ETV Bharat / state

ಸಿಎಂ ಬಿಎಸ್​ವೈ ಮೌನ ನೋಡಿದ್ರೆ ಅವರಲ್ಲೇ ಏನೋ ಹುಳುಕಿರಬಹುದು; ಸಿದ್ದರಾಮಯ್ಯ

ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿಎಂ ಬಿಎಸ್​ವೈ ಮಾತನಾಡಬೇಕು. ಅವರು ಮೌನವಾಗಿರೋದು ‌ನೋಡಿದ್ರೆ ಅವರಲ್ಲೇ ಏನಾದರೂ ಹುಳುಕಿರಬೇಕು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

siddaramaiah
ಸಿದ್ದರಾಮಯ್ಯ ಹೇಳಿಕೆ
author img

By

Published : Mar 29, 2021, 12:25 PM IST

ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಸಿಎಂ ಬಿಎಸ್​ವೈ ಮಾತನಾಡಬೇಕು. ಅವರು ಮೌನವಾಗಿರೋದು ‌ನೋಡಿದ್ರೆ ಅವರಲ್ಲೇ ಏನಾದರೂ ಹುಳುಕಿರಬೇಕು ಎಂದು‌ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಹೇಳಿಕೆ
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯುವತಿ ನನ್ನ ಬಳಿ ರಕ್ಷಣೆ ಕೊಡಿ ಅಂತಾ ಕೇಳಿಲ್ಲ, ಆದರೆ ನನಗೆ ರಕ್ಷಣೆ ಕೊಡಿಸಿ ಅಂತಾ ಕೇಳಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ರಕ್ಷಣೆ ಕೊಡಲು ಹೇಳಿದ್ದೇನೆ ಎಂದರು.
ಈ ಬಗ್ಗೆ ಸಿಎಂ ಯಡಿಯೂರಪ್ಪ ಮೌನ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮೇಶ ಜಾರಕಿಹೊಳಿ ಸಿಡಿ ಮತ್ತು ರಕ್ಷಣೆ ವಿಚಾರವಾಗಿ ರಾಷ್ಟ್ರಾದ್ಯಂತ ಚರ್ಚೆಗಳು ನಡೆಯುತ್ತಿವೆ. ಯಡಿಯೂರಪ್ಪ ಮಾತಾಡಬೇಕು, ಯಾಕೆಂದರೆ ಅವರು ರಾಜ್ಯದ ಸಿಎಂ. ಈ ವಿಚಾರ ದೇಶವ್ಯಾಪಿ ಚರ್ಚೆ ಆಗುತ್ತಿದೆ. ಆದ್ರೆ, ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮೌನವಾಗಿರುವುದು ಸಮಂಜಸವಲ್ಲ, ಸಿಎಂ ಆಗಿ ಅವರು ಪ್ರತಿಕ್ರಿಯಿಸಬೇಕು ಎಂದ್ರು.
ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಗುಲಾಮರು: ಸಚಿವ ಮಾಧುಸ್ವಾಮಿ ಕೇಂದ್ರದ ಸರ್ವಾಧಿಕಾರಿ ಧೋರಣೆ ಪ್ರಸ್ತಾಪಿಸಿರುವ ವಿಚಾರಕ್ಕೆ, ಕೇಂದ್ರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಅನುದಾನ ಸಮರ್ಪಕವಾಗಿ ಬರುತ್ತಿಲ್ಲ. ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ. ಈ ಎಲ್ಲಾ ಸಂಸದರಿಗೆ ಬೆಳಗಾವಿ ಚುನಾವಣೆ ಮೂಲಕ ಜನರು ಪಾಠ ಕಲಿಸಲಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿತನಕ್ಕೆ ಹೋಗಿದ್ದು, ಸಿಎಂ ಯಡಿಯೂರಪ್ಪ ಸರ್ಕಾರ ಹೇಡಿ ಸರ್ಕಾರವಾಗಿದೆ ಎಂದರು.
ಬೆಳಗಾವಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.