ETV Bharat / state

ಬೆಂಗಳೂರು ಗಲಭೆ ಪ್ರಕರಣ: ಕೈ ಕಾರ್ಯಕರ್ತರೇ ಪೊಲೀಸರ ಟಾರ್ಗೆಟ್ ಎಂದ ಸತೀಶ್ ಜಾರಕಿಹೊಳಿ

ಗಲಭೆ ಪ್ರಕರಣದಡಿ ಬೆಂಗಳೂರಿನ ಕಾಂಗ್ರೆಸ್​ ಕಾರ್ಯಕರ್ತರಿಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಅನುಮಾನ ನಮ್ಮದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

jarakiholi
jarakiholi
author img

By

Published : Aug 21, 2020, 2:25 PM IST

ಬೆಳಗಾವಿ: ಬೆಂಗಳೂರು ಕೆ ಜಿ ಹಳ್ಳಿ, ಡಿ ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಅಲ್ಲಿನ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಲಭೆ ಪ್ರಕರಣದಡಿ ಬೆಂಗಳೂರಿನ ಕಾಂಗ್ರೆಸ್​ ಕಾರ್ಯಕರ್ತರಿಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸರಿಗೆ ಮನವರಿಕೆ ಮಾಡಿದ್ದೇವೆ. ನಮ್ಮ ಪಕ್ಷದ ಮುಖಂಡರನ್ನು ಹಾಗೂ ಬಿಬಿಎಂಸಿ ಹಾಲಿ, ಮಾಜಿ ಸದಸ್ಯರನ್ನು ಸುಖಾಸುಮ್ಮನೆ ವಶಕ್ಕೆ ಪಡೆಯಲಾಗುತ್ತಿದೆ ಎಂದು ದೂರಿದರು.

ಸತೀಶ್ ಜಾರಕಿಹೊಳಿ ಆರೋಪ

ಗಲಭೆ ಪ್ರಕರಣದಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಅನುಮಾನ ನಮ್ಮದು. ನಮ್ಮವರನ್ನು ಟಾರ್ಗೆಟ್ ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಆಯುಕ್ತರಿಗೆ ಈಗಾಗಲೇ ಹೇಳಿದ್ದಾರೆ. ಆ ವೇಳೆ ಮಿಸ್ಟರ್ ಪದ ಬಳಕೆ ಮಾಡಿದ್ದಾರೆ. ಮಿಸ್ಟರ್ ಪದ ಬಳಸಿದ್ರೆ ಧಮ್ಕಿ ಹೇಗಾಗುತ್ತೆ ಎಂದು ಟೀಕಾಕಾರರಿಗೆ ಸತೀಶ್​ ಜಾರಕಿಹೊಳಿ ತಿರುಗೇಟು ನೀಡಿದರು.

ಪ್ರಕರಣ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು. ಅಂದಾಗ ಮಾತ್ರ ಸತ್ಯಾಸತ್ಯತೆ ಹೊರಬರಲು ಸಾಧ್ಯವಾಗುತ್ತದೆ. ಮುಂದೆ ಇಂಥ ಘಟನೆ ನಡೆಯದಂತೆ ಕೂಡ ನಿಗಾ ವಹಿಸಲು ಅನುಕೂಲ ಆಗುತ್ತದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಹಾಕಿದ್ದ ನವೀನ್ ವಿರುದ್ಧ ದೂರು ದಾಖಲಿಸಲು ಸ್ಥಳೀಯರು ಪೊಲೀಸ್ ಠಾಣೆಗೆ ಹೋಗಿದ್ದರು. ಮೂರು ಗಂಟೆಗಳ ಕಾಲ ಪೊಲೀಸರು ದೂರುದಾರರನ್ನು ಠಾಣೆಯಲ್ಲಿ ಕೂರಿಸಿಕೊಂಡಿದ್ದರು. ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿದ್ದರೆ ಬೆಂಗಳೂರು ಗಲಭೆ ಆಗುತ್ತಿರಲಿಲ್ಲ. ದೂರು ಪಡೆಯಲು ವಿಳಂಬ ಮಾಡಿದ್ದೇ ಗಲಭೆಗೆ ಕಾರಣವಾಯಿತು. ಗಲಭೆಗೆ ಸರ್ಕಾರದ ವ್ಯವಸ್ಥೆ ಕಾರಣವೇ ಹೊರತು, ಕಾಂಗ್ರೆಸ್ ಮೇಲೆ ಬೊಟ್ಟು ಮಾಡುವುದು ಸರಿಯಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.