ETV Bharat / state

ಭಾರತ್​ ಜೋಡೋ ಯಾತ್ರೆ ನಿಲ್ಲಿಸಲು ಬಿಜೆಪಿಯಿಂದ ಮತ್ತೆ ಕೊರೊನಾ ಹೆಸರು ಬಳಕೆ: ಸತೀಶ್ ಜಾರಕಿಹೊಳಿ

ಕಾಂಗ್ರೆಸ್​ ಕಾರ್ಯಕ್ರಮಗಳಿಗೆ ಕೊರೊನಾ ಬ್ರೇಕ್​​- ಇದೆಲ್ಲಾ ಬಿಜೆಪಿಗರ ಗಿಮಿಕ್​- ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪ

satish jarkiholi
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
author img

By

Published : Dec 25, 2022, 5:39 PM IST

ಬೆಳಗಾವಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆಯ ಯಶಸ್ಸು ತಡೆಗಟ್ಟಲು ಬಿಜೆಪಿ ಮತ್ತೆ ಕೊರೊನಾ ಹೆಸರು ಬಳಕೆ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್​ ಪಕ್ಷದಿಂದ ನಡೆಯುತ್ತಿರುವ ಕಾರ್ಯಕ್ರಮಗಳು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದರಲ್ಲಿ ಮುಖ್ಯವಾದ ಕಾರ್ಯಕ್ರಮವೆಂದರೆ ಭಾರತ್​ ಜೋಡೋ ಯಾತ್ರೆ. ನಮ್ಮ ನಾಯಕ ರಾಹುಲ್​ ಗಾಂಧಿಯವರ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದ್ದು, ಭಾರಿ ಜನಮನ್ನಣೆ ಪಡೆಯುತ್ತಿದೆ. ಇದನ್ನು ಸಹಿಸದ ಬಿಜೆಪಿ ಪಕ್ಷ ಕಾಂಗ್ರೆಸ್​ ಕಾರ್ಯಕ್ರಮಗಳ ತಡೆಗೆ ಮತ್ತೆ ಕೊರೊನಾ ಹೆಸರನ್ನು ಬಳಕೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿ ಕೊರೊನಾ ಹೆಸರಲ್ಲಿ ಹಿಡನ್​ ಅಜೆಂಡಾ: ಕೊರೊನಾ ಪ್ರಾರಂಭದ ಸಮಯದಲ್ಲಿ ಬಹಳ ವೇಗವಾಗಿ ಹರಡಿತ್ತು. ಆಗ ಈ ಕೊರೊನಾ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಮತ್ತು ಇದಕ್ಕೆ ಬೇಕಾದಂತಹ ಚಿಕಿತ್ಸೆಯು ಲಭ್ಯವಿರಲಿಲ್ಲ. ಆದರೆ ಮೂರನೇ ಅಲೆ ಜನರ ಮೇಲೆ ಅಷ್ಟೇನು ಪರಿಣಾಮ ಬೀರಿಲ್ಲ. ಹೀಗಾಗಿ ನಾಲ್ಕನೇ ಅಲೆಯು ಅಪಾಯಕಾರಿ ಎಂಬುದು ಕಾಣುತ್ತಿಲ್ಲ. ಆದರೆ ಬಿಜೆಪಿ ಮಾತ್ರ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಯಾರಾಗಿದೆ. ಮಾಸ್ಕ್​ ಹಾಕಿ ಎಂದು ರೂಲ್ಸ್​ ತರಲು ನೋಡುತ್ತಿದ್ದಾರೆ. ಇವರ ನಡೆಗೆ ಹೆದರಿದ ದೇಶದ ಜನತೆ ಮಾಸ್ಕ್​ ಹಾಕಿಕೊಳ್ಳಲು ಮುಂದಾಗಿದ್ದಾರೆ. ಈಗ ನಾವು ದೇಶದ ಪ್ರಗತಿಯತ್ತ ಗಮನ ಹರಿಸಬೇಕಿದೆ. ಆದರೆ ಬಿಜೆಪಿ ಮಾತ್ರ ಕೊರೊನಾ ಹೆಸರಿನಲ್ಲಿ ಹಿಡನ್​ ಅಜೆಂಡಾ ಪ್ರಾರಂಭಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ತಯಾರಿಗೆ ಕೊರೊನಾ ಕಡಿವಾಣ: ಇನ್ನು ಕೆಲವೇ ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೆಂದೇ ಸಾಕಷ್ಟು ತಯಾರಿಗಳು ಎಲ್ಲಾ ಪಕ್ಷಗಳಿಂದಲೂ ನಡೆಯುತ್ತಿದೆ. ಅದರಲ್ಲೂ ನಮ್ಮ ಕಾಂಗ್ರೆಸ್​ ಪಕ್ಷ ಜನತೆಯ ಕಡೆಗೆ ಗಮನ ಹರಿಸುತ್ತಿದೆ. ಅವರ ಸಮಸ್ಯೆಗಳನ್ನು ಅರಿಯಲೆಂದೇ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಮತ್ತು ಅದರಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸುತ್ತಿದ್ದಾರೆ. ಆದರೆ ಇದನ್ನು ಸಹಿಸದ ಬಿಜೆಪಿಗರು ಕೊರೊನಾ ತಂತ್ರ ಹೂಡಲು ಮುಂದಾಗಿದ್ದಾರೆ. ನಮ್ಮ ಚುನಾವಣಾ ತಯಾರಿಗೆ ಕೊರೊನಾ ಹೆಸರು ಬಳಸಿ ಕಡಿವಾಣ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕ್ರಮಗಳೆಲ್ಲವೂ ವಿಫಲ: ಇತ್ತೀಚೆಗೆ ಬಿಜೆಪಿ ನಾಯಕರು ಜನರ ಮನವೊಲೈಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಆದರೆ ಇದ್ಯಾವುದರಲ್ಲೂ ಜನರು ಪಾಲ್ಗೊಳ್ಳದಿರುವುದು ಬಿಜೆಪಿಗರಿಗೆ ಆತಂಕ ಉಂಟುಮಾಡಿದೆ. ಅವರು ನಡೆಸುವ ಕಾರ್ಯಕ್ರಮಗಳಲ್ಲಿ ಖಾಲಿ ಕುರ್ಚಿಗಳೇ ಹೆಚ್ಚು ತುಂಬಿದ್ದು, ಜನರಿಲ್ಲದೇ ಕಾರ್ಯಕ್ರಮ ನಡೆಸುವಂತಾಗಿದೆ. ಇದನ್ನು ಮಾಧ್ಯಮಗಳಲ್ಲಿಯೇ ತೋರಿಸಲಾಗುತ್ತಿದೆ. ಹೀಗಾಗಿ ಬಿಜೆಪಿಗರಿಗೆ ಮುಂದಿನ ಚುನಾವಣೆಯ ಬಗ್ಗೆ ಭಯ ಶುರುವಾಗಿದೆ. ಇದಕ್ಕೆಂದೇ ಯಶಸ್ವಿಯಾಗಿ ನಡೆಯುತ್ತಿರುವ ಕಾಂಗ್ರೆಸ್​ ಕಾರ್ಯಕ್ರಮಗಳನ್ನು ತಡೆಹಿಡಿಯಲೆಂದೇ ಬಿಜೆಪಿಗರು ಕೊರೊನಾ ಹೆಸರು ಬಳಕೆ ಮಾಡುತ್ತಿದ್ದಾರೆ. ತಮ್ಮ ಸಮಯ ಸಂದರ್ಭಕ್ಕೆ ತಕ್ಕಂತೆ ಅನುಕೂಲವನ್ನು ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾಯವಾದ ಮೋದಿ ಹವಾ: ಇತ್ತೀಚೆಗೆ ನಡೆದ ಮೋದಿ ಏರ್​ಪೋರ್ಟ್​ ಕಾರ್ಯಕ್ರಮಕ್ಕೆ ಜನರಿಗೆ ದುಡ್ಡು ಕೊಟ್ಟು ಕರೆಸಲಾಗಿತ್ತು. ಆದರೂ ಜನಗಳು ಬರದೇ ಕುರ್ಚಿಗಳೆಲ್ಲಾ ಖಾಲಿಯಾಗಿರುವುದು ಕಂಡುಬಂದಿತ್ತು. ಬಿಜೆಪಿಗರು ಎಷ್ಟೇ ಕಸರತ್ತು ಮಾಡಿದರೂ ಜನಗಳು ಅವರನ್ನು ನಂಬುವುದನ್ನೇ ಬಿಟ್ಟಿದ್ದಾರೆ. ಅವರಿಗೀಗ ಸರ್ಕಾರ ಬದಲಾಗಬೇಕಿದೆ. ಮೋದಿ ಹವಾ ಈಗಾಗಲೇ ಮಾಯವಾಗುತ್ತಿದೆ. ನಿಮ್ಮ ಸುಳ್ಳು ಆಸೆಗಳಿಗೆ ಇನ್ನು ಜನರು ಮರಳಾಗುವುದಿಲ್ಲ. ಸದ್ಯ ಕಾಂಗ್ರೆಸ್​ ಕಾರ್ಯಕ್ರಮಗಳೆಲ್ಲವೂ ತುಂಬಾ ಯಶಸ್ವಿಯಾಗಿ ನಡೆಯುತ್ತಿವೆ. ಜನರು ಕಾಂಗ್ರೆಸ್​ ನಾಯಕತ್ವವನ್ನು ಬಯಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕೊರೊನಾ ಬಗ್ಗೆ ಎಚ್ಚರ: ಕೊನೆಯ ಮನ್​ ಕಿ ಬಾತ್​ನಲ್ಲಿ ಜನರಿಗೆ ಪ್ರಧಾನಿ ಮೋದಿ ಕಿವಿಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.