ಚಿಕ್ಕೋಡಿ : ಏಕ ವಲಯ ಪುರುಷ ಮತ್ತು ಮಹಿಳೆಯರ ಟೈಕ್ವಾಂಡೊ ಕರಾಟೆ ಪಂದ್ಯಾವಳಿಗೆ ಭಾರತೀಯ ಟೈಕ್ವಾಂಡೊ ತಂಡದ ತರಬೇತುದಾರ ಪರಪ್ಪಾ ಎಸ್.ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಟೈಕ್ವಾಂಡೊ ಕ್ರೀಡೆ 1971ರಲ್ಲಿ ಕೊರಿಯಾದಲ್ಲಿ ಟೈಕ್ವಾಂಡೊ ಅಸೋಶಿಯೇಶನ್ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ ನಂತರ 1973ರಲ್ಲಿ ವರ್ಲ್ಡ್ ಟೈಕ್ವಾಂಡೊ ಫೆಡರೇಶನ್ ಆಗಿ ಜಗತ್ತಿನಾದ್ಯಂತ ಸುಮಾರು 198 ದೇಶಗಳಲ್ಲಿ ಪ್ರಚಲಿತಕ್ಕೆ ಬಂದು ಟೈಕ್ವಾಂಡೊ ಕ್ರೀಡೆಗೆ ಪ್ರಾಮುಖ್ಯತೆ ದೊರೆಯಿತು.
ಭಾರತಕ್ಕೆ ಟೈಕ್ವಾಂಡೊ ಪರಿಚಯಿಸಿದ ಕೀರ್ತಿ ಮಾಸ್ಟರ್ ಕೀಮ ಎಂಬುವರಿಗೆ ಸಲ್ಲುತ್ತದೆ. ಅವರು ಎನ್.ಐ.ಎಸ್ ಗುಣಮಟ್ಟದ ತರಬೇತುದಾರರಿಂದ 2004 ರಿಂದ 2006ರ ವರೆಗೆ ಪರಿಶ್ರಮ ವಹಿಸಿ 2004ರಲ್ಲಿ ಭಾರತಕ್ಕೆ ಏಶಿಯಾ ಗೇಮ್ಸ್ ಮೆಡಲ್ ದೊರಕಿಸಿ ಕೊಡುವ ಮಹದಾಶೆ ಅವರದಾಗಿತ್ತು. ಟೈಕ್ವಾಂಡೊ ಒಂದು ಶಿಸ್ತಿನ ಆಟವಾಗಿದ್ದು ಗ್ರಾಮೀಣ ಭಾಗಕ್ಕೆ ಪರಿಚಯಿಸುತ್ತಿರುವುದು ಉತ್ತಮ ವಿಚಾರ, ಮಹಿಳೆಯ ಆತ್ಮರಕ್ಷೆಣೆಗಾಗಿ ಟೈಕ್ವಾಂಡೊ ಒಂದು ಉತ್ತಮ ಕ್ರೀಡೆಯಾಗಿದೆ ಎಂದರು.