ETV Bharat / state

ಕರ್ನಾಟಕಕ್ಕೆ ನೀರು ಬಿಡದಂತೆ ಮಹಾ ಸಿಎಂಗೆ ಶಿವಸೇನೆ ಶಾಸಕನ ಪತ್ರ.. ದೇವರು ಕೊಡ್ತಿದ್ದರೂ,... - undefined

ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಕರ್ನಾಟಕ ಸರ್ಕಾರ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನೀರು ಬಿಡದಂತೆ ಶಿವಸೇನೆ ಶಾಸಕ ಶಂಭುರಾಜ ದೇಸಾಯಿ ಮೇ 8 ರಂದು ಮಹಾ ಸಿಎಂ ಫಡ್ನವಿಸ್‌ಗೆ ಪತ್ರ ಬರೆದಿದ್ದಾರೆ.

ಶಿವಸೇನೆ ಶಾಸಕ ಶಂಭುರಾಜ
author img

By

Published : May 10, 2019, 10:06 AM IST

ಚಿಕ್ಕೋಡಿ : ಕರ್ನಾಟಕ ರಾಜ್ಯಕ್ಕೆ ನೀರು ಬಿಡ್ತಿರುವುದನ್ನ ವಿರೋಧಿಸಿ ಶಿವಸೇನೆ ಶಾಸಕ ಶಂಭುರಾಜ ದೇಸಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಸಿಎಂ ದೇವೇಂದ್ರ ಫಡ್ನವಿಸ್‌ಗೆ ಪತ್ರ ಬರೆದ ಸತಾರಾ ಜಿಲ್ಲೆಯ ಪಾಟಣ್ ಕ್ಷೇತ್ರದ ಶಾಸಕ ಶಂಭುರಾಜ ದೇಸಾಯಿ ಅವರು, ಕೃಷ್ಣಾ ನದಿಗೆ ಕೊಯ್ನಾ ಡ್ಯಾಂನಿಂದ ನೀರು ಬಿಡುಗಡೆ ಮಾಡದಂತೆ ಪತ್ರ ಬರೆದಿದ್ದು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಡ್ಯಾಂನಲ್ಲಿ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಹೊಂದಿದ್ದು. ಈಗ ಕೊಯ್ನಾ ಡ್ಯಾಂನಲ್ಲಿ ಪ್ರಸ್ತುತ 36.89 ಟಿಎಂಸಿ ನೀರು ಸಂಗ್ರಹ ಹೊಂದಿದೆ.

ಕರ್ನಾಟಕದಲ್ಲಿ ಬತ್ತಿ ಬರಿದಾಗಿರೋ ಕೃಷ್ಣಾ ನದಿ, ಕುಡಿಯುವ ನೀರಿಗಾಗಿ ಹಾಹಾಕಾರ ಎದುರಿಸುತ್ತಿದ್ದು, ಜನ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ರಾಜ್ಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಹರಿಯುವ ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನೀರು ಬಿಡದಂತೆ ಶಿವಸೇನೆ ಶಾಸಕ ಶಂಭುರಾಜ ದೇಸಾಯಿ ಮೇ 8 ರಂದು ಸಿಎಂ ಫಡ್ನವಿಸ್‌ಗೆ ಪತ್ರ ಬರೆದಿದ್ದಾರೆ. ಶಿವಸೇನೆಯ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಿರುವ ರೈತರು, ಮತ್ತೆ ನೀರಿಗಾಗಿ ಬೀದಿಗಿಳಿಯಲು ಮುಂದಾಗಿದ್ದಾರೆ.

Intro:ಕೊಯ್ನಾ ಜಲಾಶಯದಿಂದ ಕರ್ನಾಟಕ್ಕೆ ನೀರು ಬಿಡದಂತೆ ಮಹಾ ಸಿಎಂಗೆ ಪತ್ರBody:ಚಿಕ್ಕೋಡಿ :

ಕರ್ನಾಟಕ ರಾಜ್ಯಕ್ಕೆ ನೀರು ಬಿಡುಗಡೆ ವಿರೋಧಿಸಿ ಶಿವಸೇನೆ ಶಾಸಕ ಶಂಭುರಾಜ ದೇಸಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗೆ ಪತ್ರ ಬರೆದ ಸಾತಾರಾ ಜಿಲ್ಲೆಯ ಪಾಟಣ್ ಕ್ಷೇತ್ರದ ಶಾಸಕ ಶಂಭುರಾಜ ದೇಸಾಯಿ ಅವರು ಕೃಷ್ಣಾ ನದಿಗೆ ಕೊಯ್ನಾ ಡ್ಯಾಂನಿಂದ ನೀರು ಬಿಡುಗಡೆ ಮಾಡದಂತೆ ಪತ್ರ ಬರೆದಿದ್ದು ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಡ್ಯಾಂನಲ್ಲಿ ೧೦೫ ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಹೊಂದಿದ್ದು. ಈಗ ಕೊಯ್ನಾ ಡ್ಯಾಂನಲ್ಲಿ ಪ್ರಸ್ತುತ
೩೬.೮೯ ಟಿಎಂಸಿ ನೀರು ಸಂಗ್ರಹ ಹೊಂದಿದೆ.

ಕರ್ನಾಟಕದಲ್ಲಿ ಬತ್ತಿ ಬರಿದಾಗಿರೋ ಕೃಷ್ಣಾ ನದಿ,
ಕುಡಿಯುವ ನೀರಿಗಾಗಿ ಹಾಹಾಕಾರ ಎದುರಿಸುತ್ತಿರುವ ಜನ ಜಾನುವಾರುಗಳು.
ರಾಜ್ಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಹರಿಯುವ ಕೃಷ್ಣಾ ನದಿಗೆ ೪ ಟಿಎಂಸಿ ನೀರು ಕೇಳಿದ್ದ ಕರ್ನಾಟಕ ಸರ್ಕಾರ ಹಿನ್ನಲೆಯಲ್ಲಿ ನೀರು ಬಿಡದಂತೆ ಶಿವಸೇನೆ ಶಾಸಕ ಶಂಭುರಾಜ ದೇಸಾಯಿ ಮೇ ೮ ರಂದು ಸಿಎಂ ಫಡ್ನವಿಸ್ ಗೆ ಪತ್ರ ಬರೆದಿದ್ದಾರೆ

ಇದರಿಂದ ಮತ್ತೇ ನೀರಿಗಾಗಿ ಬೀದಿಗಿಳಿಯಲು ಮುಂದಾದ ರೈತರು, ಮಹಾರಾಷ್ಟ್ರದ ಶಾಸಕರ ನಡೆಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ.

ಪೊಟೊ ೧) ಶಾಸಕ ಶಂಭುರಾಜ ದೇಸಾಯಿ
ಪೊಟೊ ೨) ಮಹಾ ಸಿಎಂಗೆ ಬರೆದ ಪತ್ರ ಮರಾಠಿಯಲ್ಲಿ ಇದೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.