ETV Bharat / state

ದಾರಿ ಸುಗಮವಾಯಿತು‌, 2023ಕ್ಕೆ ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ನಮ್ಮ 'ಕೈ'ಗೆ ಅಧಿಕಾರ; ಸಿದ್ದರಾಮಯ್ಯ ಭವಿಷ್ಯ - siddaramaiah reaction on belgavi flood release fund

ಯಡಿಯೂರಪ್ಪ ಸಿಎಂ ಆದಾಗ ಸಂಪೂರ್ಣ ಮನೆ ಬಿದ್ರೆ ಐದು ಲಕ್ಷ ಕೊಡ್ತೀನಿ ಎಂದು ಘೋಷಿಸಿದ್ದರು. ಆ ಹಣವನ್ನು ಇನ್ನೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಶಾಸಕರಿದ್ರೇ ಒಂದು ಪರಿಹಾರ, ಬಿಜೆಪಿ ಶಾಸಕರಿದ್ರೇ ಬೇರೊಂದು ಪರಿಹಾರ ನೀಡಿ ತಾರತಮ್ಯ ಮಾಡ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್​ಗಳನ್ನ ಹಾಕುತ್ತಿದ್ದಾರೆ. ಹಾಗೇ ಮಾಡದಂತೆ ಎಸ್‌ಪಿಗೆ ಹೇಳಿದ್ದೇನೆ. ಬಿಜೆಪಿಯವರು ಕುರ್ಚಿಗೆ ಬಡಿದಾಡುತ್ತಿದ್ದಾರೆ. ಜನ ಕಷ್ಟ ಪಡುತ್ತಿದ್ದಾರೆ, ಅದನ್ನ ಯಾರು ಕೇಳೋರಿಲ್ಲ..

siddaramaiah pressmeet in belgavi
ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಟಿ
author img

By

Published : Jul 27, 2021, 4:22 PM IST

ಬೆಳಗಾವಿ : 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದರು. ಖಾನಾಪುರ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಬರಲಿ ಎಂದು ನಾನು ಬಯಸಲ್ಲ. ಬಿಜೆಪಿ ಸರ್ಕಾರ ತನ್ನದೇ ಭಾರದಿಂದ ಪತನವಾದ್ರೆ ಏನೂ ಮಾಡಕ್ಕಾಗಲ್ಲ. ಮಧ್ಯಂತರ ಚುನಾವಣೆ ಎದುರಿಸಲು ನಾವು ರೆಡಿ ಇದ್ದೇವೆ ಎಂದರು.

2023ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ ಅಂತಾ ಭವಿಷ್ಯ ನುಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ..

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ? ಎಲೆಕ್ಟೆಡ್ ಚೀಫ್ ಮಿನಿಸ್ಟರ್‌ ಅನ್ನು ಕೇಂದ್ರ ಸರ್ಕಾರದವರು ತಗೆದು ಎಸೆದು ಬಿಟ್ರು. ಇದಕ್ಕೆ ಪ್ರಜಾಪ್ರಭುತ್ವ ಎನ್ನಬೇಕೆ? ಅವರಿಗೆ ಇಷ್ಟ ಬಂದವರಿಗೆ ಪಟ್ಟ ಕಟ್ಟುತ್ತಾರೆ, ಬೇಡ ಅನಿಸಿದ್ರೆ ತೆಗೆದು ಹಾಕುತ್ತಾರೆ. ಹೀಗಾದರೆ, ಪ್ರಜಾಪ್ರಭುತ್ವ, ಸಂವಿಧಾನದ ರೀತಿಯಲ್ಲಿ ಕೆಲಸ ಆದಂಗೆ ಆಗುತ್ತಾ? ಎಂದು ಕಿಡಿಕಾರಿದ್ರು.

ಯಡಿಯೂರಪ್ಪ ಇದ್ದರೂ ಲಾಭ ಇಲ್ಲ, ಇರದೇ ಇದ್ದರೂ ನಮಗೆ ಲಾಭ ಇಲ್ಲ, 2023ರ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ದಾರಿ ಸುಗಮವಾಯಿತು‌. ಕಾಂಗ್ರೆಸ್ ಪಕ್ಷ 2023ಕ್ಕೆ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ. ನೂರು ಜನ ಸಿದ್ದರಾಮಯ್ಯ ಬಂದ್ರೂ‌ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಬಿಎಸ್‌ವೈ ಹೇಳಿಕೆಗೆ ತಿರುಗೇಟು ನೀಡಿದ ಅವರು, 2013ರಲ್ಲಿ ಯಡಿಯೂರಪ್ಪ ಹೀಗೆ ಹೇಳಿದ್ರು, ನಾವು ಅಧಿಕಾರಕ್ಕೆ ಬರಲಿಲ್ವಾ? ಮಿಸ್ಟರ್ ಯಡಿಯೂರಪ್ಪಗೆ ಯಾವತ್ತಾದ್ರೂ ಮೆಜಾರಿಟಿ ಬಂದಿದೆಯಾ?. ಆದರೆ, ಗರ್ವದ ಮಾತಿಗೇನೂ ಕಮ್ಮಿ ಇಲ್ಲ ಎಂದರು.

ಯಡಿಯೂರಪ್ಪ ಸಿಎಂ ಆದಾಗ ಸಂಪೂರ್ಣ ಮನೆ ಬಿದ್ರೆ ಐದು ಲಕ್ಷ ಕೊಡ್ತೀನಿ ಎಂದು ಘೋಷಿಸಿದ್ದರು. ಆ ಹಣವನ್ನು ಇನ್ನೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಶಾಸಕರಿದ್ರೇ ಒಂದು ಪರಿಹಾರ, ಬಿಜೆಪಿ ಶಾಸಕರಿದ್ರೇ ಬೇರೊಂದು ಪರಿಹಾರ ನೀಡಿ ತಾರತಮ್ಯ ಮಾಡ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್​ಗಳನ್ನ ಹಾಕುತ್ತಿದ್ದಾರೆ. ಹಾಗೇ ಮಾಡದಂತೆ ಎಸ್‌ಪಿಗೆ ಹೇಳಿದ್ದೇನೆ. ಬಿಜೆಪಿಯವರು ಕುರ್ಚಿಗೆ ಬಡಿದಾಡುತ್ತಿದ್ದಾರೆ. ಜನ ಕಷ್ಟ ಪಡುತ್ತಿದ್ದಾರೆ, ಅದನ್ನ ಯಾರು ಕೇಳೋರಿಲ್ಲ ಎಂದು ಗುಡುಗಿದರು.

ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ:

ಅತಿವೃಷ್ಟಿಯಿಂದ ಕಂಗೆಟ್ಟು ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಈವರೆಗೆ ಪರಿಹಾರ, ಆಹಾರ ಧಾನ್ಯ ಕೊಟ್ಟಿಲ್ಲ. ಹೀಗಂತಾ, ಸಂತ್ರಸ್ತರೇ ಆರೋಪಿಸಿದ್ದಾರೆ. ಕೂಡಲೇ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್, ಡಿಸಿಗೆ ಸೂಚಿಸಿದ್ದೇನೆ.

ಮಲಪ್ರಭಾ ನದಿಗೆ ಪ್ರೊಟೆಕ್ಷನ್ ವಾಲ್‌ ನಿರ್ಮಿಸಲು ಸರ್ಕಾರಕ್ಕೆ ಒತ್ತಾಯ ಮಾಡ್ತೀನಿ. ಎಂಎಲ್‌ಎ ಅಂಜಲಿ ‌ನಿಂಬಾಳ್ಕರ್ ಮನೆಯೇ ನೀರಿನಲ್ಲಿ ಮುಳುಗಿ ಹೋಗಿದೆ. ಖಾನಾಪುರ ಬಳಿ ಮಲಪ್ರಭಾ ನದಿಗೆ ಪ್ರೊಟೆಕ್ಷನ್ ವಾಲ್ ಮಾಡಬೇಕು. ನದಿ ಒತ್ತುವರಿಯಾಗಿದ್ರೆ ಅದನ್ನು ತೆರವು ಮಾಡಬೇಕು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡ್ತೀನಿ.

ಖಾನಾಪುರ ಬಳಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿ ಕಳಪೆಯಾಗಿವೆ. ಸೂಕ್ತ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡ್ತೀನಿ‌. ಬಿಜೆಪಿಯವರು ಸುಳ್ಳು ಹುಟ್ಟು ಹಾಕೋದರಲ್ಲಿ, ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು.

ಖಾನಾಪುರ ಪಟ್ಟಣದಲ್ಲಿ 12 ಸೇತುವೆಗಳು ಭಾಗಶಃ ಹಾಳಾಗಿವೆ, ರಸ್ತೆಗಳು ಕೊಚ್ಚಿ ಹೋಗಿವೆ. ಖಾನಾಪುರದಲ್ಲಿ 12 ಸೇತುವೆ, ರಸ್ತೆ ದುರಸ್ತಿಗೆ 22 ಕೋಟಿ ರೂಪಾಯಿ ಬೇಕು. ನಾನೇ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಹಣ ಬಿಡುಗಡೆಗೆ ಪತ್ರವನ್ನೂ ಬರೀತಿನಿ ಎಂದು ಸಿದ್ದರಾಮಯ್ಯ ಹೇಳಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.