ಬೆಳಗಾವಿ: ಕುಡಿದ ಮತ್ತಿನಲ್ಲಿ ವೇಟರ್ಗಳು ಹಾಗೂ ರೂಂ ಬಾಯ್ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ನಗರದ ಆರ್ಟಿಒ ವೃತ್ತದಲ್ಲಿರುವ ಶ್ರೀ ಸಾಯಿ ಲಾಡ್ಜ್ನಲ್ಲಿ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿ ವಿನಾಯಕ ಕಲಾಲ್ (28) ಹತ್ಯೆಯಾದ ಯುವಕ. ಎರಡು ತಿಂಗಳ ಹಿಂದೆಯಷ್ಟೇ ವಿನಾಯಕ ಲಾಡ್ಜ್ನಲ್ಲಿ ರೂಂ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ.
ಹೋಟೆಲ್ ಮಾಲೀಕ ತಿರುಪತಿಗೆ ಹೋಗಿದ್ದಾಗ ಲಾಡ್ಜ್ನ ರೂಂವೊಂದರಲ್ಲಿ ವೇಟರ್ಗಳು ಹಾಗೂ ರೂಂ ಬಾಯ್ ಸೇರಿಕೊಂಡು ಪಾರ್ಟಿ ಮಾಡಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ವೇಟರ್ಗಳು ಹಾಗೂ ವಿನಾಯಕನ ಮಧ್ಯೆ ಗಲಾಟೆ ಆಗಿದೆ. ಆಗ ರಾಡ್ನಿಂದ ವಿನಾಯಕನ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ವಿನಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮಾರ್ಕೆಟ್ ಠಾಣೆ ಪೊಲೀಸರು ಅಮಿತ್, ನವೀನ್ ಎಂಬುವವರನ್ನು ವಶಕ್ಕೆ ಪಡೆದಿದ್ದು, ಶಶಿಕುಮಾರ್ ಪರಾರಿ ಆಗಿದ್ದಾನೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.