ETV Bharat / state

ಸ್ವಗ್ರಾಮಕ್ಕೆ ನಿವೃತ್ತ ಯೋಧನ ಆಗಮನ: ಮೆರವಣಿಗೆ ಮೂಲಕ ಅದ್ಧೂರಿ ಸ್ವಾಗತ - ವೀರ ಯೋಧ

ಭಾರತೀಯ ಸೇನೆಯಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ವೀರ ಯೋಧನಿಗೆ ಗ್ರಾಮಸ್ಥರು ಹೃದಯ ಪೂರ್ವಕವಾಗಿ ಮೆರವಣಿಗೆ ಮೂಲಕ ಬರಮಾಡಿಕೊಂಡಿದ್ದಾರೆ.

Warm welcome by the Villagers
ಗ್ರಾಮಸ್ಥರಿಂದ ಯೋಧನಿಗೆ ಅದ್ಧೂರಿ ಸ್ವಾಗತ
author img

By

Published : Mar 3, 2020, 4:53 PM IST

ಬೆಳಗಾವಿ: ನಿವೃತ್ತ ಯೋಧ ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆ ಗ್ರಾಮಸ್ಥರು ಯೋಧನಿಗೆ ಆರತಿ ಬೆಳಗಿ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

ಗ್ರಾಮಸ್ಥರಿಂದ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತಿಗಡಿ ಗ್ರಾಮದ ಶಿವಬಸಪ್ಪ ಪಾಟೀಲ 16 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಯೋಧನಿಗೆ ಮೆರವಣಿಗೆ ಮೂಲಕ ಭವ್ಯವಾಗಿ ಸ್ವಾಗತಿಸಿದ್ದಾರೆ.

ಶಿವಬಸಪ್ಪ ಪಾಟೀಲ 2003 ಅ. 3ರಂದು ಭಾರತೀಯ ಸೇನೆಗೆ ಸೇರ್ಪಡೆಯಾಗಿ ನಾಸಿಕ್​​ನಲ್ಲಿ 2 ವರ್ಷ ಟ್ರೈನಿಂಗ್ ಮುಗಿಸಿಕೊಂಡು 2005ರಲ್ಲಿ ಮೊದಲನೇ ಪೋಸ್ಟಿಂಗ್ ಪಡೆದುಕೊಂಡಿದ್ದರು. ಒಟ್ಟು 16 ವರ್ಷ 5 ತಿಂಗಳುಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಇದೀಗ ಸೇನೆಯಿಂದ ನಿವೃತ್ತಿ ಹೊಂದಿ ಸ್ವಂತ ಗ್ರಾಮಕ್ಕೆ ಮರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.