ಚಿಕ್ಕೋಡಿ : ರಿಲಯನ್ಸ್ ಮೊಬೈಲ್ ಟವರ್ ಬ್ಯಾಟರಿಯನ್ನು ಕಳ್ಳತನ ಮಾಡಿದ್ದ ಮೂವರನ್ನು ಬಂಧನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ನಡೆದಿದೆ.
ಪಾಶ್ಚಾಪೂರ ಗ್ರಾಮದ ಅಜಪ್ಪಾ ಮಾಳಗಿ, ಶಿವಾನಂದ ಕಾಂಬಳೆ, ಶ್ರೀಶೈಲ ಹರಿಜನ ಬಂಧಿತ ಆರೋಪಿಗಳಾಗಿದ್ದಾರೆ. ಬ್ಯಾಟರಿ ಮಾರಾಟ ಮಾಡಲು ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಕಳ್ಳರ ಜೊತೆಗೆ ರಿಲಯನ್ಸ್ ಬ್ಯಾಟರಿಗಳು ಹಾಗೂ ಟಾಟಾ ಏಸ್ ವಾಹನ ಜಪ್ತಿ ಮಾಡಿದ್ದಾರೆ.
ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.