ETV Bharat / state

ಸಂವಿಧಾನ ಕೇವಲ ಎಸ್ಸಿ- ಎಸ್ಟಿಯವರಿಗಲ್ಲ : ಸತೀಶ್ ಜಾರಕಿಹೊಳಿ

ಚಿಕ್ಕೋಡಿ ಪಟ್ಟಣದ ಇಂದಿರಾ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಭಾರತೀಯ ಬೌದ್ಧ ಮಹಾಸಭಾ ನೇತೃತ್ವದಲ್ಲಿ "ನಮ್ಮ ನಡೆ ಬುದ್ಧನ ಕಡೆ" ಧರ್ಮ ಜಾಗೃತಿ ಅಭಿಯಾನವನ್ನ ಆಯೋಜಿಸಲಾಗಿತ್ತು..

ಧರ್ಮ ಜಾಗೃತಿ ಅಭಿಯಾನ
"ನಮ್ಮ ನಡೆ ಬುದ್ಧನ ಕಡೆ" ಧರ್ಮ ಜಾಗೃತಿ ಅಭಿಯಾನ
author img

By

Published : Nov 2, 2021, 7:57 PM IST

Updated : Jan 18, 2023, 3:55 PM IST

"ನಮ್ಮ ನಡೆ ಬುದ್ಧನ ಕಡೆ" ಧರ್ಮ ಜಾಗೃತಿ ಅಭಿಯಾನ

ಚಿಕ್ಕೋಡಿ : ತಳ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸದೃಢವಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಇಂದಿರಾ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಭಾರತೀಯ ಬೌದ್ಧ ಮಹಾಸಭಾ ನೇತೃತ್ವದಲ್ಲಿ ಆಯೋಜಿಸಿದ್ದ "ನಮ್ಮ ನಡೆ ಬುದ್ಧನ ಕಡೆ" ಧರ್ಮ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ತಳ ಸಮುದಾಯಗಳ ಜನರಲ್ಲಿ ಸಾಮಾಜಿಕ, ಶೈಕ್ಷಣಿಕ ಜಾಗೃತಿ ಮೂಡಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.

ಸಾಮಾಜಿಕ ಬದಲಾವಣೆ ಆಗುವವರೆಗೆ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಚಟುವಟಿಕೆಗಳನ್ನು ರೂಪಿಸಿ ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ಅವರ ದಾರಿಯಲ್ಲಿ ಮಾನವ ಬಂಧುತ್ವ ವೇದಿಕೆಯನ್ನು ಜನರ ಬಳಿ ಕೊಂಡೊಯ್ದಿದ್ದೇವೆ. ಇದರ ಮೂಲಕ ನಾವು ಮೂಢನಂಬಿಕೆ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ಈ ಕೆಲಸಕ್ಕೆ ನೀವೆಲ್ಲರೂ ಕೈಜೋಡಿಸಬೇಕು ಎಂದರು.

ರಾಜರತ್ನ ಅಂಬೇಡ್ಕರ್ ಭಾಷಣದಿಂದ ಪ್ರಭಾವಿತ : ಕಳೆದ 30 ವರ್ಷಗಳಲ್ಲಿ ರಾಜರತ್ನ ಅಂಬೇಡ್ಕರ್ ಅವರದ್ದು ನನ್ನನ್ನು ಪ್ರಭಾವಿಸಿದ ಭಾಷಣ. ಇಷ್ಟು ದಿನಗಳ ಕಾಲ ದೇವರನ್ನು ಹೊರತುಪಡಿಸಿ ನಮಗೆ ಜೊತೆಗಾರರು ಯಾರೂ ಇಲ್ಲ ಎನಿಸುತ್ತಿತ್ತು. ನಿಜಗುಣಾನಂದ ಶ್ರೀಗಳು ಮತ್ತು ನಾನು ಈ ಕುರಿತು ಮಾತಾಡುತ್ತಿದ್ದೆವು.

ಆದರೆ, ರಾಜರತ್ನ ಅವರ ಮಾತುಗಳನ್ನು ಕೇಳಿದ ನಂತರ ಇದೀಗ ನಮ್ಮ ಸಂಖ್ಯೆ ಹೆಚ್ಚಾಗಿದೆ. ಜನರು ದುಡಿಮೆಯ ಹಣವನ್ನು ಮೂಢನಂಬಿಕೆಗಳಿಗೆ ಖರ್ಚು ಮಾಡದೆ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಕುಟುಂಬದ ಏಳಿಗೆಗೆ ಸದ್ಬಳಕೆ ಮಾಡಿಕೊಳ್ಳಲು ಜಾಗೃತರಾಗಬೇಕು ಎಂದು ಮನವಿ ಮಾಡಿದರು.

ಸಂವಿಧಾನ ಕೇವಲ ಎಸ್ಸಿ- ಎಸ್ಟಿಯವರಿಗಲ್ಲ : ಸಂವಿಧಾನ ಕೇವಲ ಎಸ್ಸಿ-ಎಸ್ಟಿಗಳಿಗಾಗಿ ರೂಪಿಸಲಾಗಿದೆ ಎಂಬ ಭಾವನೆ ದೇಶದ ಬಹುತೇಕ ಜನರಲ್ಲಿದೆ. ಆದರೆ, ದೇಶದ ಎಲ್ಲ ಸಮುದಾಯಗಳ ಏಳಿಗೆಗಾಗಿ, ಎಲ್ಲರ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನ ರಚಿಸಲಾಗಿದೆ. ಇದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲೆಡೆ ಆಯೋಜಿಸುವ ಅಗತ್ಯವಿದೆ ಎಂದು ಸತೀಶ್​​ ಜಾರಕಿಹೊಳಿ ಹೇಳಿದರು.

ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರವಾಗಲು ಮಹತ್ವದ ಕಾರಣ : ಡಾ.ಬಿ.ಆರ್. ಅಂಬೇಡ್ಕರ್ ಅವರ ಮರಿಮೊಮ್ಮಗ ಹಾಗೂ ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಲು ಮಹತ್ವದ ಕಾರಣವಿತ್ತು.

ಅವರು ಜೈನ್, ಸಿಖ್, ಮುಸ್ಲಿಂ, ಕ್ರಿಶ್ಚಿಯನ್ ಮೊದಲಾದ ಧರ್ಮಗಳನ್ನು ಬಿಟ್ಟು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಯಾಕೆಂದರೆ, ಬೌದ್ಧ ಧರ್ಮದಲ್ಲಿ ಜಾತಿ ಇಲ್ಲ. ಇಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣಲಾಗುತ್ತದೆ. ಇಂತಹ ಸಮಾನತೆ ಬೇರೆ ಧರ್ಮಗಳಲ್ಲಿ ಇಲ್ಲ ಎಂದು ತಿಳಿಸಿದರು.

ನಾವೆಲ್ಲ ಮೂಲತಃ ನಾಗ ಕುಲಕ್ಕೆ ಸೇರಿದವರು. ಒಂದು ಕಾಲಕ್ಕೆ ಈ ದೇಶವನ್ನು ಆಳಿದವರು. ಆದರೆ, ನಾವು ಭಿಕ್ಷುಕರ ರೀತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಮೀಸಲಾತಿ. ಈಗಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ಸರ್ಕಾರಿ ಸಂಸ್ಥೆಗಳನ್ನೂ ಖಾಸಗೀಕರಿಸುತ್ತಿದೆ. ಮುಂದೆ ನಿಮಗೆ ಮೀಸಲಾತಿ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು.

ಘನತೆಯಿಂದ ಬದುಕಲು ನೀವೆಲ್ಲ ಮತಾಂತರ ಹೊಂದಿ. ಮತಾಂತರ ಹೊಂದಿದರೆ ನಿಮಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಇದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಮಾನ್ಯತೆ ನೀಡಿದೆ. ಮತಾಂತರದಿಂದ ನಿಮಗೆ ನಷ್ಟವಾಗುವುದಿಲ್ಲ.

ಬದಲಾಗಿ ಜಾಗತಿಕ ಮಟ್ಟಕ್ಕೆ ನಿಮಗೆ ಏರುವ ಅವಕಾಶವಿದೆ. ಯಾಕೆಂದರೆ, ದಲಿತರ ವಿವಿಧ ಜಾತಿಗಳು ದೇಶದಲ್ಲಿವೆ. ಬೌದ್ಧ ಎಂದು ನೀವು ಧರ್ಮದ ಕಾಲಂನಲ್ಲಿ ನಮೂದಿಸಿದರೆ ಜಾತಿ ನಮೂದಿಸುವ ಅಗತ್ಯವಿಲ್ಲ ಎಂದರು.

ಶೀಘ್ರ ಬೌದ್ಧ ವಿಶ್ವವಿದ್ಯಾಲಯ ನಿರ್ಮಾಣ: ನಾಗಪುರದಲ್ಲಿ 60 ಎಕರೆ ವಿಸ್ತೀರ್ಣದಲ್ಲಿ ಶೀಘ್ರ ಬೌದ್ಧ ವಿಶ್ವವಿದ್ಯಾಲಯ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

Last Updated : Jan 18, 2023, 3:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.