ETV Bharat / state

ರಮೇಶ್ ಜಾರಕಿಹೊಳಿ‌ಗೆ ಉನ್ನತ ಸ್ಥಾನ ನೀಡಬೇಕು: ಶಾಸಕ ಮಹೇಶ್ ಕುಮಟಳ್ಳಿ ಆಗ್ರಹ

ನಾನು ಕೇಳದಿದ್ದರೂ ಬಿಜೆಪಿಯಲ್ಲಿ ಗೌರವದಿಂದ ಹಲವು ಜವಾಬ್ದಾರಿ ಕೊಟ್ಟಿದ್ದಾರೆ. ಮುಂದೆಯೂ ಸಹ ನನ್ನನ್ನು ಕೇಳದೇ ಜವಾಬ್ದಾರಿ ಕೊಡಬಹುದು ಎಂದು ಶಾಸಕ ಮಹೇಶ್ ಕುಮಟಳ್ಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Mahesh Kumatalli
ಶಾಸಕ ಮಹೇಶ್ ಕುಮಟಳ್ಳಿ
author img

By

Published : Oct 20, 2021, 5:03 PM IST

ಬೆಳಗಾವಿ: ಸಚಿವ ಸಂಪುಟ ‌ವಿಸ್ತರಣೆ ವೇಳೆ ಗೋಕಾಕ್​ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಶಾಸಕ ಮಹೇಶ್ ಕುಮಟಳ್ಳಿ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವರ್ಕರ್ ಇದ್ದಾರೆ. ಪಕ್ಷವನ್ನು ಕೂಡಾ ಕಟ್ಟುತ್ತಿದ್ದಾರೆ. ಹಲವು ರಾಜಕೀಯ ವಿದ್ಯಮಾನಗಳಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಅಂದಿನಿಂದ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸುತ್ತಲೇ ಇದ್ದೇನೆ ಎಂದರು.

ಶಾಸಕ ಮಹೇಶ್ ಕುಮಟಳ್ಳಿ

ರಮೇಶ್ ಜಾರಕಿಹೊಳಿಗೆ ಉನ್ನತ ಸ್ಥಾನ ನೀಡಿದರೆ ನಮ್ಮ ಭಾಗದಲ್ಲಿ ಹೆಚ್ಚಿನ ಕೆಲಸ ಮಾಡುತ್ತಾರೆ. ಅವರು ಸಚಿವರಾದರೆ ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸಗಳನ್ನು ಆಗುತ್ತವೆ. ಹೀಗಾಗಿ, ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ವರಿಷ್ಠರಲ್ಲಿ ವಿನಂತಿ ಸಹ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವ ಆಶಾಭಾವನೆ ಇದೆ. ಪಕ್ಷದ ಮುಖಂಡರ ನಿರ್ಣಯಕ್ಕೆ ಬದ್ಧ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.

ನಾನು ಕೇಳಲ್ಲ, ಕೊಟ್ಟರೆ ನಿಭಾಯಿಸುವೆ: ಹಲವು ರಾಜಕೀಯ ವಿದ್ಯಮಾನಗಳಲ್ಲಿ ನಾನು ಬಿಜೆಪಿ ಸೇರಿದಂತವನು. ಯಾವುದೇ ಕಂಡೀಷನ್​ ಹಾಕದೇ ಪಕ್ಷಕ್ಕೆ ಬಂದಿದ್ದೇನೆ. ರಾಜ್ಯ, ರಾಷ್ಟ್ರ ನಾಯಕರು ಪಕ್ಷ ಗಟ್ಟಿ ಮಾಡಲು ಕೊಟ್ಟ ಜವಾಬ್ದಾರಿ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ.

ನನಗೆ ಸಚಿವ ಸ್ಥಾನ ನೀಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ನಾನು ಮೊದಲಿನಿಂದಲೂ ಯಾವುದೇ ಪಕ್ಷದಲ್ಲಿದ್ದರೂ ಪಕ್ಷದ ಕೆಲಸ ಮಾಡುತ್ತಾ ಬಂದಿದ್ದೇನೆ. ನನ್ನ ಕೆಲಸ ಗುರುತಿಸಿ ಎಲ್ಲ ಪಕ್ಷಗಳು ನನ್ನನ್ನು ಬೆಳೆಸುತ್ತಿವೆ‌‌. ನಾನು ಮಾತ್ರ ಸಚಿವ ಸ್ಥಾನ ನೀಡಿ ಅಂತ ಕೇಳಿಲ್ಲ. ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದು ತಿಳಿಸಿದರು.

ಮಹೇಶ್ ಕುಮಟಳ್ಳಿ ದಯಾಳು ಆದರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾವು ದಯಾಳು ಅಂತೀರಾ, ಕೆಲವೊಬ್ಬರು ಏನೇನೋ ಅಂತಾರೆ. ಆದರೆ, ನಾನು ಮೊದಲಿದ್ದ ಹಾಗೆಯೇ ಇದ್ದೇನೆ. ಹುಟ್ಟು ಗುಣ ಸುಟ್ಟರೂ ಹೋಗಲ್ಲ. ನಾನು ಯಾವುದೂ ಕೇಳದೇ ಇದ್ದಂಥ ಸಂದರ್ಭದಲ್ಲಿ ಅಥಣಿ ಕ್ಷೇತ್ರದ ಜನ ಎರಡು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ.

ನಾನು ಕೇಳದಿದ್ದರೂ ಬಿಜೆಪಿಯಲ್ಲಿ ಗೌರವದಿಂದ ಹಲವು ಜವಾಬ್ದಾರಿ ಕೊಟ್ಟಿದ್ದಾರೆ. ಮುಂದೆಯೂ ಸಹ ನನ್ನ ಕೇಳದೇ ಜವಾಬ್ದಾರಿ ಕೊಡಬಹುದು. ಕೇಳಿ ಪಡೆಯುವುದಕ್ಕಿಂತಲೂ ಕೊಟ್ಟಿದ್ದನ್ನು ತೆಗೆದುಕೊಳ್ಳುವುದರಲ್ಲಿ ಬಹಳ ಖುಷಿ ಇದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಅನ್ಯಾಯ ಆಗಿದೆಯೆಂದು ನಾನು ಭಾವಿಸುವುದಿಲ್ಲ. ನನ್ನ ಮೇಲಿನ ಅಭಿಮಾನದಿಂದ ಕೆಲವರು ಮಾತನಾಡ್ತಾರೆ, ಕೆಲವರು ಬೈತಾರೆ ಎಂದರು.

ಅಥಣಿಯಲ್ಲಿ ಬಿಜೆಪಿ ಕಟ್ಟುತ್ತಿದ್ದೇವೆ: ಅಥಣಿ ಕ್ಷೇತ್ರದಲ್ಲಿ ಸವದಿ ಹಾಗೂ ಕುಮಟಳ್ಳಿ ಬೆಂಬಲಿಗರ ಮಧ್ಯೆ ವೈಮನಸ್ಸು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2023ರ ಏಪ್ರಿಲ್, ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಹಲವಾರು ಚುನಾವಣೆಗಳು ಬರಲಿವೆ. ನಾನು, ಲಕ್ಷ್ಮಣ ಸವದಿ ಅಥಣಿಯಲ್ಲಿ ಬಿಜೆಪಿ ಗಟ್ಟಿಯಾಗಿ ಬೆಳೆಸುತ್ತಿದ್ದೇವೆ ಎಂದು ತಿಳಿಸಿದರು.

ಓದಿ: Missing 2000 crores.. ಬೆಂಗಳೂರಿನಾದ್ಯಂತ ಆಪ್​ನಿಂದ ರಸ್ತೆ 'ಗುಂಡಿಗಳ ಪೂಜೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.