ಬೆಳಗಾವಿ: ಎಂಇಎಸ್ ಪುಂಡರು ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ. ಕಿಡಿಗೇಡಿಗಳನ್ನ ಕೂಡಲೇ ಬಂದಿಸಬೇಕು ಅಂತಾ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಈ ವಿಚಾರವಾಗಿ ಕನ್ನಡ ಸಂಘಟನೆಗಳು ಅಲ್ಲದೇ ಕೆಲ ಸಿನಿಮಾ ತಾರೆಯರು , ಕೂಡ ಕಿಡಿಗೇಡಿಗಳಿಗೆ ಶಿಕ್ಷೆ ಆಗಬೇಕು ಅಂತಾ ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ನಟ ಯಶ್ ಬೆಳಗಾವಿಯಲ್ಲಿ ನಡೆದ ಘಟನೆ ಬಗ್ಗೆ ಸೌಜನ್ಯಕ್ಕೆ ಒಂದು ಟ್ಟೀಟ್ ಕೂಡ ಮಾಡಿರಲಿಲ್ಲ ಅಂತಾ ಒಂದಿಷ್ಟು ಮಾತುಗಳು ಕೇಳಿ ಬಂದಿತ್ತು. ಸ್ನೇಹಿತ ಹಾಗು ಜಿಮ್ ಟ್ರೈನರ್ ಆಗಿರುವ ಪಾನಿಪುರಿ ಕಿಟ್ಟಿ, ನೂತನವಾಗಿ ಸ್ಥಾಪಿಸಿರೋ ರಿಚ್ಚಿ ಗ್ರಿಲ್ಸ್ ರೆಸ್ಟೋರೆಂಟ್ ಉದ್ಘಾಟನೆ ಮಾಡೋದಿಕ್ಕೆ ಬಂದಿದ್ದ ಯಶ್ ಬೆಳಗಾವಿಯಲ್ಲಿ ನಡೆದ ಎಂಇಎಸ್ ಪುಂಡರ ವರ್ತನೆಗಯನ್ನು ಖಂಡಿಸಿದ್ದಾರೆ.
ಓದಿ: ಮಹಿಳಾ ಸಬಲೀಕರಣಕ್ಕೆ ಮಂಗಳೂರಿನಿಂದ ಕಚ್ಗೆ ಹೊರಟಿದ್ದಾರೆ ಲೇಡಿ ಬೈಕ್ ರೈಡರ್ಸ್!
ಮಹಾಲಕ್ಷ್ಮಿ ಲೇಔಟ್ನಲ್ಲಿ ಸಿದ್ದಗೊಂಡಿರುವ ಪಾನಿಪುರಿ ಕಿಟ್ಟಿಯ ರೆಸ್ಟೋರೆಂಟ್ ನ್ನ ಉದ್ಘಾಟನೆ ಮಾಡಿ ಮಾತನಾಡಿದ ಯಶ್ ಯಾವ ಭಾಷೆಗೂ ಯಾರು ಕೂಡ ಅವಮಾನ ಮಾಡಬಾರದು ಅಂತಾ ಯಶ್ ಹೇಳಿದ್ದಾರೆ.
ಒಬ್ಬೊರಿಗೆ ಒಂದೊಂದು ವೃತ್ತಿ ಇರುತ್ತೆ. ಈ ವೃತ್ತಿಯಿಂದ ನಾಡು, ನುಡಿ ಕೆಲಸವನ್ನ ಮಾಡುತ್ತವೆ.ಆದರೆ ಬೆಳಗಾವಿಯಲ್ಲಿ ನಡೆದ ಘಟನೆ ತಪ್ಪು ಖಂಡನೀಯ ಅಂತಾ ಯಶ್ ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದರು.
ಇನ್ನು ಇದೇ ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳು ಮಾಡುತ್ತಿರುವ ಕರ್ನಾಟಕ ಬಂದ್ ಬಗ್ಗೆ ಕೂಡ ಯಶ್ ಮಾತನಾಡಿ, ನಮಗೆ ನಷ್ಟ ಮಾಡಿಕೊಂಡು ಹೋರಾಟ ಮಾಡೋದು ಅಷ್ಟೊಂದು ಸರಿ ಕಾಣಲ್ಲ. ಪ್ರತಿಯೊಬ್ಬ ಕನ್ನಡಿಗನಿಗೂ ಭಾವನೆ ಇರುತ್ತೆ. ಅದನ್ನ ಮೀರಿ ಕನ್ನಡಕ್ಕೆ ಅವಮಾನ ಮಾಡಬಾರದು ಅಂತಾ ಯಶ್ ಹೇಳಿದರು.
ಈ ಸಂದರ್ಭದಲ್ಲಿ ನಟರಾದ ಅಜಯ್ ರಾವ್, ನೆನಪಿರಲಿ ಪ್ರೇಮ್ ಹಾಗು ಪಾನಿಪುರಿ ಕಿಟ್ಟಿ ಉಪಸ್ಥಿತಿ ಇದ್ದರು.