ಬೆಳಗಾವಿ: ಕ್ರಿಕೆಟ್ನ ದೇವರು ಎಂದೇ ಪ್ರಸಿದ್ಧರಾಗಿರುವ ಸಚಿನ್ ತೆಂಡೂಲ್ಕರ್ ಇಂದು ಬೆಳಗಾವಿಯ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಚಹಾ ಕುಡಿದಿದ್ದಾರೆ. ಟೀ ಕುಡಿದು ಬಳಿಕ ಸೆಲ್ಪಿ ವಿಡಿಯೋ ಕ್ಲಿಕ್ಕಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಚಿನ್ ತೆಂಡೂಲ್ಕರ್ ಮುಂಬೈಯಿಂದ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ 4 ಪಕ್ಕದಲ್ಲಿರುವ ವೈಜು ನಿತೂರ್ಕರ್ ಎಂಬುವರ ಫೌಜಿ ಟೀ ಸ್ಟಾಲ್ನಲ್ಲಿ ಚಹಾ ಸವಿದಿದ್ದಾರೆ. ಹಾಗೇ ವೈಜು ನಿತೂರ್ಕರ್ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಬಳಿಕ ಗೋವಾಕ್ಕೆ ಕುಟುಂಬ ಸಮೇತ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರದ ಮಿಸಾಲ್ ಪಾವ್ ಸವಿದ ಸಚಿನ್ ; ನೆಟ್ಟಿಗರು ಹೇಳಿದ್ದು ಹೀಗೆ..