ಬೆಳಗಾವಿ: ಡಿ. 5 ರಂದು ಗೋಕಾಕ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಈಗ ರಾಜಕೀಯ ಬೆಳವಣಿಗೆ ಸಹ ಹೊಸ ತಿರುವು ಪಡೆದುಕೊಂಡಿದೆ.
ಗೋಕಾಕ್ ಮತಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿದಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ಸತೀಶ್ ಅವರ ಈ ನಿಗೂಢ ನಡೆ ಕ್ಷೇತ್ರದ ಜನರಲ್ಲಿ ಗೊಂದಲದ ಜೊತೆ ಕುತೂಹಲ ಮೂಡಿಸಿದೆ.
ಸದ್ಯ ಕಾಂಗ್ರೆಸ್ನಿಂದ ಸತೀಶ್ ಮತ್ತು ಲಖನ್ ಇಬ್ಬರೂ ನಾಮಪತ್ರ ಸಲ್ಲಿಸಿ ಕಾರ್ಯಕರ್ತರಿಗೆ ಶಾಕ್ ನೀಡಿದ್ದಾರೆ. ಕಾಂಗ್ರೆಸ್ನಿಂದ ಮೊದಲು ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದರು. ಈಗ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಸತೀಶ್ ಜಾರಕಿಹೊಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಸಾಥ್ ನೀಡಿದ್ದರು.