ಬೆಳಗಾವಿ: ರಾಜ್ಯದಲ್ಲಿರುವ ಸುಳ್ಳಿನ ಯೂನಿವರ್ಸಿಟಿಯ ಕುಲಪತಿ ಚಕ್ರವರ್ತಿ ಸೂಲಿಬೆಲೆ ಆಗಿದ್ದಾರೆ. ಐವತ್ತು ಪರ್ಸೆಂಟ್ ಸುಳ್ಳು ಹೇಳಿದರೂ ಪರವಾಗಿಲ್ಲ. ಆದರೆ ಇವರು ಆಡಿದೆಲ್ಲಾ ಸುಳ್ಳೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೂ ಪದದ ಬಗ್ಗೆ ಓಪನ್ ಚಾಲೆಂಜ್ ನೀಡಿರುವ ಚಕ್ರವರ್ತಿ ಸೂಲಿಬೆಲೆ ಅವರು 10 ವರ್ಷದಲ್ಲಿ ಏನೆನೆಲ್ಲಾ ಹೇಳಿದ್ದಾರೋ ಅದರಲ್ಲಿ ಯಾವುದನ್ನು ಫುಲ್‌ಫಿಲ್ ಮಾಡಿದ್ದಾರೆ? ಚಿನ್ನದ ರಸ್ತೆ ಎಲ್ಲಿದೆ? ಎಂಬ ಹುಡುಕಾಟದಲ್ಲಿದ್ದೇವೆ.
ಒಂದು ದಿನದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಊಟಕ್ಕೆ ಮತ್ತೆ ಮಂಗಳೂರಿಗೆ ಬರಬಹುದಾದಂತಹ ವ್ಯವಸ್ಥೆ ಎಲ್ಲಿದೆ? ಎಂದು ಸೂಲಿಬೆಲೆ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಲ್ಯಾಪ್‌ಟಾಪ್ ಮೂಲಕ ಆಸ್ಪತ್ರೆಗಳಲ್ಲಿ ರೋಗಿಗಳ ಪರಿಸ್ಥಿತಿಯನ್ನು ನೋಡುವಂತಹ ವ್ಯವಸ್ಥೆ ಎಲ್ಲಿ ಮಾಡಿದ್ದಾರೆ? ಎಂದು ಹುಡುಕುತ್ತಿದ್ದೇವೆ. ಅಷ್ಟೇ ಅಲ್ಲದೇ ಇನ್ನೂ ಅನೇಕ ವಿಷಯಗಳನ್ನು ಹೇಳಿದ್ದಾರೆ. ಇದರಲ್ಲಿ ಒಂದು ಕೆಲಸವಾದರೂ ಪೂರ್ಣಗೊಂಡಿದ್ದರೆ ನಾವು ಅವರೊಂದಿಗೆ ಚರ್ಚೆ ಮಾಡುತ್ತೇವೆ. ಇಲ್ಲವೆಂದಲ್ಲಿ ನಾವು ಚರ್ಚೆಗೆ ಸಿದ್ಧರಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ನಮ್ಮ ಲೆಕ್ಕದಲ್ಲಿ ರಾಜ್ಯದಲ್ಲಿರುವ ಸುಳ್ಳಿನ ಯೂನಿವರ್ಸಿಟಿಯ ವಿಸಿ ಸೂಲಿಬೆಲೆ ಆಗಿದ್ದಾರೆ. ಒಬ್ಬ ಮನುಷ್ಯ ಐವತ್ತು ಪರ್ಸೆಂಟ್ ಸುಳ್ಳು ಹೇಳಿದರೂ ಪರವಾಗಿಲ್ಲ. ಆದರೆ ಈ ವ್ಯಕ್ತಿ ನೂರಕ್ಕೆ ನೂರು ಸುಳ್ಳೇ ಹೇಳುತ್ತಾರೆ. ಹೀಗಿರುವಾಗ ಇವರ ಜೊತೆ ಚರ್ಚೆ ಮಾಡಿ ನಾವ್ಯಾಕೆ ಟೈಮ್ ವೇಸ್ಟ್ ಮಾಡಬೇಕು ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ಅವರನ್ನು ಬಿಟ್ಟು ಬೇರೆ ಯಾರಾದರೂ ಒಳ್ಳೆಯವರು ಬರಲಿ. ಅವರ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಹಿಂದೂ ಧರ್ಮದ ಬಗ್ಗೆ ಮಾತನಾಡಲು ಬಹಿರಂಗ ಚರ್ಚೆಗೆ ಬನ್ನಿ: ಚಕ್ರವರ್ತಿ ಸೂಲಿಬೆಲೆ ಸವಾಲು