ETV Bharat / state

ರಮೇಶ್ - ಡಿಕೆಶಿ ನಡುವಣ ವಿಚಾರಗಳ ಬಗ್ಗೆ ನಾನೇನು ಹೇಳಲಿ?: ಸತೀಶ್ ಜಾರಕಿಹೊಳಿ ಪ್ರಶ್ನೆ

author img

By

Published : Jan 30, 2023, 5:33 PM IST

ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೇಲೆ ಮಾಡಿದ ಆರೋಪಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ - ಸಿಬಿಐ ತನಿಖೆ ಅವರ ಪಕ್ಷದ ನಿರ್ಧಾರಕ್ಕೆ ಬಿಟ್ಟ ವಿಚಾರ - ಆರೋಪದ ಬಗ್ಗೆ ವರಿಷ್ಠರು ಮತ್ತು ಅಧ್ಯಕ್ಷರು ಉತ್ತರ ನೀಡುತ್ತಾರೆ ಎಂದ ಸತೀಶ್​​

satish-jarkiholi
ಸತೀಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೇಲೆ ಮಾಡಿದ ಆರೋಪಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಚಿಕ್ಕೋಡಿ(ಬೆಳಗಾವಿ): ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೇಲೆ ಮಾಡಿರುವ ಆರೋಪಗಳು ಹಾಗೂ ಅವರ ನಡುವಣ ವಿಚಾರಗಳಾಗಿವೆ. ಇದರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಇದು ರಮೇಶ್ ಮತ್ತು ಡಿಕೆಶಿ ಇಬ್ಬರ ನಡುವಣ ವಿಚಾರಕ್ಕೆ ನಾನು ಉತ್ತರ ನೀಡುವುದು ಸರಿಯಾಗುವುದಿಲ್ಲ. ನಮ್ಮ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಏನು ಪ್ರತಿಕ್ರಿಯೆ ನೀಡುತ್ತಾರೆ ನೋಡೋಣ. ಸದ್ಯ ರಮೇಶ್ ಜಾರಕಿಹೊಳಿ ಅವರದ್ದೇ ಸರ್ಕಾರ ಇರುವುದರಿಂದ ಇದನ್ನು ಅವರ ಪಕ್ಷ ಯಾವ ರೀತಿ ತೆಗೆದುಕೊಳ್ಳುತ್ತೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ರಮೇಶ್ ಜಾರಕಿಹೊಳಿ ಅವರು ಸಿಡಿ ಪ್ರಕರಣದಲ್ಲಿ ಡಿಕೆಶಿ ಶಾಮೀಲಾಗಿದ್ದಾರೆ ಎಂದು ಆರೋಪ ವಿಚಾರವಾಗಿ ಯಮಕನಮರಡಿ ತಾಲೂಕಿನ ಮನಗುತ್ತಿ ಗ್ರಾಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು. ಒಂದು ಕಡೆ ಕಾಂಗ್ರೇಸ್ ಪಕ್ಷ ಮತ್ತೊಂದು ಕಡೆ ಬಿಜೆಪಿಯಲ್ಲಿ ನಿಮ್ಮ ಸಹೋದರ, ಇದು ನಿಮಗೆ ಸಂದಿಗ್ಧ ಪರಿಸ್ಥಿತಿ ಅಲ್ವಾ ಎಂಬ ಮಾಧ್ಯಮದವರ ಪ್ರಶ್ನೆಗೆ ರಮೇಶ್ ಸಿಡಿ ವಿಷಯ ಹಾಗೂ ಸಿಬಿಐ ವಿಷಯ ಇರಬಹುದು. ರಮೇಶ್ ಜಾರಕಿಹೊಳಿ ಅವರು ಪಕ್ಷದ ಒಂದು ಪಾರ್ಟ್, ನಿರ್ಣಯ ಮಾಡೋದು ಅವರ ಪಕ್ಷಕ್ಕೆ ಬಿಟ್ಟಿದ್ದು ಎಂದು ಹೇಳಿದರು.

ಡಿಕೆ ಶಿವಕುಮಾರ್​ ಅವರು ಬಹಳಷ್ಟು ಜನರ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಾರೆ ಎಂಬ ರಮೇಶ್ ಆರೋಪದ ವಿಚಾರಕ್ಕೆ ಉತ್ತರಿಸಿ, ಆ ಆರೋಪವೂ ಸಹ ಅವರಿಬ್ಬರಿಗೆ ಬಿಟ್ಟಿದ್ದು ನಾವು ಹೊರಗಿನವರು ಏನು ಹೇಳಲು ಆಗೊಲ್ಲ ಎಂದು ಹೇಳುವ ಮೂಲಕ ಸಿಡಿ ವಿಚಾರದಲ್ಲಿ ನಾಜೂಕಿನ ಉತ್ತರ ಕೊಟ್ಟರು.

ಅವರ ಹೇಳಿಕೆಗೆ ನಾವು ಸ್ಪಷ್ಟನೆ ಕೊಡಲು ಆಗಲ್ಲ: ಸಿಡಿ ಹಿಂದೆ ವಿಷಕನ್ಯೆ ಇದ್ದಾರೆ ಎಂಬ ರಮೇಶ್ ಜಾರಕಿಹೊಳಿ ಇಂದು ಮಾಡಿರುವ ಆರೋಪಕ್ಕೆ, ರಮೇಶ್ ಜಾರಕಿಹೊಳಿಯವರ ಪಕ್ಷ ಬೇರೆ, ನಮ್ಮ ಪಕ್ಷ ಬೇರೆ. ಅವರು ನಮ್ಮ ಪಕ್ಷದಲ್ಲಿದ್ದಿದ್ದರೆ ಅವರು ಮಾಡಿರುವ ಆರೋಪದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿತ್ತು. ಅವರು ಹೇಳುವ ಎಲ್ಲದಕ್ಕೂ ಸಹ ನಾವು ಸ್ಪಷ್ಟನೆ ಕೊಡಲಿಕ್ಕೆ ಆಗೋದಿಲ್ಲ. ಯಾರಿಗೆ ಹೇಳಿದ್ದಾರೆ, ಯಾರು ಹೇಳಿಸಿಕೊಂಡಿದ್ದಾರೆ ಅವರು ಅದಕ್ಕೆ ಉತ್ತರ ಕೊಡಬೇಕಾಗುತ್ತದೆ. ಅದರಲ್ಲಿ ನಮ್ಮ‌ ಪಾತ್ರ ಇಲ್ಲ ಎಂದರು.

ಕಾಂಗ್ರೆಸ್​ ಹಾಳಾಗಲು ವಿಷಕನ್ಯೆ ಹಾಗೂ ಡಿಕೆಶಿ ಕಾರಣ ಎಂಬ ರಮೇಶ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನಮ್ಮ ವರಿಷ್ಠರಿರು, ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಚಿಂತಿಸುತ್ತಾರೆ ಹಾಗೂ ಅವರು ಅದರ ಬಗ್ಗೆ ಪ್ರತಿಕ್ರಿಯೇ ನೀಡ್ತಾರೆ. ನಾನು ಈ ಸಂದರ್ಭದಲ್ಲಿ ಮಾತನಾಡುವುದು ಸೂಕ್ತ ಅಲ್ಲ ಎಂದರು.

ಚುನಾವಣೆ ಬಂದಾಗಲೇ ರಮೇಶ್ ಜಾರಕಿಹೊಳಿಯಿಂದ ಹೊಸ ಬಾಂಬ್ ಮತ್ತು ಆರೋಪಗಳ ಸರಮಾಲೆ ಇರುತ್ತದೆ ಎಂಬ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ, ಅದನ್ನ ರಮೇಶ್ ಅವರೇ ಹೇಳಬೇಕು. ನಾವು ಏನೂ ಹೇಳಲು ಸಾಧ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: ಡಿಕೆಶಿ ವಿರುದ್ಧ ಸಾಹುಕಾರ್‌ ಸಮರ: ಸಿಡಿ ಗ್ಯಾಂಗ್​ ಬೇಗ ಬಂಧಿಸಬೇಕೆಂದು ಜಾರಕಿಹೊಳಿ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.