ಬೆಳಗಾವಿ: ನಗರದ ನ್ಯೂಗುಡ್ ಶೆಡ್ ರಸ್ತೆಯಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಅಕ್ರಮವಾಗಿ ಮಾರುತ್ತಿದ್ದ ಯುವಕನನ್ನು ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಆಟೋನಗರದ ವಿಶಾಲ ಹನುಮಂತ ಬೆಲೆಕರ (25)ಬಂಧಿತ ವ್ಯಕ್ತಿ. ಬಂಧಿತನಿಂದ 4 ಲಕ್ಷ ಮೌಲ್ಯದ 20 ಕೆ.ಜಿ ಶ್ರಿಗಂಧ ಮರದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಡೇಬಜಾರ್ ಎಸಿಪಿ ಎ. ಚಂದ್ರಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸದ್ಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.