ETV Bharat / state

ಮುಸ್ಲಿಮರ ಓಟಿಗಾಗಿ ಆರ್‌ಎಸ್‌ಎಸ್ ಗೇಲಿ: ಸಿದ್ದರಾಮಯ್ಯ ವಿರುದ್ಧ ಮುತಾಲಿಕ್ ಕಿಡಿ - ಆರ್​ಎಸ್​ಎಸ್​ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ

ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಮತ್ತು ಅವರ ತಂದೆಯನ್ನು ಬಂಧಿಸಬೇಕು. ಅವರ ಮನೆಗೆ ಯಾರು ಯಾರು ಭೇಟಿ ಕೊಟ್ಟಿದ್ದಾರೋ ಅವರ ವಿಚಾರಣೆ ಆಗಬೇಕು. ಮಹಾರಾಷ್ಟ್ರದ ಮುಸ್ಲಿಂ ಎಂಎಲ್ಎ ಬಂದು ಮೊಬೈಲ್ ಕೊಟ್ಟು ಹೋಗಿದ್ದಾರೆ. ಆ ಮೊಬೈಲ್ ಎಲ್ಲಿಂದ ಬಂತು? ಈ ಬಗ್ಗೆ ವಿಚಾರಣೆ‌ ಆಗಬೇಕು ಹಾಗೂ ಆ ಮೊಬೈಲ್ ಕೂಡ ಸೀಜ್ ಮಾಡಬೇಕು ಎಂದು ಮುತಾಲಿಕ್​ ಆಗ್ರಹಿಸಿದ್ದಾರೆ.

ಮುಸ್ಲಿಂ ಓಟಿಗಾಗಿ ಆರ್‌ಎಸ್‌ಎಸ್ ಗೇಲಿ: ಸಿದ್ದರಾಮಯ್ಯ ವಿರುದ್ಧ ಮುತಾಲಿಕ್ ಕಿಡಿ

author img

By

Published : Apr 8, 2022, 5:18 PM IST

Updated : Apr 8, 2022, 6:03 PM IST

ಬೆಳಗಾವಿ: ಮುಸ್ಲಿಮರ ಓಟಿಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರ್‌ಎಸ್‌ಎಸ್ ಅನ್ನು ಗೇಲಿ ಮಾಡುತ್ತಿದ್ದಾರೆ, ಬೈಯ್ಯುತ್ತಾರೆ. ಸಂಘಟನೆಯನ್ನು ಅಲ್ ಖೈದಾಗೂ ಹೋಲಿಸುತ್ತಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ‌ಮುತಾಲಿಕ್ ಹರಿಹಾಯ್ದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅಲ್ ಖೈದಾ ಕೈಯಲ್ಲಿ ಬಾಂಬ್‌ಗಳು ಇರುತ್ತವೆ. ಅದು ಭಯೋತ್ಪಾದಕ ಸಂಘಟನೆ ಅನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಆದರೆ, ಆರ್‌ಎಸ್‌ಎಸ್ ಎಂದಾದರೂ ಬಾಂಬ್, ಬಂದೂಕು ಹಿಡಿದಿದೆಯೇ? ದೇಶದ್ರೋಹಿ ಕೃತ್ಯ ಮಾಡಿದ್ದರ ಬಗ್ಗೆ ಒಂದು ಉದಾಹರಣೆ ಇದೆಯೇ? ಆರ್‌ಎಸ್‌ಎಸ್‌ನ ಅನ್ನು ಅಲ್‌ಖೈದಾಗೆ ಜೋಡಿಸುವುದು ಅತ್ಯಂತ ಖಂಡನೀಯ ಎಂದರು.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​ ಇಸ್ಕಾನ್ ಹೆಗಲಿಗೆ ನೀಡಲು ಮುಂದಾದ ಬಿಬಿಎಂಪಿ

ಮೆಗಾ ಅಭಿಯಾನ: ಹಿಜಾಬ್, ಹಲಾಲ್, ಆರ್ಥಿಕ ನಿರ್ಬಂಧದ ನಂತರ ರಾಜ್ಯದಲ್ಲೀಗ ಮುಸ್ಲಿಂ ಸಮುದಾಯದ ವಿರುದ್ಧ ಮತ್ತೊಂದು ಮೆಗಾ ಅಭಿಯಾನ ಆರಂಭಿಸಲು ಶ್ರೀರಾಮ ಸೇನೆ ನಿರ್ಧರಿಸಿದೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ಬ್ಯಾನ್, ಮತ್ತು ವಕ್ಫ್ ಬೋರ್ಡ್ ಕಾನೂನು ರದ್ದು ಮಾಡುವಂತೆ ಅಭಿಯಾನ ಆರಂಭಿಸುತ್ತೇವೆ ಎಂದು ಅವರು ಹೇಳಿದರು.

1991ರಲ್ಲಿ ಕಾಂಗ್ರೆಸ್ ವಕ್ಫ್ ಬೋರ್ಡ್ ಪ್ರಾರಂಭಿಸಿದೆ. ರೈಲ್ವೆ, ರಕ್ಷಣಾ ಇಲಾಖೆ ನಂತರ ಅತಿಹೆಚ್ಚು ಆಸ್ತಿಯನ್ನು ಬೋರ್ಡ್ ಹೊಂದಿದೆ. ಈ ಕುರಿತ ಕಾನೂನೇ ಸರಿಯಿಲ್ಲ. ವಕ್ಫ್ ಅವ್ಯವಹಾರ ಬಗ್ಗೆ ಪ್ರತ್ಯೇಕವಾಗಿ ಸುದ್ದಿಗೋಷ್ಠಿ‌ ನಡೆಸುತ್ತೇನೆ. ಯಾವ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್‌ ಆಸ್ತಿ ಎಷ್ಟಿದೆ ಎಂಬುದರ ಬಗ್ಗೆ ಆರ್‌ಟಿಐನಲ್ಲಿ ಮಾಹಿತಿ ಕೇಳುತ್ತಿದ್ದೇವೆ‌ ಎಂದು ಮುತಾಲಿಕ್‌ ತಿಳಿಸಿದರು.

Last Updated : Apr 8, 2022, 6:03 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.