ETV Bharat / state

ಹುಕ್ಕೇರಿ ಗ್ರಾ.ಪಂ ಚುನಾವಣೆ: ವರ್ಷದ ಬಳಿಕ ಮರು ಮತಎಣಿಕೆ, 1 ಮತದಿಂದ ಸೋತ ಅಭ್ಯರ್ಥಿಗೆ ಮತ್ತೆ ಸೋಲು! - ಗ್ರಾಮ ಪಂಚಾಯತ್ ಚುನಾವಣೆ

ಗ್ರಾಮ ಪಂಚಾಯತ್ ಚುನಾವಣೆ: ಒಂದು ವರ್ಷ ಹತ್ತು ತಿಂಗಳ ಬಳಿಕ ಕೋರ್ಟ್​ನಲ್ಲಿ ಮರು ಮತ ಎಣಿಕೆ. ಮರು ಮತ ಎಣಿಕೆಯಲ್ಲೂ ಪರಾಜಿತ ಅಭ್ಯರ್ಥಿಗೆ ಸೋಲು.

ಗ್ರಾಮ ಪಂಚಾಯತ್ ಚುನಾವಣೆ
ಗ್ರಾಮ ಪಂಚಾಯತ್ ಚುನಾವಣೆ
author img

By

Published : Oct 20, 2022, 9:15 PM IST

Updated : Oct 20, 2022, 11:03 PM IST

ಚಿಕ್ಕೋಡಿ (ಬೆಳಗಾವಿ): ಒಂದು ವರ್ಷ ಹತ್ತು ತಿಂಗಳು ಹಿಂದೆ ನಡೆದಿದ್ದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಸೋತು ಮರು ಮತ ಎಣಿಕೆಗಾಗಿ ಕೋರ್ಟ್​ ಮೆಟ್ಟಿಲೇರಿದ್ದ ಅಭ್ಯರ್ಥಿಗೆ ಮತ್ತೆ ಸೋಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆ ಸರಿಯಾಗಿ ಆಗಿಲ್ಲ ಎಂದು ಪರಾಜಿತ ಅಭ್ಯರ್ಥಿ ರಾವಸಾಹೇಬ್ ಪಾಟೀಲ್ ಅವರು ಮರು ಮತ ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದರು. ಇಂದು ಸಂಕೇಶ್ವರದ ಜೆಎಂಎಪ್​ಸಿ ನ್ಯಾಯಾಲಯದಲ್ಲಿ ಜಡ್ಜ್ ಹಾಗೂ ಹುಕ್ಕೇರಿ ತಹಶೀಲ್ದಾರ ಡಾ‌.ದೊಡ್ಡಪ್ಪ ಹೂಗಾರ ಸಮ್ಮುಖದಲ್ಲಿ ಮತ್ತೊಮ್ಮೆ ಮರು ಮತ ಎಣಿಕೆ ನಡೆಯಿತು. ಮರು ಮತ ಎಣಿಕೆಯಲ್ಲೂ ರಾವಸಾಹೇವ್ ಪಾಟೀಲ್ ಅವರಿಗೆ ಒಂದು ಮತ ಕಡಿಮೆ ಬಂದಿದೆ. ಪರಿಣಾಮ ಜಯದ ನಿರೀಕ್ಷೆಯಲ್ಲಿದ್ದ ರಾವಸಾಹೇಬ್​ ನಿರಾಶೆಗೊಂಡಿದ್ದಾರೆ.

ಗೆದ್ದ ಅಭ್ಯರ್ಥಿ ತವನಪ್ಪ ಹೊಸೂರ ಅವರಿಂದ ಸಂಭ್ರಮಾಚರಣೆ

2020ರ ಡಿಸೆಂಬರ್ 30ರಂದು ಗ್ರಾ.ಪಂ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆದಿತ್ತು. ಈ ವೇಳೆ 505 ಮತ ಪಡೆದಿದ್ದ ರಾವಸಾಹೇಬ್ ಪಾಟೀಲ್ ಅವರು 506 ಮತ ಪಡೆದ ತವನಪ್ಪ ಹೊಸೂರ ಎಂಬ ಅಭ್ಯರ್ಥಿ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಸೋಲುಂಡಿದ್ದರು. ಆಗ ಮತ ಎಣಿಕೆ ಸರಿಯಾಗಿಲ್ಲ ಎಂದು ಪರಾಜಿತ ಅಭ್ಯರ್ಥಿ ರಾವಸಾಹೇಬ್ ಸಂಕೇಶ್ವರ ಆರೋಪಿಸಿ, ಸಂಕೇಶ್ವರ್ ಜೆಎಂಎಫ್​ಸಿ ಕೋರ್ಟ್ ಮೊರೆ ಹೋಗಿದ್ದರು.

ಕೋರ್ಟ್​ನಲ್ಲಿ ಮರು ಮತ ಎಣಿಕೆ ಬಳಿಕ ಗೆದ್ದ ಅಭ್ಯರ್ಥಿ ತವನಪ್ಪ ಹೊಸೂರ ಅವರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ಇದನ್ನೂಓದಿ: ಕೆಪಿಟಿಸಿಎಲ್ ಅಕ್ರಮ ನೇಮಕಾತಿ ಪ್ರಕರಣ: ಮತ್ತೆ ಇಬ್ಬರ ಬಂಧನ.. ಆರೋಪಿಗಳ ಸಂಖ್ಯೆ 22ಕ್ಕೆ ಏರಿಕೆ

Last Updated : Oct 20, 2022, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.