ETV Bharat / state

ರಾಜೀವ್, ಇಂದಿರಾ ಗಾಂಧಿ ಹತ್ಯೆಯಂತೆ ಸಿದ್ದರಾಮಯ್ಯನವರನ್ನು ಗುರಿ ಮಾಡಲಾಗಿದೆ: ಸುರ್ಜೇವಾಲಾ ಆರೋಪ

ಉನ್ನತ ಶಿಕ್ಷಣ ಸಚಿವ ಅಶ್ವತ್ಥ​ನಾರಾಯಣ್​ ಹೇಳಿಕೆಗೆ ಸುರ್ಜೇವಾಲಾ ಖಂಡನೆ - ರಾಜೀವ್, ಇಂದಿರಾ ಗಾಂಧಿ ಹತ್ಯೆಯಂತೆ ಸಿದ್ದರಾಮಯ್ಯನವರನ್ನು ಗುರಿ ಮಾಡಲಾಗಿದೆ - ಸುರ್ಜೇವಾಲಾ ಆರೋಪ

randeep singh surjewala
ಸುರ್ಜೇವಾಲಾ
author img

By

Published : Feb 19, 2023, 5:38 PM IST

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುರ್ಜೇವಾಲಾ

ಚಿಕ್ಕೋಡಿ(ಬೆಳಗಾವಿ): ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಸರ್ಕಾರದ ಸಚಿವರೊಬ್ಬರ ಮಾತನ್ನು ನೀವು ಕೇಳಿರಬೇಕು. ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಟಿಪ್ಪು ಸುಲ್ತಾನ್​ ರೀತಿ ಹೊಡೆಯಬೇಕು ಎಂಬ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್​ ಅವರ ಮಾತನ್ನು ಕೇಳಿದ್ದೀರಾ ತಾನೇ..! ಆ ಮಾತುಗಳು ಅಶ್ವತ್ಥನಾರಾಯಣ್​ ಅವರದ್ದಲ್ಲ, ಹಾಗೆ ಮಾತನಾಡಿಸುವವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್, ಜೆ ಪಿ‌ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕೊಲೆ ಮಾಡಿ ಅಂತ ಬಹಿರಂಗವಾಗಿ ಸಚಿವರೊಬ್ಬರು ಹೇಳುತ್ತಾರೆ. ಈ ರೀತಿಯ ಹಿಂಸೆಯ ರಾಜಕಾರಣ‌ವನ್ನು ಬಳಿಸಿ ಕಾಂಗ್ರೆಸ್ ಮೇಲೆ ದಾಳಿ ಮಾಡಲಾಗಿದೆ. ನಾಥೂರಾಮ್​​ ಗೋಡ್ಸೆ ವಿಚಾರಧಾರೆ ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಿತು, ಹಿಂಸೆಯ ರಾಜಕಾರಣದಿಂದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಕೊಲೆ ಆಯಿತು ಎಂದರು.

ಈಗ ಸಿದ್ದರಾಮಯ್ಯನವರನ್ನು ಹತ್ಯೆ ಮಾಡಲು ಬಯಸುತ್ತಿದ್ದಾರೆ. ನಾಳೆ ಡಿ ಕೆ ಶಿವಕುಮಾರ್​ ಹಾಗೂ ಸತೀಶ್​ ಜಾರಕಿಹೊಳಿಯವರನ್ನು ಕೊಲೆ ಮಾಡಬಹುದು. ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಮಾತನಾಡುವುದು ಇವರಿಗೆ ಬೇಡ, ಕಾಂಗ್ರೆಸ್ ಹಿಂದುಳಿದವರ ಬಗ್ಗೆ ಮಾತನಾಡುವುದು ಇವರಿಗೆ ಇಷ್ಟವಿಲ್ಲ. ಅವರಿಗೆ ಬೇಕಾಗಿರುವುದು ಕೋಮು ಗಲಭೆಗಳು ಮಾತ್ರ ಎಂದು ಬಿಜೆಪಿ ನಾಯಕರ ವಿರುದ್ಧ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಟಿಪ್ಪುವಿನಂತೆ ಹೊಡೆದು ಹಾಕಬೇಕು: ಸಚಿವ ಅಶ್ವತ್ಥನಾರಾಯಣ್​ ಹೇಳಿಕೆಗೆ ಸಿದ್ದರಾಮಯ್ಯ ಕೆಂಡಾಮಂಡಲ

ಅಶ್ವತ್ಥನಾರಾಯಣ್​ ಹೇಳಿಕೆ: ಮಂಡ್ಯದ ಸಾತನೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ಭರದಲ್ಲಿ ಅಶ್ವತ್ಥ ನಾರಾಯಣ್ ಅವರು, 'ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪುವಿನ ರೀತಿ ಹೊಡೆದು ಹಾಕಬೇಕು. ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯರವರು ಬಂದು ಬಿಡುತ್ತಾರೆ. ನಿಮಗೆ ಸಾವರ್ಕರ್ ಬೇಕಾ, ಟಿಪ್ಪು ಬೇಕಾ? ಎಂಬುದನ್ನು ನೀವೇ ತೀರ್ಮಾನಿಸಿ. ಹುರಿಗೌಡ ನಂಜೇಗೌಡ ಅವರು ಟಿಪ್ಪುವಿಗೆ ಏನು ಮಾಡಿದ್ರು ಅನ್ನೋದು ನಿಮಗೆ ಗೊತ್ತಿದೆ. ಅದೇ ರೀತಿ ಇವರನ್ನು ಹೊಡೆದು ಹಾಕಬೇಕು. ರಾಜ್ಯದಲ್ಲಿ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ರಾಜಕೀಯ ನೆಲೆಯಲ್ಲಿ ಹೇಳಿದ ಮಾತುಗಳು, ಸಿದ್ದರಾಮಯ್ಯರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ಸಚಿವ ಅಶ್ವತ್ಥನಾರಾಯಣ್​

ವಿಷಾದ ವ್ಯಕ್ತಪಡಿಸಿದ್ದ ಸಚಿವರು: ತಮ್ಮ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಅಶ್ವತ್ಥನಾರಾಯಣ್ ಅವರು ಈ ಕುರಿತು ವಿಷಾದ ವ್ಯಕ್ತಪಡಿಸಿದ್ದರು. ನಾನು ಆ ಮಾತುಗಳನ್ನು ವ್ಯಕ್ತಿಗತವಾಗಿ ಹೇಳಿರುವಂತದ್ದಲ್ಲ. ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಹೇಳಿರುವ ಮಾತುಗಳು ಅವು. ನನಗೆ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಾನು ಹೇಳಿರುವ ಮಾತುಗಳನ್ನು ತಿರುಚಿ ಬಿತ್ತರಿಸುವುದು ಸಿದ್ದರಾಮಯ್ಯ ಅವರಿಗೆ ಇಂದು ನಿಮಿಷದ ಕೆಲಸ. ನಾನು ಹೇಳಿದ ಮಾತುಗಳಿಂದ ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ ಎಂದು ಅಶ್ವತ್ಥನಾರಾಯಣ್​ ಮರು ಹೇಳಿಕೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.