ETV Bharat / state

ಶೆಟ್ಟರ್ ಕೇವಲ ಭಾಷಣ ಮಾಡೋದೇ ಸಾಧನೆ ಅಂದ್ಕೊಂಡಿದ್ದಾರೆ: ಸತೀಶ್ ಜಾರಕಿಹೊಳಿ - ಸತೀಶ್ ಜಾರಕಿಹೊಳಿ

ಬರೀ ಮಾತನಾಡೋದೇ ಸಾಧನೆ ಆಗಬಾರದು. ಶೆಟ್ಟರ್ ಮೂರು ಗಂಟೆ ವಿಧಾನಸಭೆಯಲ್ಲಿ ಮಾತನಾಡಿದರೆ, ಮೂರು ಗ್ಲಾಸ್ ನೀರು ಕುಡಿಯುತ್ತಾರೆ. ಯಾವುದೇ ಕಚೇರಿಯನ್ನು ಶೆಟ್ಟರ್ ನೋಡಿಲ್ಲ. ಭಾಷಣ ಮಾಡುವುದರಲ್ಲಿ ಪ್ರವೀಣರು. ಭಾಷಣಕ್ಕೂ ಕೆಲಸಕ್ಕೂ ತುಂಬ ವ್ಯತ್ಯಾಸ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಕುಟುಕಿದರು.

Satish Jarkiholi reaction on by-election
ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
author img

By

Published : Apr 14, 2021, 1:22 PM IST

Updated : Apr 14, 2021, 2:28 PM IST

ಬೆಳಗಾವಿ: ಯಾವುದೇ ಕಚೇರಿಗಳನ್ನು ನೋಡದ ಶೆಟ್ಟರ್‌ಗೆ ಜನಸಾಮಾನ್ಯರ ಕಷ್ಟದ ಬಗ್ಗೆ ಗೊತ್ತಿಲ್ಲ. ಕೇವಲ ಭಾಷಣ ಮಾಡೋದನ್ನೇ ಸಾಧನೆ ಅಂದುಕೊಂಡಿದ್ದಾರೆ ಎಂದು‌ ಕೈ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ವಾಗ್ದಾಳಿ ನಡೆಸಿದ್ದಾರೆ.

ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಮ್ಮ ಪರವಾಗಿ ಉತ್ತಮ ವಾತಾವರಣವಿದ್ದು, ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಇದೀಗ ಸಿಎಂ ಯಡಿಯೂರಪ್ಪ ಸೋಲಿನ ಭೀತಿಯಿಂದ ಮರಳಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಕಾಂಗ್ರೆಸ್ ಪರವಾಗಿ ನಾಳೆ ಯಾವುದೇ ನಾಯಕರು ಪ್ರಚಾರಕ್ಕೆ ಬರಲ್ಲ. ಎಂಇಎಸ್ ಸ್ಪರ್ಧೆಯಿಂದ ಆಗೋ ಪರಿಣಾಮವೂ ಗೊತ್ತಿಲ್ಲ ಎಂದು ಹೇಳಿದರು.

ಅರಬಾವಿ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ‌ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತಾ, ಬಾಲಚಂದ್ರ ಜಾರಕಿಹೊಳಿ‌ ಬಿಜೆಪಿ ಪರ ಸಹಜವಾಗಿ ಕೆಲಸ ಮಾಡ್ತಾರೆ. ಆದ್ರೆ, ಅರಬಾವಿಯಲ್ಲಿ ನಮ್ಮ ಹಾಗೂ ಪಕ್ಷ ಮತ ಬ್ಯಾಂಕ್ ಇದೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಬೇಸತ್ತಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದೆ.

ವಿಧಾನಸಭೆ ಸಭೆಯಲ್ಲಿ ಸತೀಶ್ ಜಾರಕಿಹೊಳಿ‌ ಒಮ್ಮೆಯೂ ಮಾತನಾಡಿಲ್ಲ ಎಂಬ ಸಚಿವ ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ, ಸಚಿವ ಶೆಟ್ಟರ್ ಹೇಳುವುದರಲ್ಲಿ ಸತ್ಯಾಂಶವಿದೆ. ಬರೀ ಮಾತನಾಡೋದೇ ಸಾಧನೆ ಆಗಬಾರದು. ಶೆಟ್ಟರ್ ಮೂರು ಗಂಟೆ ವಿಧಾನಸಭೆಯಲ್ಲಿ ಮಾತನಾಡಿದರೆ, ಮೂರು ಗ್ಲಾಸ್ ನೀರು ಕುಡಿಯುತ್ತಾರೆ. ಯಾವುದೇ ಕಚೇರಿಯನ್ನು ಶೆಟ್ಟರ್ ನೋಡಿಲ್ಲ. ಭಾಷಣ ಮಾಡುವುದರಲ್ಲಿ ಪ್ರವೀಣರು. ಭಾಷಣಕ್ಕೂ ಕೆಲಸಕ್ಕೂ ತುಂಬ ವ್ಯತ್ಯಾಸ ಇದೆ. ಭಾಷಣಕ್ಕಿಂತ ಹೆಚ್ಚು ಕೆಲಸ ಮಾಡಿದ್ದು ನಮಗೆ ತೃಪ್ತಿ ಇದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಲಾಕ್​ಡೌನ್​ ಇಲ್ಲ; ಏ.18 ರಂದು ಸರ್ವಪಕ್ಷ ಸಭೆ ಬಳಿಕ ಮುಂದಿನ ನಿರ್ಧಾರ: ಸಿಎಂ

Last Updated : Apr 14, 2021, 2:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.