ಚಿಕ್ಕೋಡಿ: ತೋಟದ ವಸತಿ ಹಾಗೂ ಗ್ರಾಮದ ಸುತ್ತಮುತ್ತಲಿನ ಏಳು ಜನರಿಗೆ ನರಿಯೊಂದು ಕಚ್ಚಿ ಗಾಯಗೊಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕವಲಗುಡ್ಡ ಗ್ರಾಮದಲ್ಲಿ ನಡೆದಿದೆ.
ಕವಲಗುಡ್ಡ ಗ್ರಾಮದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ರಣವ ತಾನಾಜಿ ಖೋತ ಎಂಬ ಬಾಲಕನ ಎರಡು ಕಾಲುಗಳಿಗೆ ನರಿ ಕಚ್ಚಿದೆ. ತಡೆಯಲು ಬಂದ ಅಜ್ಜಿ ರಂಜನಾ ಪರಶುರಾಮ ಮೋಟೆ ಎನ್ನುವವರನ್ನೂ ಕಚ್ಚಿ ಗಾಯಗೊಳಿಸಿದೆ.
ಅಲ್ಲದೆ, ಇದೇ ನರಿ ಸುತ್ತಮುತ್ತಲಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶ ವಗ್ಗ, ಶಂಕರ ಬೇಸರಾಮ, ಸುರೇಖಾ ಬೇಸರಾಮ, ಅಶ್ವಿನಿ ತೆಗ್ಗಿನವರ ಹಾಗೂ ಮೋಳೆ ಗ್ರಾಮದ ಲಕ್ಷ್ಮೀ ಪಾರಗಾಂವೆ ಎಂಬುವರನ್ನು ಸಹ ಕಚ್ಚಿ ಗಾಯಗೊಳಿಸಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಭಾಗದಲ್ಲಿ ನರಿಗಳ ಹಾವಳಿ ಹೆಚ್ಚಾಗಿದ್ದು, ಕೊನೆಗೆ ಕೌಲಗುಡ್ಡ ಗ್ರಾಮದ ಜನತೆ ನರಿಯನ್ನು ಬಲಿ ಪಡೆದಿದ್ದಾರೆ.