ETV Bharat / state

ಬೆಳಗಾವಿ: ಸೇನಾ ಸಮವಸ್ತ್ರದಲ್ಲೇ ಚಿತ್ರಮಂದಿರಕ್ಕೆ ಆಗಮಿಸಿದ ನಿವೃತ್ತ ಯೋಧ

author img

By

Published : Mar 17, 2022, 11:51 AM IST

Updated : Mar 17, 2022, 12:02 PM IST

ಗೋಕಾಕ್​ ತಾಲೂಕಿನ ನಿವೃತ್ತ ಯೋಧ ವಿನಾಯಕ ಮೇದಾರ್, ಸೇನಾ ಸಮವಸ್ತ್ರದಲ್ಲೇ ಚಿತ್ರಮಂದಿರಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು.

Retired Soldier watch James movie in military uniform at Belgaum
ಸೇನಾ ಸಮವಸ್ತ್ರದಲ್ಲೇ ಚಿತ್ರಮಂದಿರಕ್ಕೆ ಆಗಮಿಸಿದ ನಿವೃತ್ತ ಯೋಧ

ಬೆಳಗಾವಿ: ಪುನೀತ್ ರಾಜ್​​ ಕುಮಾರ್​​ ಅಭಿನಯದ ಜೇಮ್ಸ್ ಚಿತ್ರ ನೋಡಲು ನಿವೃತ್ತ ಯೋಧರೊಬ್ಬರು ಸೇನಾ ಸಮವಸ್ತ್ರದಲ್ಲೇ ಆಗಮಿಸಿ ಅಭಿಮಾನ ಮೆರೆದಿದ್ದಾರೆ. ಜಿಲ್ಲೆಯ ಗೋಕಾಕ್​​ ತಾಲೂಕಿನ ಅಂಕಲಗಿ ಗ್ರಾಮದ ನಿವಾಸಿ ನಿವೃತ್ತ ಯೋಧ ವಿನಾಯಕ ಮೇದಾರ್ ಸೇನಾ ಸಮವಸ್ತ್ರದಲ್ಲೇ ನಗರದ ಚಿತ್ರಾ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಈ ವೇಳೆ ಕೇಕ್​ ಕತ್ತರಿಸಿ ಅಪ್ಪು ಹುಟ್ಟುಹಬ್ಬ ಆಚರಿಸಿದರು. ವಿನಾಯಕ ಅವರು ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿದ್ದಾರೆ. ಇವರು ಪುನೀತ್​​ ಅಪ್ಪಟ ಅಭಿಮಾನಿಯಾಗಿದ್ದಾರೆ.

ಬಳಿಕ ಮಾತನಾಡಿದ ಅವರು, ಅಪ್ಪು ಕೊನೆಯ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ನಾನು ನಿವೃತ್ತ ಯೋಧನಾಗಿ ಸೇನಾ ಸಮವಸ್ತ್ರದಲ್ಲೇ ಚಿತ್ರ ನೋಡಲು ಬಂದಿದ್ದೇನೆ. ಅಪ್ಪು ನಮ್ಮ ಮನದಲ್ಲಿ ಎಂದೆಂದಿಗೂ ಅಜರಾಮರವಾಗಿ ಇರುತ್ತಾರೆ. ಪುನೀತ್​ ಕೊನೆಯ ಚಿತ್ರ ಎಂದು ದಯವಿಟ್ಟು ಯಾರೂ ಹೇಳಬೇಡಿ ಎಂದು ಮನವಿ ಮಾಡಿಕೊಂಡರು.

ಅಪ್ಪು​ ಅಭಿಮಾನಿಗಳಿಂದ ರಕ್ತದಾನ ಶಿಬಿರ ಮತ್ತು ಅನ್ನ ಸಂತರ್ಪಣೆ

ಅಪ್ಪು​​ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ರಕ್ತದಾನ ಶಿಬಿರ ಮತ್ತು ಅನ್ನ ಸಂತರ್ಪಣೆ: ಬೆಳಗಾವಿಯ ಚಿತ್ರಾ ಟಾಕೀಸ್, ಸ್ವರೂಪ ನರ್ತಕಿ ಹಾಗೂ ನ್ಯೂಕ್ಲಿಯಸ್ ಮಾಲ್ ಸೇರಿ ಮೂರು ಚಿತ್ರಮಂದಿರಗಳಲ್ಲಿ ಜೇಮ್ಸ್​ ರಿಲೀಸ್​ ಆಗಿದೆ. ಇನ್ನು ಪುನೀತ್​ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದಾರೆ. ಈಗಾಗಲೇ 100ಕ್ಕೂ ಅಭಿಮಾನಿಗಳು ರಕ್ತದಾನ ಮಾಡಿದ್ದಾರೆ.ಇದರ ಜೊತೆಗೆ ಪುನೀತ್ ‌ಕೆಲ ಅಭಿಮಾನಿಗಳಿಂದ ಅನ್ನ ಸಂತರ್ಪಣೆ ಆಯೋಜಿಸಿದ್ದು, ಉಪ್ಪಿಟ್ಟು,ಶಿರಾ ವಿತರಿಸುತ್ತಿದ್ದಾರೆ.

ಇದನ್ನೂ ಓದಿ: ಜೇಮ್ಸ್​: ಅಪ್ಪು ಬ್ಯಾನರ್​ಗೆ ಹಾಲಿನ ಅಭಿಷೇಕ..ಚಿತ್ರ ಮಂದಿರಗಳೆದುರು ಹುಚ್ಚೆದ್ದು ಕುಣಿದ ಅಭಿಮಾನಿಗಳು

Last Updated : Mar 17, 2022, 12:02 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.