ETV Bharat / state

ಕೊನೆಗೊಂಡ ಮಣಗುತ್ತಿ ಶಿವಾಜಿ ಪ್ರತಿಮೆ ಪ್ರಕರಣ: ಮರು ಪ್ರತಿಷ್ಠಾಪನೆಗೆ ನಿರ್ಧಾರ... - ಶಿವಾಜಿ ಮೂರ್ತಿ ಪ್ರತಿಮೆ ಪ್ರಕರಣ

ಶಿವಸೇನಾ ಮಾತು ಕೇಳಿ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಸಲುವಾಗಿ ಪ್ರಾರಂಭವಾದ ದಂಗೆ ಕೊನೆಗೊಂಡಿದ್ದು, ಶಿವಾಜಿ ಮೂರ್ತಿ ಸೇರಿ ಐವರು ಮಹಾ ಪುರುಷರು ಮೂರ್ತಿ ಪ್ರತಿಷ್ಠಾಪನೆಗೆ ಮಣಗುತ್ತಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ನಿರ್ಧರಿಸಿದರು.

Chikkodi
ಶಿವಾಜಿ ಮೂರ್ತಿ
author img

By

Published : Aug 11, 2020, 11:58 PM IST

ಚಿಕ್ಕೋಡಿ: ಶಿವಸೇನಾ ಮಾತು ಕೇಳಿ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಸಲುವಾಗಿ ಪ್ರಾರಂಭವಾದ ದಂಗೆ ಕೊನೆಗೊಂಡಿದ್ದು, ಶಿವಾಜಿ ಮೂರ್ತಿ ಸೇರಿ ಐವರು ಮಹಾ ಪುರುಷರ ಮೂರ್ತಿ ಪ್ರತಿಷ್ಠಾಪನೆಗೆ ಮಣಗುತ್ತಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ನಿರ್ಧರಿಸಿದರು.

ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧಾರ..

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ಸ್ಥಳಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಗುತ್ತಿ, ಬೆನಕನಹೊಳಿ ಹಾಗೂ ಬೋಳಶ್ಯಾನಟ್ಟಿ ಗ್ರಾಮಸ್ಥರು ಸೇರಿ ಸಭೆ ಮಾಡಿ ಮನಗುತ್ತಿ ಗ್ರಾಮದ ಸಮುದಾಯ ಭವನ ಹಿಂದೆ ಲಕ್ಷ್ಮೀ ಟ್ರಸ್ಟ್ ಜಾಗದಲ್ಲಿ ಶಿವಾಜಿ ಮೂರ್ತಿ ಸೇರಿ ಐದು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ.

ಘಟನೆ ಹಿನ್ನಲೆ :

ಮಣಗುತ್ತಿ ಗ್ರಾಮದಲ್ಲಿ ಅನಧಿಕೃತವಾಗಿ ಶಿವಾಜಿ ಮೂರ್ತಿಯ ಸ್ಥಾಪನೆ ಮಾಡಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ದಂಗೆಯಾಗಿತ್ತು. ಶಿವಾಜಿ ಮೂರ್ತಿಯನ್ನು ಆ. 5 ರಂದು ಮಧ್ಯರಾತ್ರಿ ಯಾವುದೇ ಪರವಾನಗಿ ಪಡೆಯದೇ ಮತ್ತು ಇನ್ನುಳಿದ ಎರಡೂ ಗ್ರಾಮಗಳ ಮುಖಂಡರ ಜೊತೆ ಚರ್ಚಿಸದೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಮಣಗುತ್ತಿ ಗ್ರಾಮದ ಯುವಕರು ಮನಗುತ್ತಿ ಬಸ ನಿಲ್ದಾಣದ ಮುಂಭಾಗದಲ್ಲಿ ತಂದು ಇಟ್ಟು ನಂತರ ಅದಕ್ಕೆ ವಿರೋಧ ವ್ಯಕ್ತವಾದ ಮೇಲೆ ಆ. 8 ರಂದು ಮಣಗುತ್ತಿ ಗ್ರಾಮದ ಮರಾಠ ಸಮಾಜದ ಮುಖಂಡರು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ತಾವೇ ತೆರವುಗೊಳಿಸಿ ತಮ್ಮ ಸ್ವಾದಿನದಲ್ಲಿ ಇಟ್ಟುಕೊಂಡಿದ್ದರು. ಇದು ಗಡಿ ಭಾಗದಲ್ಲಿ ಅಶಾಂತಿ ನಿರ್ಮಾಣವಾಗಿ ರಾಜಕೀಯ ಬಣ್ಣ ಪಡೆದುಕೊಂಡಿತ್ತು.

ಈ ನಿಟ್ಟಿನಲ್ಲಿ ಮಣಗುತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳಾದ ಮನಗುತ್ತಿ, ಬೆನಕನಹೊಳಿ ಹಾಗೂ ಬೋಳಶ್ಯಾನಟ್ಟಿ ಗ್ರಾಮದ ಮುಖಂಡರು ಮಣಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದು, ಶಿವಾಜಿ ಪ್ರತಿಮೆ ತೆರವುಗೊಳಿಸಿದ ಜಾಗವು ಮೂರು ಗ್ರಾಮಗಳಿಗೆ ಸೇರಿದ್ದರಿಂದ ಆ ಸ್ಥಳದಲ್ಲಿ ಯಾವುದೇ ಮೂರ್ತಿ ಪ್ರತಿಷ್ಠಾಪನೆ ಮಾಡದೇ ಮನಗುತ್ತಿ ಗ್ರಾಮದ ಹೊರವಲಯದ ಸಮುದಾಯ ಭವನದ ಹಿಂದೆ ಲಕ್ಷ್ಮೀದೇವಿ ಟ್ರಸ್ಟ್ ಜಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ, ಬಸವೇಶ್ವರ ಮೂರ್ತಿ, ಡಾ.ಅಂಬೇಡ್ಕರ್, ವಾಲ್ಮೀಕಿ ಮಹರ್ಷಿ ಮತ್ತು ಕೃಷ್ಣ ಗೌಳಿ ಮೂರ್ತಿ ಹೀಗೆ ಮೂರು ಗ್ರಾಮಸ್ಥರ ಮುಖಂಡರು ಸೇರಿ ಲಕ್ಷ್ಮೀದೇವಿ ಟ್ರಸ್ಟ್ ಕಮಿಟಿ ರಚನೆ ಮಾಡಿಕೊಂಡು ಎಲ್ಲರ ಒಪ್ಪಿಗೆ ಪಡೆದುಕೊಂಡು ಐದು ಮೂರ್ತಿಗಳನ್ನು ಒಂದೇ ಜಾಗದಲ್ಲಿ ಒಂದೇ ದಿನ ಪ್ರತಿಷ್ಠಾಪನೆ ಮಾಡುವುದೆಂದು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.