ETV Bharat / state

ಕಾಂಗ್ರೆಸ್​ಗೆ ಶಕ್ತಿ ತುಂಬಿದ ಶೆಟ್ಟರ್ ಸವದಿಯವರನ್ನು ಕೈ ಬಿಡುವುದಿಲ್ಲ: ಡಿ.ಕೆ.ಶಿವಕುಮಾರ್ - ಕಾಂಗ್ರೆಸ್​ಗೆ ಶಕ್ತಿ ತುಂಬಿದ ಶೆಟ್ಟರ್ ಸವದಿ

ಚುನಾವಣೆಯಲ್ಲಿ ಗೆದ್ದಿರಬಹುದು, ಸೋತಿರಬಹುದು. ಆದರೆ ಶೆಟ್ಟರ್, ಸವದಿ ನಮ್ಮ ಕಾಂಗ್ರೆಸ್ ನಾಯಕರು. ಆಂತರಿಕ ವಿಚಾರಗಳನ್ನು ಚರ್ಚೆ ಮಾಡಿ, ಸಲಹೆ ಪಡೆಯಲು ಸೌಹಾರ್ದಯುತ ಭೇಟಿಗೆ ಬಂದಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ಕೊಟ್ಟರು.

DCM DK Sivakumar spoke at the press conference.
ಡಿಸಿಂ ಡಿ ಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : May 31, 2023, 11:34 AM IST

ಡಿಸಿಂ ಡಿ ಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಳಗಾವಿ: ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದವರಿಗೆ ರಾಜಕಾರಣದಲ್ಲಿ ಯಾವ ಸಮಯದಲ್ಲಿ ಏನು ಮಾಡಬೇಕು, ಅದು ನಮಗೆ ಗೊತ್ತಿದೆ. ನಾವು ಅವರ ಜೊತೆ ಇದ್ದೇವೆ. ಇಡೀ ಪಕ್ಷ ಅವರ ಜೊತೆ‌ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಬೆಳಗಾವಿ ಪ್ರವಾಸಿ ಮಂದಿರದಲ್ಲಿ‌ ಇಂದು ಬೆಳಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಚುನಾವಣೆ ಬ್ಯುಸಿ ಇದ್ದೆ. ಚುನಾವಣೆ ನಡೆಯುವಾಗ, ಗೆದ್ದಾಗ ಮತ್ತು ಚುನಾವಣೆ ಆದ ಮೇಲೆ ನಮ್ಮ ಪಕ್ಷಕ್ಕೆ ಶಕ್ತಿ ಕೊಟ್ಟ ನಾಯಕರನ್ನು ಭೇಟಿ ಮಾಡಬೇಕಿತ್ತು. ಆದರೆ ಸಮಯ ಸಿಕ್ಕಿರಲಿಲ್ಲ.

ಸರ್ಕಾರ ರಚನೆ, ಸಂಪುಟ ರಚನೆ, ಶಾಸಕಾಂಗ ಸಭೆ, ನಮ್ಮ ಸರ್ಕಾರದ ಗ್ಯಾರಂಟಿಗಳು, ಇಲಾಖೆಗಳ ಪ್ರಗತಿ ಪರಿಶೀಲನೆಗಳು ಈ ಎಲ್ಲ ಕೆಲಸಗಳನ್ನು ಸರ್ಕಾರ ಪ್ರಾರಂಭ ಮಾಡಬೇಕಿತ್ತು. ಆದರೂ ಮಧ್ಯದಲ್ಲಿ ಟೈಂ ಮಾಡಿಕೊಂಡು ಪ್ರತ್ಯೇಕವಾಗಿ ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಭೇಟಿ ಆಗಲು ಬಂದಿದ್ದೇನೆ ಎಂದು ತಿಳಿಸಿದರು.

ಇದಲ್ಲದೇ ತುಮಕೂರಿನ ಗುಬ್ಬಿ ವಾಸಣ್ಣ, ಅರಸಿಕೇರೆ ಶಿವಲಿಂಗೇಗೌಡ, ಪುಟ್ಟಣ್ಣ, ಬಾಬುರಾವ ಚಿಂಚನಸೂರ ಅವರೆಲ್ಲ ಬೇರೆ ಪಾರ್ಟಿಯಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಬಂದು ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಈಗ ಅವರಿಗೆ ನಾವು ಶಕ್ತಿ ತುಂಬಬೇಕಾದದ್ದು ನಮ್ಮ ಕರ್ತವ್ಯ. ಆ ಹಿನ್ನೆಲೆಯಲ್ಲಿ ಅವರ ಜೊತೆಗೆ ಪಕ್ಷದ ಕೆಲ ಆಂತರಿಕ ವಿಚಾರಗಳನ್ನು ಚರ್ಚೆ ಮಾಡಿ, ಅವರ ಸಲಹೆ ಪಡೆಯಲು ಸೌಹಾರ್ದಯುತವಾಗಿ ಭೇಟಿ ಮಾಡಲು ಬಂದಿದ್ದೇನೆ. ಅಷ್ಟು ಬಿಟ್ಟರೆ ರಾಜಕೀಯದ ವಿಶೇಷತೆ ಏನೂ ಇಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಇವತ್ತು ಮಧ್ಯಾಹ್ನ ಸಚಿವರ ಸಭೆ ಇದೆ, ನಾಳೆ ಕ್ಯಾಬಿನೇಟ್ ಮೀಟಿಂಗ್ ಕೂಡ ಇದೆ. ಅದಕ್ಕೆ ಮುಂಚಿತವಾಗಿ ಮುಖ್ಯಮಂತ್ರಿಗಳು ಎಲ್ಲರನ್ನೂ ಆಹ್ವಾನಿಸಿದ್ದಾರೆ. ಮುಖ್ಯಮಂತ್ರಿಗಳು ಕೂಡ ಎಲ್ಲ ಇಲಾಖೆಗಳ ಜೊತೆ ಚರ್ಚೆ ಮಾಡಿದ್ದಾರೆ. ಎಲ್ಲ ಇಲಾಖೆಗಳ ಮಂತ್ರಿಗಳು ಕೂಡ ಚರ್ಚೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಆಂತರಿಕ ವಿಚಾರಗಳನ್ನು ಅವರು ಒಪ್ಪಿಕೊಂಡರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಯಾವುದೇ ಕಂಡಿಷನ್ ಮತ್ತೊಂದು ಏನೂ ಇಲ್ಲ. ಯಾರೂ ಒಪ್ಪಿಕೊಳ್ಳುವುದು ಬಿಡುವುದು ಇಲ್ಲ. ಅವರೆಲ್ಲ ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು. ಇಲ್ಲಿ ಚೌಕಾಶಿ ಮಾಡುವಂಥದ್ದು ಏನೂ ಇಲ್ಲ. ಯಾರು ನಮ್ಮ ಜೊತೆ ಧೈರ್ಯ ಮಾಡಿ ನಮ್ಮ ಜೊತೆ ಕೈಜೋಡಿಸಿದ್ದಾರೆ, ಅವರ್ಯಾರನ್ನೂ ಕೈ ಬಿಡುವ ಪ್ರಶ್ನೆ ಕಾಂಗ್ರೆಸ್ ಪಕ್ಷಕ್ಕೆ ಬರುವುದಿಲ್ಲ ಎಂದು ಡಿಕೆಶಿ ವಿವರಿಸಿದರು.

ಲೋಕಸಭೆ ಚುನಾವಣೆ ದೃಷ್ಟಿಯಿಂದ ಅವರನ್ನು ಭೇಟಿಯಾಗಲು ಬಂದಿದ್ದಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅದೆಲ್ಲಾ ಬಿಡಿ ಈಗ ಎಂದ ಡಿಕೆಶಿ, ಅವರೆಲ್ಲ ನಮ್ಮ ನಾಯಕರು, ಪಕ್ಷದ ಕಾರ್ಯಕರ್ತರಲ್ಲ. ಚುನಾವಣೆಯಲ್ಲಿ ಅವರು ಗೆದ್ದಿರಬಹುದು, ಸೋತಿರಬಹುದು. ಆದರೆ ಅವರೆಲ್ಲಾ ನಮ್ಮ ನಾಯಕರು ಎಂದು ಡಿ.ಕೆ.ಶಿವಕುಮಾರ ಸಮರ್ಥಿಸಿಕೊಂಡರು.

ಇದನ್ನೂಓದಿ:ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್ಐಎ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.