ಬೆಳಗಾವಿ: ಕರ್ನಾಟಕ ಸರ್ಕಾರಕ್ಕೆ ಸವಾಲ್ ಹಾಕಿ ನಗರಕ್ಕೆ ಬಂದಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್ ಪೊಲೀಸರ ಖಡಕ್ ಎಚ್ಚರಿಕೆ ಹಿನ್ನೆಲೆ ಇಂದು ಮುಂಬೈಗೆ ಮರಳಿದರು.
ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ರಾವತ್ ಮುಂಬೈಗೆ ಪ್ರಯಾಣ ಬೆಳೆಸಿದರು. ನಿನ್ನೆ ರಾತ್ರಿ ಬೆಳಗಾವಿಯ ಮೇರಿಯಟ್ ಹೋಟೆಲ್ನಲ್ಲಿ ತಂಗಿದ್ದ ಶಿವಸೇನೆ ಮುಖಂಡ ರಾವತ್ ಇಂದು ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ಹೋಟೆಲ್ನಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಬೆಳಗಾವಿಗೆ ಬಂದ ಶಿವಸೇನಾ ಮುಖಂಡ ಸಂಜಯ್ ರಾವತ್... ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು
ಷರತ್ತು ಬದ್ಧ ಅನುಮತಿ :
ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಶಿವಸೇನೆ ಮುಖಂಡನಿಗೆ ನಗರ ಪೊಲೀಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಷರತ್ತುಬದ್ಧ ಅನುಮತಿ ನೀಡಿದ್ದರು. ಗಡಿ ವಿವಾದ, ಪ್ರಚೋದನಾಕಾರಿ ಭಾಷಣ ಮಾಡದಂತೆ ಸಂಜಯ್ ರಾವತ್ಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದರು.