ETV Bharat / state

ಶೀಘ್ರವೇ ಸವದತ್ತಿ ರೇಣುಕಾದೇವಿ ದೇಗುಲ ಓಪನ್​​ : ಡಿಸಿ ಎಂ.ಜಿ. ಹಿರೇಮಠ - ಸವದತ್ತಿಯ ರೇಣುಕಾದೇವಿ

ದೇವಸ್ಥಾನ ಆವರಣದಲ್ಲಿನ ಅಂಗಡಿ ಮುಂಗಟ್ಟು ಮಾಲೀಕರೆಲ್ಲರೂ ತೊಂದರೆಗೆ ಸಿಲುಕಿದ್ದಾರೆ. ಅಲ್ಲದೇ ನಮ್ಮಲ್ಲಿ ಕೊರೊನಾ ಕೂಡ ನಿಯಂತ್ರಣಕ್ಕೆ ಬಂದಿದೆ. ಶೇ 0.4 ರಷ್ಟು ‌ಮಾತ್ರ ಪಾಸಿಟಿವಿಟಿ ರೇಟ್ ಇದೆ. ಹೀಗಾಗಿ ಎಲ್ಲ ಮಾರ್ಗಸೂಚಿ ಅನುಸರಿಸಿ, ದೇವಸ್ಥಾನ ತೆರೆಯಲು ಅನುಮತಿ ನೀಡುವ ಚಿಂತನೆ ನಡೆಸಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಶೀಘ್ರವೇ ಸವದತ್ತಿ ರೇಣುಕಾದೇವಿ ದೇಗುಲ
ಶೀಘ್ರವೇ ಸವದತ್ತಿ ರೇಣುಕಾದೇವಿ ದೇಗುಲ
author img

By

Published : Sep 20, 2021, 11:56 AM IST

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಶೀಘ್ರವೇ ಸವದತ್ತಿಯ ರೇಣುಕಾದೇವಿ ಹಾಗೂ ಚಿಂಚಲಿ ಮಾಯಕ್ಕ ದೇಗುಲದ ಬಾಗಿಲು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಎರಡೂ ದೇಗುಲಗಳಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಭಕ್ತರ ಬೇಡಿಕೆಯ ಅನುಸಾರ ಶೀಘ್ರವೇ ಅನುಕೂಲ ಮಾಡಿಕೊಡಲಾಗುವುದು ಎಂದರು.

ಶೀಘ್ರವೇ ಸವದತ್ತಿ ರೇಣುಕಾದೇವಿ ದೇಗುಲ ಓಪನ್​​

ಗಣೇಶ ಚತುರ್ಥಿ ಕೂಡ ಮುಗಿದಿದೆ. ದೇವಸ್ಥಾನ ತೆರೆಯುವ ಸಂಬಂಧ ದೇವಸ್ಥಾನ ಆಡಳಿತ ಮಂಡಳಿ ಜೊತೆಗೆ ಸಭೆ ನಡೆಸುತ್ತೇನೆ. ಕೋವಿಡ್ ಮಾರ್ಗಸೂಚಿಗಳ ಅನ್ವಯ ದೇವಸ್ಥಾನ ತೆರೆಯುವ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಎರಡು ದೇವಾಲಯಗಳಿಗೆ ಮಹಾರಾಷ್ಟ್ರದ ಭಕ್ತರ ಪ್ರಮಾಣ ಹೆಚ್ಚಿದೆ. ಹೀಗಾಗಿ ಕಟ್ಟುನಿಟ್ಟಿನ ಮಾರ್ಗಸೂಚಿ ಅನುಸರಿಸಿ, ದೇವಸ್ಥಾನ ತೆರೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

ದೇವಸ್ಥಾನ ಆವರಣದಲ್ಲಿನ ಅಂಗಡಿ ಮುಂಗಟ್ಟುಗಳು ಮಾಲೀಕರೆಲ್ಲರೂ ತೊಂದರೆಗೆ ಸಿಲುಕಿದ್ದಾರೆ. ಅಲ್ಲದೇ ನಮ್ಮಲ್ಲಿ ಕೊರೊನಾ ಕೂಡ ನಿಯಂತ್ರಣಕ್ಕೆ ಬಂದಿದೆ. ಶೇ 0.4 ರಷ್ಟು ‌ಮಾತ್ರ ಪಾಸಿಟಿವಿಟಿ ರೇಟ್ ಇದೆ. ಹೀಗಾಗಿ ಎಲ್ಲ ಮಾರ್ಗಸೂಚಿ ಅನುಸರಿಸಿ, ದೇವಸ್ಥಾನ ತೆರೆಯಲು ಅನುಮತಿ ನೀಡುವ ಚಿಂತನೆ ನಡೆಸಿದ್ದೇವೆ ಡಿಸಿ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.