ETV Bharat / state

ಗೋಕಾಕ್‌ನಲ್ಲಿ ಮಂಗಳವಾರದಿಂದ 10 ದಿನಗಳ ಕಾಲ ಲಾಕ್‌ಡೌನ್: ರಮೇಶ್​ ಜಾರಕಿಹೊಳಿ - ramesh jarakiholi is in belgavi

ತಾಲೂಕು ಪಂಚಾಯತಿ ಆವರಣದಲ್ಲಿ ಕೋವಿಡ್ ಅಧಿಕಾರಿಗಳೊಂದಿಗಿನ ಟಾಸ್ಕ್ ಫೋರ್ಸ್ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಯಲು ಮಂಗಳವಾರ ರಾತ್ರಿ 8 ಗಂಟೆಯಿಂದ ಗೋಕಾಕ್‌ ತಾಲೂಕಿನಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗುವುದು ಎಂದರು.

ramesh-jarakiholi
ಮಂಗಳವಾರದಿಂದ 10 ದಿನಗಳ ಕಾಲ ಲಾಕ್‌ಡೌನ್
author img

By

Published : Jul 12, 2020, 3:26 PM IST

Updated : Jul 12, 2020, 3:35 PM IST

ಬೆಳಗಾವಿ : ಬೆಂಗಳೂರು ಮಾದರಿಯಲ್ಲೇ ಗೋಕಾಕ್‌ ತಾಲೂಕನ್ನೂ 10 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.

ತಾಲೂಕು​ ಪಂಚಾಯತಿ ಆವರಣದಲ್ಲಿ ಕೋವಿಡ್ ಅಧಿಕಾರಿಗಳೊಂದಿಗಿನ ಟಾಸ್ಕ್ ಫೋರ್ಸ್ ಸಭೆಯ ಬಳಿಕ ಮಾತನಾಡಿದ ಅವರು, ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಯಲು ಮಂಗಳವಾರ ರಾತ್ರಿ 8 ಗಂಟೆಯಿಂದ ಗೋಕಾಕ್‌ ತಾಲೂಕಿನಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗುವುದು ಎಂದರು.

ಗೋಕಾಕ್ ಜನರು ಸ್ವಯಂಪ್ರೇರಿತವಾಗಿ ಲಾಕ್‌ಡೌನ್‌ಗೆ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಸೋಂಕು ನಿಯಂತ್ರಣ ಸಂಬಂಧ ಗೋಕಾಕ್‌ನಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರೆಸಲಾಗುವುದು. ಈ ವೇಳೆ ಅಧಿಕಾರಿಗಳ ಸಮಿತಿ ರಚಿಸಿ ಹಾಲು, ತರಕಾರಿ ಅಗತ್ಯ ಸೇವೆ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.

ಮಂಗಳವಾರದಿಂದ 10 ದಿನಗಳ ಕಾಲ ಲಾಕ್‌ಡೌನ್: ಜಾರಕಿಹೊಳಿ

ಕೆಲ ಖಾಸಗಿ ವೈದ್ಯರು ಅಸೋಸಿಯೇಷನ್ ಮಾಡಿಕೊಂಡು ಜನರನ್ನು ಬ್ಲಾಕ್​ಮೇಲ್​ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಬ್ಲಾಕ್​ಮೇಲ್ ಮಾಡಿದ ಖಾಸಗಿ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಸಚಿವರು ಹೇಳಿದರು.

Last Updated : Jul 12, 2020, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.