ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದ ಶಿವಯೋಗಿ ನಗರದ ಸಾವಿತ್ರಿಬಾಯಿ ಫುಲೆ ಸರ್ಕಲ್ನಲ್ಲಿ ಸ್ಥಳೀಯರು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚಾರಣೆ ಆಚರಿಸಿದ್ದಾರೆ.
ಭಾರತ ದೇಶದ ಮೊಟ್ಟಮೊದಲ ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಹಾಗೂ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸತ್ಯ ಶೋಧಕಿ ಆಧುನಿಕ ಶಿಕ್ಷಣದ ತಾಯಿ ಎಂದು ಪ್ರಖ್ಯಾತಿ ಪಡೆದ ಸಾವಿತ್ರಿಬಾಯಿ ಫುಲೆ ಅವರ ದಿನಾಚರಣೆಯನ್ನು ಸ್ಥಳೀಯರು ಆಚರಿಸಿ ಅವರ ಜೀವನದ ಸಾಧನೆ ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಅಥಣಿ ಪಟ್ಟಣದ ನಾಗರಿಕರು, ಶೆಟ್ಟರ್‌ಮಠದ ಮರುಳಸಿದ್ಧ ಸ್ವಾಮೀಜಿ ಭಾಗವಹಿಸಿದ್ದರು.