ಆಮೇಲೆ ಬಜೆಟ್ ಅಧಿವೇಶನ ಒಂದು ತಿಂಗಳು ಮಾಡಿ ಎಂದು ಸಲಹೆ ನೀಡಿದರು.

ರಾಮಸ್ವಾಮಿ ಬೇಸರ :

ನಂತರ ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ರಾಜಕೀಯ ಮೇಲಾಟಕ್ಕೆ ಅಷ್ಟೇ ಈ ಸದನ ವೇದಿಕೆಯಾಗಿದೆ. ಆಡಳಿತ ವ್ಯವಸ್ಥೆ ಸರಿಪಡಿಸಲು ಏನಾದರೂ ಚರ್ಚೆ ಆಗಿದೆಯಾ ಎಂದು ಪ್ರಶ್ನಿಸಿದರು.ತೆರಿಗೆ ಸೋರಿಕೆಯಾಗುತ್ತಿದೆ. ಭ್ರಷ್ಟಾಚಾರ ತಾಂಡವಾಡ್ತಿದೆ. ಇದರ‌ ಬಗ್ಗೆ ಚರ್ಚೆ ಆಗಿದೆಯಾ?, ಸಾಧ್ಯವಾದಷ್ಟು ನಿಯಮವಳಿಗಳ ಪ್ರಕಾರ ಸದನ ನಡೆಸಿ, ಇಲ್ಲವಾದರೆ ನಾವೆಲ್ಲರೂ ನಗೆಪಾಟಲಿಗೀಡಾಗುತ್ತೇವೆ ಎಂದರು.

ಇದನ್ನೂ ಓದಿ: ದಾವಣಗೆರೆ ಬಳಿ ಖಾಸಗಿ ಬಸ್ ಪಲ್ಟಿ: 20ಕ್ಕೂ ಹೆಚ್ಚು ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.