ಅಥಣಿ : ಯಡಿಯೂರಪ್ಪನವರು ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಅಥಣಿ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಕೋಕಟನೂರ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಕಾಂಗ್ರೆಸ್ ಸರ್ಕಾರ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಐದು ರೂ ಪ್ರೋತ್ಸಾಹ ಧನ ನಿಡುತ್ತಿತ್ತು. ಆದರೆ ಯಡಿಯೂರಪ್ಪ ಸರ್ಕಾರ ಆರು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ನಿಮಗೆ ಸರ್ಕಾರ ನಡೆಸೋಕ್ಕೆ ಬರಲ್ಲ ಅಂದರೆ ಹೋಗಿ, ನಾವು ಸರ್ಕಾರ ರಚನೆ ಮಾಡ್ತೀವಿ ಎಂದು ಸಿಎಂಗೆ ಟಾಂಗ್ ಕೊಟ್ಟರು.
ಪಕ್ಷಾಂತರ ಮಾಡುವುದು ಸಹ ಯಡಿಯೂರಪ್ಪನವರೇ ಕಲಿಸಿದ್ದು. ಅದು 2008ರಲ್ಲಿ 20 ಕೋಟಿ ಹಣ ನಿಡಿ 6 ಜನ ಶಾಸಕರನ್ನು ಖರೀದಿ ಮಾಡಿದ್ದರು, ಇದೀಗ ಒಬ್ಬೊಬ್ಬರಿಗೆ 30 ಕೋಟಿ ನಿಡಿ 15 ಜನ ಶಾಸಕರನ್ನು ಖರೀದಿಸಿದ್ದಾರೆಂದು ಆರೋಪಿಸಿದರು. ಇನ್ನೂ ಉಪ ಚುಣಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಸಿಎಂ ಯಡಿಯೂರಪ್ಪ 20 ಕೋಟಿ ಖರ್ಚು ಮಾಡುತ್ತಿದ್ದಾರೆ, ಈ ಹಣದ ಮೂಲ ಎಲ್ಲಿದೆ ಎಂದು ನಿಮಗೆ ಗೊತ್ತೇ..? ಲಂಚದ ಹಣ ಪಾಪದ ಹಣ ಎಂದು ಆರೋಪದ ಸುರಿಮಳೆಯೇ ಸುರಿಸಿದರು.