ETV Bharat / state

ಕಳೆದ ಸಾಲಿನ ಸಕ್ಕರೆ​ ಬಾಕಿ ಬಿಲ್ ನೀಡುವಂತೆ ರೈತ ಸಂಘಟನೆಗಳಿಂದ ಮನವಿ - ಸರ್ಕಾರದ ಎಫ್ಆರ್​​ಪಿ ದರ

ಬಾಕಿ ಉಳಿಸಿಕೊಂಡಿರುವ 50 ರೂ. ನೀಡಬೇಕು ಹಾಗೂ ಕಳೆದ ವರ್ಷಗಳ ಬಾಕಿ ಹಣವನ್ನೂ ರೈತರಿಗೆ ಜಮೆ ಮಾಡಬೇಕು ಮತ್ತು ಕಾರ್ಖಾನೆಯವರೇ ಹೇಳಿದ ಹಾಗೆ ಪ್ರತಿ ಟನ್​ಗೆ ಹೆಚ್ಚುವರಿಯಾಗಿ 200 ರೂ. ಕೊಡುವುದಾಗಿ ಭರವಸೆ ನೀಡಿದ್ದರು..

request-from-farmers-organizations-to-settle-last-years-sugar-bill
ಕಳೆದ ಸಾಲಿನ ಸಕ್ಕರೆ​ ಬಾಕಿ ಬಿಲ್ ನೀಡುವಂತೆ ರೈತ ಸಂಘಟನೆಗಳಿಂದ ಮನವಿ
author img

By

Published : Oct 7, 2020, 8:01 PM IST

ಅಥಣಿ (ಬೆಳಗಾವಿ): ಕಳೆದ ವರ್ಷದ ಕಬ್ಬಿನ ಬಾಕಿ ಬಿಲ್ ಬಿಡುಗಡೆ ಹಾಗೂ ಈ ವರ್ಷದ ಹಂಗಾಮಿನ ದರ ನಿಗದಿಪಡಿಸುವಂತೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಕಳೆದ ಸಾಲಿನ ಸಕ್ಕರೆ​ ಬಾಕಿ ಬಿಲ್ ನೀಡುವಂತೆ ರೈತ ಸಂಘಟನೆಗಳಿಂದ ಮನವಿ

ಈ ವೇಳೆ ಕರ್ನಾಟಕ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎ ಬಿ ಹಳ್ಳೂರ ಮಾತನಾಡಿ, ಅಥಣಿಯ ಕೃಷ್ಣಾ ಸಕ್ಕರೆ ಕಾರ್ಖಾನೆಯವರು 2018/19ನೇ ಸಾಲಿನ ಪ್ರತಿ ಟನ್​​​​​​​​ಗೆ ನೀಡಬೇಕಿದ್ದ ಬಾಕಿ ಹಣವಾದ 200 ರೂ. ಬಿಡುಗಡೆ ಮಾಡುವಂತೆ ಮತ್ತು 2019/20ನೇ ಸಾಲಿನ ಸರ್ಕಾರದ ಎಫ್ಆರ್​​ಪಿ ದರದ ಪ್ರಕಾರ ₹2750 ಬಿಲ್ ನೀಡಬೇಕಿತ್ತು. ಆದರೆ, ₹2700 ಮಾತ್ರ ರೈತರಿಗೆ ನೀಡಿರುತ್ತಾರೆ.

ಬಾಕಿ ಉಳಿಸಿಕೊಂಡಿರುವ 50 ರೂ. ನೀಡಬೇಕು ಹಾಗೂ ಕಳೆದ ವರ್ಷಗಳ ಬಾಕಿ ಹಣವನ್ನೂ ರೈತರಿಗೆ ಜಮೆ ಮಾಡಬೇಕು ಮತ್ತು ಕಾರ್ಖಾನೆಯವರೇ ಹೇಳಿದ ಹಾಗೆ ಪ್ರತಿ ಟನ್​ಗೆ ಹೆಚ್ಚುವರಿಯಾಗಿ 200 ರೂ. ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಆ ಬಿಲ್ ನೀಡಿಲ್ಲ. ಕಳೆದ ವರ್ಷದ ಬಾಕಿ ಬಿಲ್ ನೀಡುವುದರ ಜೊತೆಗೆ ಈ ವರ್ಷದ ಬೆಲೆ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.