ETV Bharat / state

ಸ್ವತಂತ್ರ ಭಾರತದಲ್ಲಿ ಮೋದಿಯಷ್ಟು ಸುಳ್ಳು ಯಾರೂ ಹೇಳಿಲ್ಲ: ಸಿದ್ದರಾಮಯ್ಯ ಗುಡುಗು

author img

By

Published : Apr 9, 2021, 7:00 PM IST

Updated : Apr 9, 2021, 7:12 PM IST

ಬೆಳಗಾವಿಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ‌ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ‌ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.

Siddaramaiah slams CM BSY and PM Modi's govt
ಸಿದ್ದರಾಮಯ್ಯ

ಬೆಳಗಾವಿ: ಸ್ವತಂತ್ರ ಭಾರತದಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯಷ್ಟು ಸುಳ್ಳು ಯಾರೂ ಹೇಳಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ‌ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ‌ಸಿದ್ದರಾಮಯ್ಯ, ಸುಳ್ಳು ಹೇಳುವುದರಲ್ಲಿ ಮೋದಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ಸುಳ್ಳನ್ನೇ ಈಗಿನ ಪ್ರಧಾನಿ ಸತ್ಯ ಎಂದು ಬಿಂಬಿಸಲು ಹೊರಟಿದ್ದಾರೆ. ಮೋದಿಯವರದ್ದು ಹಿಟ್ಲರ್​ ಮಾದರಿಯ ಸರ್ಕಾರ ಎಂದು ಆರೋಪಿಸಿದರು.

ಸತೀಶ್ ಜಾರಕಿಹೊಳಿ ಪರ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಮಾತು

ತೈಲಬೆಲೆ ಏರಿಕೆ ಬಗ್ಗೆ ಮಾತನಾಡದ ಪುಣ್ಯಾತ್ಮ

ವಿದೇಶದಿಂದ ಕಪ್ಪು ಹಣ ತರುತ್ತೇನೆ. ಎಲ್ಲರ ಅಕೌಂಟಿಗೆ 15 ಲಕ್ಷ ರೂ.ಜಮಾ ಮಾಡುತ್ತೇನೆ ಎಂದು ಪ್ರಧಾನಮಂತ್ರಿ ಅಭ್ಯರ್ಥಿ ಆದಾಗಿನಿಂದಲೂ ಮೋದಿ ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ. ಮೋದಿ ಮಾತಿಗೆ ಮರುಳಾಗಿ ಯುವಕರು ಮೋದಿ ಮೋದಿ ಎಂದು ಘೋಷಣೆ ‌ಕೂಗಿದರು. ಒಂದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದ ಮೋದಿಗೆ 10 ಸಾವಿರ ಉದ್ಯೋಗ ‌ಸೃಷ್ಟಿ ಸಾಧ್ಯವಾಗಲಿಲ್ಲ. ಒಂದೂ ದಿನ ತೈಲಬೆಲೆ ಏರಿಕೆ ಬಗ್ಗೆ ಮಾತನಾಡದ ಪುಣ್ಯಾತ್ಮ ಈತ ಎಂದು‌ ಕಾಲೆಳೆದರು.

ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೆಲೆ ಖಜಾನೆ ಖಾಲಿ

ರಾಜ್ಯ ಸರ್ಕಾರ ಹಿಂಬಾಗಿಲಿನಿಂದ ಆಡಳಿತಕ್ಕೆ ಬಂದಿದೆ. ಯಡಿಯೂರಪ್ಪಗೆ ಮುಂಭಾಗದಿಂದ ಅಧಿಕಾರಕ್ಕೆ ಬರೋದೆ ಗೊತ್ತಿಲ್ಲ. ಆಪರೇಷನ್ ಕಮಲ‌ ಎಂಬ ಪದ ಹುಟ್ಟುಹಾಕಿದ್ದೇ ಯಡಿಯೂರಪ್ಪ. ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿದ್ದಾರೆ. ಬಿಎಸ್​ವೈ ಚೆಕ್ ಮೂಲಕ ಹಣ ಪಡೆದ್ರೆ ಅವರ ಮಗ ಆರ್​ಟಿಜಿಎಸ್ ಮೂಲಕ ಹಣ ಪಡೆಯುತ್ತಿದ್ದಾನೆ. ನಾನು ಐದು ವರ್ಷ ಸಿಎಂ ಆಗಿದ್ದಾಗ ಒಂದೂ ಹಗರಣ ನಡೆದಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೆಲೆ ಖಜಾನೆ ಖಾಲಿಯಾಗಿದೆ. ಖಜಾನೆ ಹಣವನ್ನು ಸಿಎಂ ಲೂಟಿ ಹೊಡೆಯುತ್ತಿದ್ದಾರೆ. ಖಜಾನೆ ಖಾಲಿ ಆದ ಬಗ್ಗೆ ಕೇಳಿದ್ರೆ ಕೊರೊನಾ ನೆಪ ಹೇಳ್ತಾರೆ ಎಂದು ಸಿದ್ದು ಗಂಭೀರವಾಗಿ ಆರೋಪ ಮಾಡಿದರು.

ನಾವು ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ 10 ಕೆಜಿ ಅಕ್ಕಿ

ಬಿಜೆಪಿ ಅವರ ಮನೆಯಲ್ಲಿ ನೋಟ್ ಎಣಿಸುವ ಮಶಿನ್​​ಗಳು ಸಿಗ್ತಾವೆ. ನಮ್ಮ ಮನೆಯಲ್ಲಿ ಎರಡು ಮಶಿನ್ ಇವೆ ಎಂದು ಈಶ್ವರಪ್ಪ ಒಪ್ಪಿಕ್ಕೊಂಡಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಎರಡು ಹೊತ್ತು ಊಟ ಮಾಡಬೇಕು. ಇಂದಿರಾ ಕ್ಯಾಂಟಿನ್ ಸದ್ಯ ಮುಚ್ಚುತ್ತಿದ್ದಾರೆ. 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬರುತ್ತೆ. ನಾವು ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ. 25 ಜನ ಸಂಸದರು ಹೇಡಿಗಳಿದ್ದಾರೆ. ಮೋದಿ ಹತ್ರ ಹೋದರೆ ಗಡ ಗಡ ನಡಗುತ್ತಾರೆ. ಹೀಗಾಗಿ ಸತೀಶ್ ಜಾರಕಿಹೊಳಿ‌ಗೆ ಮತ ನೀಡಿ ಎಂದು ಕೋರಿದರು.

Last Updated : Apr 9, 2021, 7:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.