ETV Bharat / state

ದ್ವಿತೀಯ ಪಿಯುಸಿ ಆನ್‌ಲೈನ್‌ ತರಗತಿಗಳ ವೇಳಾಪಟ್ಟಿ ಪ್ರಕಟ - ದ್ವಿತೀಯ ಪಿಯುಸಿ ಆನ್‌ಲೈನ್‌ ವೇಳಾಪಟ್ಟಿ ಪ್ರಕಟ

ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ತರಗತಿ ಆರಂಭ ನಿರ್ಧಾರವಾಗದ ಕಾರಣದಿಂದಾಗಿ ದ್ವಿತೀಯ ಪಿಯುಸಿ ತರಗತಿಗೆ ಆನ್‌ಲೈನ್‌ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ.

Second PUC Online classes Schedule Announced
ದ್ವಿತೀಯ ಪಿಯುಸಿ ತರಗತಿಗೆ ಆನ್‌ಲೈನ್‌ ವೇಳಾಪಟ್ಟಿ ಪ್ರಕಟ
author img

By

Published : Jul 14, 2021, 4:17 PM IST

ಬೆಂಗಳೂರು: ಕೊರೊನಾ ಕಾರಣಕ್ಕೆ ಶೈಕ್ಷಣಿಕ ತರಗತಿಗಳ ಮೇಲೆ ಹೊಡೆತ ಬಿದ್ದಿದ್ದು,‌ ಇದೀಗ ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷವು ಜು.15ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಪಾಠಗಳನ್ನು ಆರಂಭಿಸಲಾಗುತ್ತಿದೆ. ಭೌತಿಕ ತರಗತಿಗಳು ಆರಂಭವಾಗುವ ಬಗ್ಗೆ ಇನ್ನೂ ನಿರ್ಧಾರವಾಗದ ಕಾರಣ, ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಾಠಗಳನ್ನು ಆನ್‌ಲೈನ್‌ನಲ್ಲಿ ಆರಂಭಿಸಬೇಕಾಗಿದೆ.

ಕಳೆದ ಸಾಲಿನಲ್ಲಿ ಫ್ರೀ ರೆಕಾರ್ಡಿಂಗ್ ಯೂಟ್ಯೂಬ್ ತರಗತಿಗಳನ್ನು ನಡೆಸಿದ ಕಾರಣ ಪ್ರತಿದಿನ ಲಿಂಕ್‌ಗಳನ್ನು ಕಳುಹಿಸಲಾಗುತ್ತಿತ್ತು. ಆ ಲಿಂಕ್‌ಗಳನ್ನು ವಿದ್ಯಾರ್ಥಿಗಳಿಗೆ ಪ್ರತಿ ಉಪನ್ಯಾಸಕರು ತಾವು ರಚಿಸಿಕೊಂಡ ವಿಷಯವಾರು ವಾಟ್ಸ್​ ಆಪ್ ಗ್ರೂಪ್‌ಗೆ ಕಳುಹಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರತಿ ಕಾಲೇಜಿನ ಉಪನ್ಯಾಸಕರೇ, ಅವರ ವಿದ್ಯಾರ್ಥಿಗಳಿಗೆ MS Team, Google Meet, Zoom ಅಥವಾ Jio ಮೀಟ್‌ ಆ್ಯಪ್‌ಗಳನ್ನು ಉಪಯೋಗಿಸಿಕೊಂಡು ಪಾಠಗಳನ್ನು ಆರಂಭಿಸಲು ತಿಳಿಸಿದೆ. ಈ ಸಂಬಂಧ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಲ್ಲಿರುವಂತೆ ಎಲ್ಲಾ ತರಗತಿಗಳಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನು ರಚಿಸಿ ಆದೇಶಿಸಿದೆ.

ವೇಳಾಪಟ್ಟಿ ಹೀಗಿದೆ:

  • ಬೆಳಗ್ಗೆ 10.00 ರಿಂದ 11.00 - ಮೊದಲ ಅವಧಿ
  • ಬೆಳಗ್ಗೆ 11.00 ರಿಂದ 12.00 ಎರಡನೇ ಅವಧಿ
  • 12.00 ರಿಂದ 12:30 – ವಿರಾಮ
  • 12.30 ರಿಂದ 01:30 – ಮೂರನೇ ಅವಧಿ
  • 01.30 ರಿಂದ 02.30 - ನಾಲ್ಕನೇ ಅವಧಿ

ವೇಳಾಪಟ್ಟಿಗನುಗುಣವಾಗಿ ತರಗತಿಗಳನ್ನು ಸೂಕ್ತ ಲಿಂಕ್‌ಗಳನ್ನು ಜನರೇಟ್ (Generate) ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕಳುಹಿಸಿ ತರಗತಿ ನಡೆಸಲು ತಿಳಿಸಿದೆ. ಈ ಸಂಬಂಧ ಎಲ್ಲಾ ಉಪನ್ಯಾಸಕರು ಕಡ್ಡಾಯವಾಗಿ ಪಾಠಗಳನ್ನು ನಡೆಸಿ, ಹಾಜರಾತಿಯನ್ನು ತೆಗೆದುಕೊಂಡು, ಪ್ರಾಂಶುಪಾಲರಿಗೆ ಪ್ರತಿದಿನದ ಹಾಜರಾತಿ ಮಾಹಿತಿಯನ್ನು ಕಳುಹಿಸಬೇಕು.

ಯಾವುದೇ ಕಾಲೇಜಿನಲ್ಲಿ ಉಪನ್ಯಾಸಕರು ಇಲ್ಲದಿದ್ದ ಪಕ್ಷದಲ್ಲಿ 20 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಲ್ಲಿ ಈ ವಿದ್ಯಾರ್ಥಿಗಳನ್ನು ಹತ್ತಿರದ ಕಾಲೇಜಿನ, ವಿಷಯದ ಉಪನ್ಯಾಸಕರಿಗೆ ಸರಿಹೊಂದಿಸಬೇಕು. ತರಗತಿಗಳನ್ನು ನಡೆಸುವ ಜವಾಬ್ದಾರಿಯನ್ನು ನೀಡಬೇಕು.‌ ಆಯಾ ಜಿಲ್ಲೆಯ ಉಪನಿರ್ದೇಶಕರು ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗುವ ಬಗ್ಗೆ ವಿವರವನ್ನು ಪಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ ; ತುಟ್ಟಿಭತ್ಯೆ ಶೇ.28ಕ್ಕೆ ಹೆಚ್ಚಿಸಲು ಸಂಪುಟ ಸಭೆ ಅನುಮೋದನೆ

ಕಾಲೇಜುಗಳಿಂದಲ್ಲೇ ಪಾಠ-ಪ್ರವಚನ:

ಈಗಾಗಲೇ ಜು.01 ರಿಂದಲೇ ಉಪನ್ಯಾಸಕರು ಕಡ್ಡಾಯವಾಗಿ ಕಾಲೇಜುಗಳಿಗೆ ಹಾಜರಾಗುತ್ತಿರುವ ಕಾರಣ ತಮ್ಮ ಕಾಲೇಜುಗಳಿಂದಲೇ ಪಾಠ ಪ್ರವಚನಗಳನ್ನು ನಡೆಸಬೇಕು. ಎಲ್ಲಾ ಹಂತಗಳಲ್ಲಿ ಸೂಕ್ತ ರೀತಿಯ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ಎಲ್ಲಾ ಉಪನಿರ್ದೆಶಕರು ಪ್ರತಿದಿನ ಒಂದೆರಡು ಕಾಲೇಜುಗಳಿಗೆ ಭೇಟಿ ನೀಡಿ ಆನ್‌ಲೈನ್ ತರಗತಿಗಳು ನಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಿ, ಕೇಂದ್ರ ಕಚೇರಿಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.