ETV Bharat / state

ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್​​: ರ್‍ಯಾಪಿಡ್ ಆ್ಯಕ್ಷನ್  ಫೋರ್ಸ್‌ನಿಂದ ಪಥ ಸಂಚಲನ

ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ ನೀಡಿದ ಹಿನ್ನೆಲೆ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಜಿಲ್ಲಾಡಳಿತ ನಗರದಲ್ಲಿ ರ್‍ಯಾಪಿಡ್ ಆ್ಯಕ್ಷನ್ ಫೋರ್ಸ್‌ನಿಂದ ಪಂಥ ಸಂಚಲನ ನಡೆಸಿತು.

author img

By

Published : Jun 20, 2022, 10:51 AM IST

ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ ಹಿನ್ನೆಲೆ ಬೆಳಗಾವಿ ನಗರ ಹಾಗೂ ಜಿಲ್ಲಾ ಪೊಲೀಸರು ಬಿಗಿ ಪೊಲೀಸ್ ಭದ್ರತೆ ವಹಿಸಿದ್ದು, ಬೆಳಗಾವಿಯಲ್ಲಿ ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್‌ನಿಂದ ಪಥ ಸಂಚಲನ ನಡೆಸಲಾಯಿತು.

ವಾಟ್ಸ್​ಆ್ಯಪ್​​ ಮೂಲಕ ಬೆಳಗಾವಿ ಬಂದ್​​ಗೆ ಅನಾಮಧೇಯ ಸೇನಾ ಆಕಾಂಕ್ಷಿ ಯುವಕರ ಆಹ್ವಾನ ಹಿನ್ನೆಲೆ ಬೆಳಗಾವಿ ನಗರ,ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ. ಈಗಾಗಲೇ ಸಂದೇಶ ರವಾನೆ ಮಾಡಿದ್ದ ಯುವಕರನ್ನ ಕರೆಯಿಸಿ ಪೊಲೀಸರು ಖಡಕ್ ವಾರ್ನಿಂಗ್ ಮಾಡಿದ್ದಾರೆ. ಸೇನಾಕಾಂಕ್ಷಿಗಳು, ಕೋಚಿಂಗ್ ಸೆಂಟರ್ ಮುಖ್ಯಸ್ಥರಿಂದ ಬಂದ್ ಮಾಡದಂತೆ ವಿಡಿಯೋ ಹೇಳಿಕೆ ರಿಲೀಸ್ ಮಾಡಲಾಗಿದೆ.

ಬೆಳಗಾವಿ ನಗರ ಸಂಪರ್ಕ ಕಲ್ಪಿಸುವ ಮಾರ್ಗಗಳು, ಬಸ್ ನಿಲ್ದಾಣ, ‌ರೈಲು ನಿಲ್ದಾಣ, ಟೋಲ್ ಗಳಲ್ಲಿ ಬಿಗಿ ಬಂದೋಬಸ್ತ್ ಬಂದೋಬಸ್ತ್ ಮಾಡುವ ಮೂಲಕ ಬೆಳಗಾವಿ ಬರುವ ಯುವಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಇದರ ಜೊತೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಗೋಕಾಕ ನಗರದಲ್ಲಿ ಪಥಸಂಚಲನ ಮಾಡುವ ಮೂಲಕ ಪ್ರತಿಭಟನೆ ಮಾಡುವ ಯುವಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ರ್‍ಯಾಪಿಡ್ ಆಕ್ಷನ್ ಪೋರ್ಸ್ ನಿಂದ ಪಥಸಂಚಲನ; ಬೆಳಗಾವಿಯಲ್ಲಿ ಅಗ್ನಿಪಥ್ ವಿರೋಧಿಸಿ ಬೆಳಗಾವಿ ಬಂದ್ ಕರೆ ಹಿನ್ನೆಲೆ ನಗರದ ಚೆನ್ನಮ್ಮ ವೃತ್ತದಲ್ಲಿ ರೈಲ್ವೆ ಪೊಲೀಸರು, ರ್‍ಯಾಪಿಡ್ ಆಕ್ಷನ್ ಪೋರ್ಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೀಡುಬಿಟ್ಟಿದ್ದಾರೆ. ಇದಾದ ಬಳಿಕ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ನೇತೃತ್ವದಲ್ಲಿ ನಗರದ ಚೆನ್ನಮ್ಮ ವೃತ್ತದಿಂದ ರೈಲ್ವೆ ಪೊಲೀಸರು, ರ್‍ಯಾಪಿಡ್ ಆ್ಯಕ್ಷನ್ ಪೋರ್ಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಂದ ಪಥಸಂಚಲನ ನಡೆಸಲಾಯಿತು.

ಬೆಳಗಾವಿಯ ರಾಣಿ ಚನ್ನಮ್ಮಾಜಿ ವೃತ್ತದಿಂದ ಆರಂಭವಾದ ಪಥಸಂಚಲನ ಲಿಂಗರಾಜು ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ಸರ್ಕಲ್, ಕಿರ್ಲೋಸ್ಕರ್ ರೋಡ್, ರಾಮದೇವ ಗಲ್ಲಿ, ಖಡೇ ಬಜಾರ್ ಬಳಿಕ ಅಂತಿಮವಾಗಿ ಚೆನ್ನಮ್ಮಾಜಿ ವೃತ್ತಕ್ಕೆ ಆಗಮಿಸಿ ಅಂತ್ಯವಾಯಿತು. ಪರೇಡ್‍ನಲ್ಲಿ ಸ್ವತಃ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಹೆಜ್ಜೆ ಹಾಕಿದ್ರು‌. ಕಮಿಷನರ್ ಗೆ ಡಿಸಿಪಿ ರವೀಂದ್ರ ಗಡಾದಿ, ಎಸಿ ರವೀಂದ್ರ ಕರಿಲಿಂಗನ್ನವರ, ಎಸಿಪಿ ಚಂದ್ರಪ್ಪ, ಸಿಪಿಐ ಧೀರಜ ಶಿಂಧೆ, ಸಿಪಿಐ ದಿಲೀಪ ನಿಂಬಾಳ್ಕರ್, ಸಿಪಿಐ ರಾಘವೇಂದ್ರ ಹವಾಲ್ದಾರ್ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹುಕ್ಕೇರಿ, ಹಿರೇಬಾಗೆವಾಡಿ ಚೆಕ್ ಪೋಸ್ಟ್ ನಲ್ಲಿ ‌ಹೈ ಅಲರ್ಟ್: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಚಲೋ, ಬೆಳಗಾವಿ ಬಂದ್‌ಗೆ ಕರೆ ಹಿನ್ನೆಲೆ ಬೆಳಗಾವಿ ಜಿಲ್ಲಾದ್ಯಂತ ಇರುವ ಚೆಕ್ ಪೋಸ್ಟ್​​​ಗಳಲ್ಲಿ ಪೊಲೀಸರು ಹೈ ಅಲರ್ಟ ಘೋಷಣೆ ಮಾಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಹುಕ್ಕೇರಿ ತಾಲೂಕಿನ ಹತ್ತರಗಿ ಚೆಕ್ ಹಾಗೂ ನಿಪ್ಪಾಣಿ ತಾಲೂಕಿನ ಕುಗನೊಳ್ಳಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು ಇದರ ಜೊತೆಗೆ ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ಚೆಕ್ ಪೋಸ್ಟ್ ನಲ್ಲಿ ಬೆಳಗಾವಿಗೆ ಬರುವ ಯುವಕರನ್ನು ತಡೆಯಲು ಸಜ್ಜಾಗಿದ್ದು ಬೆಳಗಾವಿ ನಗರಕ್ಕೆ ಬರುವ ಯುವಕರನ್ನು ಅಲ್ಲಿಯೆ ತಡೆದು ವಾಪಸ್ ಕಳಿಸಲು ನಿರ್ಧರಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಎಂದಿನಂತೆ ಜನಜೀವನ: ಅಗ್ನಿಪಥ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ ಹಿನ್ನೆಲೆ ಕುಂದಾನಗರಿ ಬೆಳಗಾವಿಯಲ್ಲಿ ಎಂದಿನಂತೆ ಜನಜೀವನ ನಡೆದಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ನಡೆದಿದ್ದು ಶಾಲಾ-ಕಾಲೇಜುಗಳು, ಬಸ್ ಗಳು ಎಂದಿನಂತೆ ಸಂಚಾರ ನಡೆಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.